ಬಿಡುಗಡೆಯಾಯಿತು 'RRR ಟ್ರೇಲರ್ , ರಿಲೀಜ್ ಆಗುತ್ತಿದ್ದಂತೆ ಸಿಕ್ಕಿದೆ ಭಾರೀ ರೆಸ್ಪಾನ್ಸ್

ರಾಜಮೌಳಿ ಅವರ ಬಹು ನಿರೀಕ್ಷಿತ ಚಿತ್ರ 'RRR' ಟ್ರೈಲರ್ ಬಿಡುಗಡೆಯಾಗಿದೆ. ಟ್ರೇಲರ್‌ನಲ್ಲಿ ರಾಮ್ ಚರಣ್ ತೇಜ, ಜೂನಿಯರ್ ಎನ್‌ಟಿಆರ್, ಅಜಯ್ ದೇವಗನ್, ಆಲಿಯಾ ಭಟ್ ಪ್ರಬಲ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Written by - Ranjitha R K | Last Updated : Dec 9, 2021, 03:42 PM IST
  • RRR ಚಿತ್ರದ ಟ್ರೇಲರ್ ರಿಲೀಜ್
  • ಜನವರಿ 7ಕ್ಕೆ ಚಿತ್ರ ಬಿಡುಗಡೆ
  • ಈಗಾಗಲೇ 900 ಕೋಟಿ ವ್ಯವಹಾರ ಮಾಡಿರುವ ಚಿತ್ರ
ಬಿಡುಗಡೆಯಾಯಿತು 'RRR ಟ್ರೇಲರ್ ,  ರಿಲೀಜ್ ಆಗುತ್ತಿದ್ದಂತೆ ಸಿಕ್ಕಿದೆ ಭಾರೀ ರೆಸ್ಪಾನ್ಸ್ title=
RRR ಚಿತ್ರದ ಟ್ರೇಲರ್ ರಿಲೀಜ್ (photo instagram)

ನವದೆಹಲಿ : ಆಲಿಯಾ ಭಟ್  (Alia Bhatt) ಮತ್ತು ಅಜಯ್ ದೇವಗನ್ (Ajay Devgn) ಅಭಿನಯದ 'RRR' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಟ್ರೇಲರ್ ಲಾಂಚ್ ಆದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ (Social media) ಭಾರೀ ಸದ್ದು ಮಾಡಿದೆ. ಚಿತ್ರದ ಟ್ರೇಲರ್ ಬಹಳ ಸ್ಟ್ರಾಂಗ್ ಆಗಿ ಮೂಡಿ ಬಂದಿದೆ. ರಾಜಮೌಳಿ ಮ್ಯಾಜಿಕ್ ಟ್ರೇಲರ್  ನಲ್ಲಿ ಎದ್ದು ಕಾಣುತ್ತಿದೆ.  

ಟ್ರೈಲರ್ ಬಿಡುಗಡೆ : 
ರಾಜಮೌಳಿ  (SS Rajamouli) ಅವರ ಬಹು ನಿರೀಕ್ಷಿತ ಚಿತ್ರ 'RRR' ಟ್ರೈಲರ್ ಬಿಡುಗಡೆಯಾಗಿದೆ. ಟ್ರೇಲರ್‌ನಲ್ಲಿ ರಾಮ್ ಚರಣ್ ತೇಜ, ಜೂನಿಯರ್ ಎನ್‌ಟಿಆರ್ (Junior NTR), ಅಜಯ್ ದೇವಗನ್, ಆಲಿಯಾ ಭಟ್ (Alia Bhatt) ಪ್ರಬಲ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲಿಯಾ ಭಟ್ ಮತ್ತು ಅಜಯ್ ದೇವಗನ್ ಅನ್ನು ಟ್ರೈಲರ್‌ನಲ್ಲಿ ಒಂದು ಕ್ಷಣ ಮಾತ್ರ ನೋಡಬಹುದಾಗಿದೆ. ಬ್ರಿಟಿಷ್ ಆಳ್ವಿಕೆಯೊಂದಿಗಿನ ಯುದ್ಧದ ಈ ಕಥೆಯಲ್ಲಿ ಸ್ನೇಹ, ವಂಚನೆ, ಇಮೋಷನ್, ಸ್ಟ್ರಾಣಗ್ ಸಂಭಾಷಣೆಗಳು ಮತ್ತು ಆಕ್ಶನ್ ಎಲ್ಲವನ್ನೂಕಾಣಬಹುದು. 

