ನವದೆಹಲಿ: ಬಾಲಿವುಡ್ ಖ್ಯಾತ ನಟಿ ಆಲಿಯಾ ಭಟ್(Alia Bhatt) ಅಭಿನಯದ ಬಹುನಿರೀಕ್ಷಿತ ಚಿತ್ರ ‘RRR’ನ ಟ್ರೇಲರ್ ಅನ್ನು ಇಂದು (ಡಿಸೆಂಬರ್ 9) ಬಿಡುಗಡೆ ಮಾಡಲಾಗಿದೆ.  ಈ ಸಮಯದಲ್ಲಿಇಡೀ ಚಿತ್ರತಂಡ ಒಟ್ಟಿಗೆ ಕಾಣಿಸಿಕೊಂಡಿತು. ಎಲ್ಲಾ ಸೆಲೆಬ್ರಿಟಿಗಳ ನಡುವೆ ಆಲಿಯಾ ನೋಡುಗರ ಗಮನ ಸೆಳೆದರು. ಅವರು ಕೆಂಪು ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ರಣಬೀರ್‌ಗೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳಿದಾಗ ನಟಿ ಮತ್ತಷ್ಟು ಸುಂದರವಾಗಿ ಕಾಣಲಾರಂಭಿಸಿದರು.


COMMERCIAL BREAK
SCROLL TO CONTINUE READING

‘R’ ಅಕ್ಷರದ ಜೊತೆಗಿನ ನಂಟು


ಆಲಿಯಾ ಭಟ್ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕೆಂಪು ಸೀರೆಯನ್ನು ಧರಿಸಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಎಸ್.ಎಸ್.ರಾಜಮೌಳಿ(SS Rajamouli) ನಿರ್ದೇಶನದ ಬಹು ನಿರೀಕ್ಷಿತ ಹಾಗೂ ಬಹುಕೋಟಿ ವೆಚ್ಚದ ‘RRR’ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಆಲಿಯಾ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಅವರು ರಾಮ್ ಚರಣ್, ಜೂನಿಯರ್ ಎನ್​ಟಿಆರ್, ಅಜಯ್ ದೇವಗನ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಟ್ರೇಲರ್ ಬಿಡುಗಡೆ ನಂತರ ಇಡೀ ಚಿತ್ರತಂಡ ಪತ್ರಕರ್ತರೊಂದಿಗೆ ಸಂವಾದ ನಡೆಸಿತು. ಕಾರ್ಯಕ್ರಮದಲ್ಲಿ ರಾಜಮೌಳಿ, ಅಜಯ್​ ದೆವ್​ಗನ್(Ajaya Devgan)​, ಆಲಿಯಾ ಭಟ್​, ಜೂನಿಯರ್​ ಎನ್​ಟಿಆರ್​(J.NTR) ವೇದಿಕೆ ಮೇಲಿದ್ದರು. ಈ ವೇಳೆ ಪತ್ರಕರ್ತನೊಬ್ಬ ಆಲಿಯಾ ಬಳಿ ‘ಆರ್’ ಪದದ ಬಗ್ಗೆ ಕೇಳಿದ್ದಾರೆ.


ಇದನ್ನೂ ಓದಿ: Deepika Padukone Work Out Video:ದೀಪಿಕಾ ವರ್ಕೌಟ್ ಮಾಡಲು ಇದೇ ನಿಜವಾದ ಕಾರಣವಂತೆ..!


ನಾಚಿ ನಿರಾದ ಆಲಿಯಾ ಭಟ್!



ಪತ್ರಕರ್ತನೊಬ್ಬ ನಟ ರಣಬೀರ್​ ಕಪೂರ್​(Ranbir Kapoor) ಅವರ ಹೆಸರು ಉಲ್ಲೇಖಿಸುವಂತೆ ‘ಆರ್’ ಎಂಬ ಅಕ್ಷರವು ನಿಮ್ಮ ಜೀವನದಲ್ಲಿ ಅದೃಷ್ಟವೇ ಎಂದು ಕೇಳಿದರು. ಇದನ್ನು ಕೇಳಿ ಅಲ್ಲಿದ್ದವರು ನಗತೊಡಗಿದರು. ಇದೇ ಸಮಯದಲ್ಲಿ ಆಲಿಯಾ ಭಟ್ ಕೂಡ ನಾಚಿಕೆಪಟ್ಟುಕೊಂಡಿದ್ದಾರೆ. ‘ಆರ್’ ಪದ ಕೇಳಿದ ತಕ್ಷಣವೇ ಆಲಿಯಾರ ಮುಖ ಕೆಂಪೇರಿದ್ದನ್ನು ಕಾಣಬಹುದು. ‘ಈ ಪ್ರಶ್ನೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಇದಕ್ಕೆ ನನ್ನ ಬಳಿ ಉತ್ತರವಿಲ್ಲ’ವೆಂದು ಜಾರಿಕೊಳ್ಳಲು ಯತ್ನಿಸಿದರು. ಆದರೆ ಅಲ್ಲಿ ನೆರೆದಿದ್ದವರು ಉತ್ತರ ಹೇಳಬೇಕೆಂದು ಕೇಳಿಕೊಂಡಾಗ ‘ಹೌದು ‘ಆರ್’​ ವರ್ಣಮಾಲೆಯ ಸುಂದರ ಅಕ್ಷರ. ಅದೇ ರೀತಿ ‘ಎ’ ಕೂಡ ಅಷ್ಟೇ ಸುಂದರ ಅಕ್ಷರ’ ಎಂದು ಉತ್ತರಿಸಿದ್ದಾರೆ.


