Pooja Hegde love : ಸಲ್ಮಾನ್‌ ಜೊತೆ ಪೂಜಾ ಹೆಗ್ಡೆ ಡೇಟಿಂಗ್‌..! ಕೊನೆಗೂ ಸತ್ಯ ಬಿಚ್ಚಿಟ್ಟ ಕನ್ನಡತಿ

Pooja Hegde on dating : ಸಲ್ಮಾನ್ ಖಾನ್ ಪೂಜಾ ಹೆಗ್ಡೆ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಇದೀಗ ಈ ವಿಚಾರವಾಗಿ ಮೌನ ಮುರಿದಿರುವ ಚೆಲುವೆ, ಡೇಟಿಂಗ್‌ ಕುರಿತು ಸ್ಪಷ್ಟತೆ ನೀಡಿದ್ದಾರೆ. 

Written by - Krishna N K | Last Updated : Apr 14, 2023, 01:54 PM IST
  • ಸಲ್ಮಾನ್ ಖಾನ್ ಪೂಜಾ ಹೆಗ್ಡೆ ಜೊತೆ ಡೇಟಿಂಗ್.
  • ಸೋಷಿಯಲ್‌ ಮೀಡಿಯಾದಲ್ಲಿ ಸ್ಟಾರ್‌ ಜೋಡಿ ಲವ್‌ ಮ್ಯಾಟರ್‌ ವೈರಲ್‌.
  • ಡೇಟಿಂಗ್‌ ಕುರಿತು ಸ್ಪಷ್ಟತೆ ನೀಡಿ ಪೂಜಾ.
Pooja Hegde love : ಸಲ್ಮಾನ್‌ ಜೊತೆ ಪೂಜಾ ಹೆಗ್ಡೆ ಡೇಟಿಂಗ್‌..! ಕೊನೆಗೂ ಸತ್ಯ ಬಿಚ್ಚಿಟ್ಟ ಕನ್ನಡತಿ title=

Pooja Hegde Salman Khan dating : ಸ್ಟಾರ್‌ ಜೋಡಿಗಳು ಸುಮ್ಮನೆ ಜೊತೆಯಾಗಿ ಒಂದು ಫೋಟೋಗೆ ಪೋಸ್‌ ಕೊಟ್ಟರೆ ಸಾಕು ನೆಟ್ಟಿಗರು ಅಲ್ಲೊಂದು ಕಥೆಯನ್ನೇ ಸೃಷ್ಟಿಸಿ ಟ್ರೋಲ್‌ ಮಾಡ್ತಾರೆ. ಕೆಲವು ದಿನಗಳ ಹಿಂದೆ ಪ್ರಭಾಸ್‌ ಮತ್ತು ಕೃತಿ ಸನೊನ್ ಇಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ, ಮದುವೆ ಆಗ್ತಾರೆ ಎನ್ನುವ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಈ ಪಟ್ಟಿಗೆ ಪೂಜಾ ಹೆಗ್ಡೆ ಮತ್ತು ಸಲ್ಮಾನ್‌ ಖಾನ್‌ ಲವ್‌ ಮ್ಯಾಟರ್‌ ಕೂಡ ಸೇರಿತ್ತು.

ಹೌದು... ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಪೂಜಾ ಹೆಗ್ಡೆ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಇದೀಗ ಈ ವಿಚಾರವಾಗಿ ಮೌನ ಮುರಿದಿರುವ ಚೆಲುವೆ, ಡೇಟಿಂಗ್‌ ಕುರಿತು ಸ್ಪಷ್ಟತೆ ನೀಡಿದ್ದಾರೆ. ತಮ್ಮ ಮುಂಬರುವ ಸಿನಿಮಾ ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ ಪ್ರಚಾರದ ಸಮಯದಲ್ಲಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ರಾಧಿಕಾ ಮೀಟ್ಸ್‌ ರಾಕಿಭಾಯ್‌..! ಸ್ಪೇಷಲ್‌ ವಿಡಿಯೋ ಹಂಚಿಕೊಂಡ ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ

ʼರೂಮರ್ಸ್‌ ಕುರಿತು ನಾನು ಏನು ಹೇಳಲಿ..? ನಾನು ಒಂಟಿ. ಒಂಟಿಯಾಗಿರಲು ಇಷ್ಟಪಡುತ್ತೇನೆ. ನನ್ನ ವೃತ್ತಿಜೀವನದ ಮೇಲೆ ಪ್ರಾಮಾಣಿಕವಾಗಿ ಗಮನಹರಿಸುತ್ತಿದ್ದೇನೆ. ಈ ವದಂತಿಗಳನ್ನು ಕುಳಿತು ಪರಿಹರಿಸಲು ಸಾಧ್ಯವಿಲ್ಲʼ ಎಂದು ಡೇಟಿಂಗ್‌ ಕುರಿತ ಸುದ್ದಿಗಳು ಸುಳ್ಳು ಎಂದು ಸ್ಪಷ್ಟಪಡಿಸಿದರು. ಈ ವರ್ಷದ ಆರಂಭದಲ್ಲಿ ಸಲ್ಮಾನ್ ಪೂಜಾ ಹೆಗ್ಡೆ ಅವರ ಸಹೋದರನ ಮದುವೆಯಲ್ಲಿ ಭಾಗವಹಿಸಿದ್ದರು. ಇಬ್ಬರ ಫೋಟೋಗಳು ಡೇಟಿಂಗ್‌ ಮ್ಯಾಟರ್‌ ಎಂಬ ಬೆಂಕಿಗೆ ತುಪ್ಪ ಸುರಿದಿದ್ದವು.

ಸದ್ಯ ಪೂಜಾ ಹೆಗ್ಡೆ ಮತ್ತು ಸಲ್ಮಾನ್‌ ಖಾನ್‌ ಅಭಿನಯದ ʼಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಸಿನಿಮಾ ಏಪ್ರಿಲ್ 21 ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಶೆಹನಾಜ್ ಗಿಲ್, ವೆಂಕಟೇಶ್ ದಗ್ಗುಬಾಟಿ, ಜಗಪತಿ ಬಾಬು, ಭೂಮಿಕಾ ಚಾವ್ಲಾ, ವಿಜೇಂದರ್ ಸಿಂಗ್, ಅಭಿಮನ್ಯು ಸಿಂಗ್, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ಜಸ್ಸಿ ಗಿಲ್, ಪಾಲಕ್ ತಿವಾರಿ ಮತ್ತು ವಿನಾಲಿ ಭಟ್ನಾಗರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಆಕ್ಷನ್, ರೊಮ್ಯಾಟಿಕ್‌, ಕೌಟುಂಬಿಕ ಸಿನಿಮಾವನ್ನು ಫರ್ಹಾದ್ ಸಾಮ್ಜಿ ನಿರ್ದೇಶಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News