ಇದನ್ನೂ ಓದಿ : Samantha in Pushpa:'ಪುಷ್ಪ' ಐಟಮ್​ ಸಾಂಗ್​ನಲ್ಲಿ ಸಮಂತಾ ಲುಕ್ ನೋಡಿ ಬೆರಗಾದ ಅಭಿಮಾನಿಗಳು

ಚಿತ್ರ ಜನವರಿ 7 ರಂದು ಚಿತ್ರ ಬಿಡುಗಡೆ : 
'RRR' ನ ಟ್ರೈಲರ್ ಒಂದು ಅದ್ಭುತ ದೃಶ್ಯದೊಂದಿಗೆ ಪ್ರಾರಂಭವಾಗುತ್ತದೆ. ಬುಡಕಟ್ಟು ಹುಡುಗಿಯನ್ನು ಬ್ರಿಟಿಷರು ಆಕೆಯ ಕುಟುಂಬದಿಂದ ಬಲವಂತವಾಗಿ ಕರೆದುಕೊಂಡು ಹೋಗುವುದನ್ನು ನೋಡಬಹುದು. ಚಿತ್ರವು ಸ್ವಾತಂತ್ರ್ಯ ಪೂರ್ವದ ಕಾಲವನ್ನು ಬಿಂಬಿಸುತ್ತದೆ. 'RRR' ಇಬ್ಬರು ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಜೀವನ ಆಧಾರಿತ ಚಿತ್ರ. ಈ ಇಬ್ಬರೂ ಬ್ರಿಟಿಷ್ ರಾಜ್ ಮತ್ತು ಹೈದರಾಬಾದ್ ನಿಜಾಮರ ವಿರುದ್ಧ ಹೋರಾಡಿದ್ದರು. ಇದೇ ವೇಳೆ, ಟ್ರೇಲರ್‌ಗೂ ಮುನ್ನವೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿವೆ. ಚಿತ್ರವು ಜನವರಿ 7, 2022 ರಂದು ಬಿಡುಗಡೆಯಾಗಲಿದೆ.

 
 
 
 

 
 
 
 
 
 
 
 
 
 
 

A post shared by Ajay Devgn (@ajaydevgn)

 

900 ಕೋಟಿ ವ್ಯವಹಾರ ಮಾಡಿರುವ ಚಿತ್ರ : 
ರಾಜಮೌಳಿ (SS Rajamouli) ಅವರ ‘ಆರ್ ಆರ್ ಆರ್’ ಚಿತ್ರದ ಉತ್ತರ ಭಾರತದ ಹಕ್ಕು 140 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಉತ್ತರ ಭಾರತದ ಥಿಯೇಟ್ರಿಕಲ್ ರೈಟ್ಸ್ ಅನ್ನು ಪೆನ್ ಇಂಡಿಯಾ ದಾಖಲೆ ಬೆಲೆಗೆ ಖರೀದಿಸಿದೆ. ಅವರು ಉತ್ತರ ಭಾರತದ ಥಿಯೇಟ್ರಿಕಲ್, ಎಲೆಕ್ಟ್ರಾನಿಕ್, ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳನ್ನು ಸಹ ಖರೀದಿಸಿದ್ದಾರೆ. ಈ ಒಪ್ಪಂದದ ನಂತರ, ಚಿತ್ರವು ಬಿಡುಗಡೆಗೆ ಮುನ್ನವೇ 890 ಕೋಟಿ ರೂಪಾಯಿ ವ್ಯವಹಾರ ಮಾಡಿದೆ. ಅದೇನೆಂದರೆ, ಚಿತ್ರ ಬಿಡುಗಡೆಗೂ ಮುನ್ನವೇ ಸುಮಾರು 900 ಕೋಟಿ ಬ್ಯುಸಿನೆಸ್ ಮಾಡಿದೆ. ಇದರೊಂದಿಗೆ ಚಿತ್ರ ಬಾಹುಬಲಿ 2 ಅನ್ನು ಹಿಂದಿಕ್ಕಿದೆ. ಇನ್ನು 'RRR' ಬಾಹುಬಲಿ 2 (Bahubali 2) ರ ಎಲ್ಲಾ ದಾಖಲೆಗಳನ್ನು ಮುರಿಯಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ : Google Search 2021:ಅಗ್ರಸ್ಥಾನದಲ್ಲಿ 'ಜೈ ಭೀಮ್', ಟ್ರೆಂಡ್ ಸೃಷ್ಟಿಸಿದ್ದ ಸೆಲೆಬ್ರಿಟಿಗಳಿವರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News