ಕಳೆದ ಕೆಲವು ದಿನಗಳ ಹಿಂದೆ ಆಲಿಯಾ ಹಾಗೂ ರಣಬಿರ್ ತಾವು ರಿಲೇಷನ್​ ಶಿಪ್​ನಲ್ಲಿರುವುದಾಗಿ ಖಚಿತಪಡಿಸಿಕೊಂಡಿದ್ದರು. ಈ ಜೋಟಿ ಒಟ್ಟಿಗೆ ಇರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿತ್ತು. ಅಂದಕೊಂಡಂತೆ ಎಲ್ಲವೂ ಆಗಿದ್ದರೆ ಈ ವರ್ಷ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ ಸದ್ಯಕ್ಕೆ ಮದುವೆ ದಿನಾಂಕ ಮುಂದೂಡಲ್ಪಟ್ಟಿದ್ದು, ಶೀಘ್ರವೇ ಈ ಜೋಡಿ ಸಪ್ತಪದಿ ತುಳಿಯಲಿದೆ.


‘RRR’ ಟ್ರೇಲರ್ ಗೆ ಅದ್ಭುತ ರೆಸ್ಪಾನ್ಸ್


‘ಆರ್‌ಆರ್‌ಆರ್‌’ನ ಟ್ರೇಲರ್(RRR Movie) ನೋಡಿಯೇ ಈ ಚಿತ್ರದ ಕಥೆ ಬ್ರಿಟಿಷರ ಆಳ್ವಿಕೆಯನ್ನು ಆಧರಿಸಿದೆ ಎಂದು ಊಹಿಸಬಹುದು. ಇದರಲ್ಲಿ ಹಲವು ಆ್ಯಕ್ಷನ್ ದೃಶ್ಯಗಳಿವೆ. ರಾಜಮೌಳಿ ನಿರ್ದೇಶನದ ಚಿತ್ರಕ್ಕಾಗಿ ಪ್ರೇಕ್ಷಕರು ಬಹಳ ದಿನಗಳಿಂದ ಕಾಯುತ್ತಿದ್ದರು. ಈ ಚಿತ್ರ 2022ರ ಜನವರಿ 7ರಂದು ಪ್ರಪಂಚಾದ್ಯಂತ  ಬಿಡುಗಡೆಯಾಗಲಿದೆ. ಈ ಚಿತ್ರವು ಇಬ್ಬರು ಭಾರತೀಯ ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದೆ. ಜೂನಿಯರ್ NTR ಕೊಮರಂ ಭೀಮ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದೇ ರೀತಿ ರಾಮ್ ಚರಣ್ ಅಲ್ಲೂರಿ ಸೀತಾರಾಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  


ಇದನ್ನೂ ಓದಿ:  'ಅಪ್ಪು ಎಂದೆದಿಗೂ ಶಾಶ್ವತ'- ಬಾಲ್ಯದ ಫೋಟೋ ಹಂಚಿಕೊಂಡ ಅರ್ಜುನ್ ಸರ್ಜಾ


ಗುರುವಾರ ಟ್ರೇಲರ್​ ಬಿಡುಗಡೆಯಾಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ರಾಜಮೌಳಿ ನಿರ್ದೇಶನದ ಬಿಗ್​ಬಜೆಟ್​ ಸಿನಿಮಾದಲ್ಲಿ ಆಧುನಿಕ ಗ್ರಾಫಿಕ್ಸ್ ಹಾಗೂ ಬೃಹತ್​ ಸೆಟ್​ಗಳು ನೋಡುಗರ ಗಮನ ಸೆಳೆದಿವೆ. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಹಾಡುಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾವನ್ನು ತರೆಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.   


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.