Vijay and Sangeetha: ವಿಜಯ್ - ಸಂಗೀತಾ ದಾಂಪತ್ಯದಲ್ಲಿ ಬಿರುಕು! ಇದಕ್ಕೆಲ್ಲ ರಶ್ಮಿಕಾನೇ ಕಾರಣ ಎಂದಿದ್ಯಾಕೆ?  

Thalapathy Vijay and wife Sangeetha : ಸೌತ್ ಸೂಪರ್ ಸ್ಟಾರ್ ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ದಂಪತಿಗೆ ಮದುವೆಯಾಗಿ 22 ವರ್ಷಗಳಾಗಿವೆ. ವಾರಿಸು ಮ್ಯೂಸಿಕ್ ಲಾಂಚ್‌ಗೆ ಸಂಗೀತಾ ಹಾಜರಾಗದಿರುವುದು ಈ ವದಂತಿಗಳಿಗೆ ಪುಷ್ಠಿ ಸಿಕ್ಕಿದೆ. 

Written by - Chetana Devarmani | Last Updated : Jan 8, 2023, 02:15 PM IST
  • ಸೌತ್ ಸೂಪರ್ ಸ್ಟಾರ್ ದಳಪತಿ ವಿಜಯ್
  • ವಿಜಯ್ - ಸಂಗೀತಾ ದಾಂಪತ್ಯದಲ್ಲಿ ಬಿರುಕು
  • ಇದಕ್ಕೆಲ್ಲ ರಶ್ಮಿಕಾನೇ ಕಾರಣ ಎಂದಿದ್ಯಾಕೆ?
Vijay and Sangeetha: ವಿಜಯ್ - ಸಂಗೀತಾ ದಾಂಪತ್ಯದಲ್ಲಿ ಬಿರುಕು! ಇದಕ್ಕೆಲ್ಲ ರಶ್ಮಿಕಾನೇ ಕಾರಣ ಎಂದಿದ್ಯಾಕೆ?    title=

Thalapathy Vijay and wife Sangeetha divorce: ಸೌತ್ ಸೂಪರ್ ಸ್ಟಾರ್ ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ದಂಪತಿಗೆ ಮದುವೆಯಾಗಿ 22 ವರ್ಷಗಳಾಗಿವೆ. ವಾರಿಸು ಮ್ಯೂಸಿಕ್ ಲಾಂಚ್‌ಗೆ ಸಂಗೀತಾ ಹಾಜರಾಗದಿರುವುದು ಈ ವದಂತಿಗಳಿಗೆ ಪುಷ್ಠಿ ಸಿಕ್ಕಿದೆ. ಕಾಲಿವುಡ್ ಅಂಗಳದಲ್ಲಿ ಸದ್ಯ ಈ ವಿಚಾರ ಸೆನ್ಸೆಷನ್ ಕ್ರಿಯೆಟ್ ಮಾಡಿದೆ. ವಿಜಯ್ ದಳಪತಿ ಮತ್ತು ಸಂಗೀತಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಈಗ ಇಬ್ಬರ ಡಿವೋರ್ಸ್ ವದಂತಿಯ ನಡುವೆ ರಶ್ಮಿಕಾ ಮಂದಣ್ಣ ಹೆಸರು ಕೇಳಿಬಂದಿದೆ. ವಿಜಯ್ - ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಲು ರಶ್ಮಿಕಾನೇ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ : Kichcha Sudeep : ಚಿಕ್ಕಬಳ್ಳಾಪುರ ಉತ್ಸವದಲ್ಲಿ 'ಕಿಚ್ಚ ಸುದೀಪ್ ಹವಾ', ಹೇಗಿದೆ ನೋಡಿ!

ಸಿನಿರಂಗದಲ್ಲಿ ಸದ್ಯ ಈ ವಿಚಾರ ಹಾಟ್ ಟಾಪಿಕ್ ಆಗಿದೆ. ಕೆಲವು ಮೂಲಗಳ ಪ್ರಕಾರ, ವಿಜಯ್, ಸಂಗೀತಾ ಈಗಾಗಲೇ ಡಿವೋರ್ಸ್ ಪಡೆದಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ವಿಜಯ್‌ ವೈವಾಹಿಕ ಜೀವನದ ಈ ಸ್ಥಿತಿಗೆ ರಶ್ಮಿಕಾ ಕಾರಣ ಎಂದು ನೆಟ್ಟಿಗರು ದೂರುತ್ತಿದ್ದಾರೆ. ರಶ್ಮಿಕಾಳಿಂದಲೇ ವಿಜಯ್‌ ಮತ್ತು ಸಂಗೀತಾ ದಾಂಪತ್ಯ ಜೀವನ ಹಾಳಾಗಿದೆ ಎಂದು ನೆಟ್ಟಿಜನ್ಸ್‌ ಆರೋಪಿಸುತ್ತಿದ್ದಾರೆ. ಆಕೆ ಕಾಲಿಟ್ಟ ಕಡೆಯೆಲ್ಲ ಸಮಸ್ಯೆ ಸೃಷ್ಟಿಯಾಗುತ್ತೆ. ರಶ್ಮಿಕಾ ಅವರದ್ದು ಐರೆನ್‌ ಲೆಗ್‌ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ. 

ವಾರಿಸು ಸಿನಿಮಾದಲ್ಲಿ ವಿಜಯ್‌ಗ ಜೊತೆ ನಾಯಕಿಯಾಗಿ ರಶ್ಮಿಕಾ ನಟಿಸಿದ್ದು, ಸದ್ಯದಲ್ಲೇ ಸಿನಿಮಾ ರಿಲೀಸ್‌ ಆಗಲಿದೆ. ಈ ಮಧ್ಯೆ ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ವಿಚ್ಛೇದನದ ಸುದ್ದಿ ವೈರಲ್‌ ಆಗುತ್ತಿದೆ. 23 ವರ್ಷಗಳ ದಾಂಪತ್ಯಕ್ಕೆ ಬ್ರೇಕ್ ಬೀಳಲು ಕಾರಣವೇನು ಎಂಬುದರ ಬಗ್ಗೆ ಎಲ್ಲರೂ ಚರ್ಚಿಸುತ್ತಿದ್ದಾರೆ. 

ಇದನ್ನೂ ಓದಿ : Yash Birthday : ರಾಕಿಂಗ್‌ ಸ್ಟಾರ್‌ ಯಶ್‌ ಪಡೆದ ಮೊದಲ ಸಂಭಾವನೆ ಎಷ್ಟು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News