Ranbir kapoor- Alia bhatt : ವೆಡ್ಡಿಂಗ್ ಆನಿವರ್ಸರಿಗೆ ವಿಶೇಷ ಪೋಸ್ಟ್ ಶೇರ್ ಮಾಡಿದ ಆಲಿಯಾ ಭಟ್..!
Ranbir kapoor- Alia bhatt : ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಆಲಿಯಾ ರಣಬೀರ ಕಪೂರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮೂರು ಸ್ಪೇಷಲ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Alia Ranbir Wedding anniversary : ಬಾಲಿವುಡ್ ಕ್ಯೂಟ್ ಕಪಲ್‌ಗಳ ಪಟ್ಟಿಯಲ್ಲಿ ಆಲಿಯಾ ಭಟ್ ರಣಬೀರ್ ಕಪೂರ್ ಜೋಡಿ ಕೂಡ ಒಂದು. ಸದ್ಯ ಈ ಜೋಡಿ ಮೊದಲ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿದ್ದು, ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅಭಿಮಾನಿಗಳಿಗಾಗಿ ವಿಶೇಷ ಪೋಸ್ಟ್ ಅನ್ನು ಹಂಚಿಕೊಂಡಿದೆ.
ಆಲಿಯಾ ಭಟ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, ತಮ್ಮ ಮದುವೆಯ ಹಲ್ದಿ ಸಮಾರಂಭದ ಫೋಟೋ ಸೇರಿದಂತೆ ಮೂರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆಫ್ರಿಕಾದಲ್ಲಿ ರಣಬೀರ್ ಆಲಿಯಾಗೆ ಪ್ರಪೋಸ್ ಮಾಡಿದ್ದು ಹಾಗೂ ಪಾರ್ಟಿಯಲ್ಲಿ ಇಬ್ಬರು ಅಪ್ಪಿಕೊಂಡಿರುವ ಬ್ಲ್ಯಾಕ್ ಆಂಡ್ ವೈಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಮೂರು ಚಿತ್ರಗಳಲ್ಲಿ ಜೋಡಿ ತುಂಬಾ ಕ್ಯೂಟ್ ಆಗಿ ಕಾಣುತ್ತಿದೆ.
ಸಲ್ಮಾನ್ ಜೊತೆ ಪೂಜಾ ಹೆಗ್ಡೆ ಡೇಟಿಂಗ್..! ಕೊನೆಗೂ ಸತ್ಯ ಬಿಚ್ಚಿಟ್ಟ ಕನ್ನಡತಿ
ಫೋಟೋ ನೋಡಿದ್ರೆ ಇಬ್ಬರು ಪರಸ್ಪರ ಎಷ್ಟು ಲವ್ ಮಾಡ್ತಾರೆ ಅಂತ ಗೊತ್ತಾಗುತ್ತದೆ. ಮೊದಲ ಚಿತ್ರದಲ್ಲಿ ರಣಬೀರ್ ಆಲಿಯಾ ಅವರನ್ನು ಅಪ್ಪಿಕೊಂಡಿರುವುದನ್ನು ಕಾಣಬಹುದು. ಈ ಫೋಟೋವನ್ನು ವಿವಾಹದ ಮೊದಲು ನಡೆಯುವ ಹಲ್ದಿ ಸಮಾರಂಭದಲ್ಲಿ ತೆಗೆಯಲಾಗಿದೆ. ಆಲಿಯಾ ಹಳದಿ ದುಪಟ್ಟಾದಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಎರಡನೇ ಫೋಟೋ ಕೀನ್ಯಾದ ಮಸಾಯಿ ಮಾರಾ ರಾಷ್ಟ್ರೀಯ ಮೀಸಲು ಪ್ರದೇಶದಲ್ಲಿ ತೆಗೆಯಲಾಗಿದ್ದು, ರಣಬೀರ್ ಆಲಿಯಾಗೆ ಲವ್ ಪ್ರಪೋಸ್ ಮಾಡುತ್ತಿರುವುದನ್ನು ನೋಡಬಹುದು.
ಇನ್ನು ಮೂರನೇ ಫೋಟೋ ವಿಚಾರಕ್ಕೆ ಬಂದ್ರೆ, ಮಗಳು ರಾಹಾ ಕಪೂರ್ ಜನಿಸಿದ ಕೇವಲ ಒಂದು ತಿಂಗಳ ನಂತರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದಾಗ ತೆಗೆದ ಫೋಟೋ. ಇನ್ನು ಕ್ಯೂಟ್ ಕಪಲ್ ಮೊದಲ ವಿವಾಹ ವಾರ್ಷಿಕೋತ್ಸವಕ್ಕೆ ಮೌನಿ ರಾಯ್, ರಾಹುಲ್ ವೈದ್ಯ ಸೇರಿದಂತೆ ಬಿಟೌನ್ ಸ್ಟಾರ್ ವಿಶ್ ಮಾಡುತ್ತಿದ್ದಾರೆ. ಅಭಿಮಾನಿಗಳು ಸಹ ಕಾಮೆಂಟ್ ಮೂಲಕ ಆಲಿಯಾ ರಣಬೀರ್ ಜೋಡಿಗೆ ವೆಡ್ಡಿಂಗ್ ಆನಿವರ್ಸರಿ ವಿಶ್ ತಿಳಿಸುತ್ತಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.