ನವದೆಹಲಿ:ಖ್ಯಾತ ಬಾಲಿವುಡ್ ನಟಿ ಅಲಿಯಾ ಭಟ್ ಕಳೆದ ಮಾರ್ಚ್ 15 ರಂದು ತನ್ನ 27ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾಳೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ಅಲಿಯಾ ತುಂಬಾ ಸಕ್ರೀಯರಾಗಿರುತ್ತಾಳೆ. ಇದರೆದೆ ಒಂದು ಭಾಗವಾಗಿ ಅಲಿಯಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಹುಟ್ಟುಹಬ್ಬಕ್ಕೆ ಸಂಬಂಧಿಸಿದ ಅಪ್ಡೇಟ್ಸ್ ಗಳನ್ನು ಸಹ ಹಂಚಿಕೊಂದಿದ್ದಾಳೆ. ತನ್ನ ಹುಟ್ಟುಹಬ್ಬದ ದಿನ ಅಲಿಯಾ ಒಟ್ಟು ಎರಡು ಕೇಕ್ ಗಳನ್ನು ಕಟ್ ಮಾಡಿ, ತನ್ನ ಹುಟ್ಟುಹಬ್ಬವನ್ನು ದಿನವನ್ನು ಹೇಗೆ ಕಳೆದೆ ಎಂಬುದನ್ನು ಹೇಳಿಕೊಂಡಿದ್ದಾಳೆ. ಇದಕ್ಕಾಗಿ ಅಲಿಯಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲ ಸ್ಟೋರಿಗಳ ಜೊತೆಗೆ ಒಂದು TIKTOK ವಿಡಿಯೋ ಕೂಡ ಹಂಚಿಕೊಂಡಿದ್ದಾಳೆ.


COMMERCIAL BREAK
SCROLL TO CONTINUE READING

ಅಲಿಯಾಳ ವಿಡಿಯೋ ಅವಳ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಬಹುದು
ಈ ವಿಡಿಯೋದಲ್ಲಿ ಅಲಿಯಾ ಭಟ್, ತಮ್ಮ ಸಹೋದರಿ ಶಾಹೀನ್ ಭಟ್, ಮೇಘನಾ ಗೋಯಲ್ ಹಾಗೂ ತನ್ನ ಬೆಸ್ಟ್ ಫ್ರೆಂಡ್ ಆಕಾಂಕ್ಷಾ ರಂಜನ್ ಜೊತೆಗೆ ಕಾಣಿಸಿಕೊಂಡಿದ್ದಾಳೆ. ವಿಡಿಯೋದಲ್ಲಿ ಈ ಎಲ್ಲ ಸೆಲೆಬ್ರಿಟಿಗಳು ಲಾಲಾಲಾ ಸಾಂಗ್ ಮೇಲೆ ಪರ್ಫಾರ್ಮೆನ್ಸ್ ಕೂಡ ಮಾಡಿದ್ದಾರೆ. ಈ ಹಾಡಿನ ಪೆರ್ಫಾರ್ಮೆನ್ಸ್ ವೇಳೆ ಅಲಿಯಾ ತನ್ನ ಮಧ್ಯದ ಬೆರಳನ್ನು ತೋರಿಸಿದ್ದಾಳೆ. ಸದ್ಯ ಅಲಿಯಾಳ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಅಲಿಯಾಳ ಈ ಪ್ರವೃತ್ತಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಇದರ ಜೊತೆಗೆ ತನ್ನ ಸ್ಟೋರೀಸ್ ಗಳನ್ನು ಹಂಚಿಕೊಂಡ ಅಲಿಯಾ ತಾವು ಹೇಗೆ ತಮ್ಮ ಕುಟುಂಬ ಸದಸ್ಯರು, ಹತ್ತಿರದ ಸ್ನೇಹಿತರು ಹಾಗೂ ಕ್ಯೂಟ್ ಮಂಕಿಗಳ ಜೊತೆಗೆ ಕಾಲ ಕಳೆಯಲು ಇಷ್ಟಪಡುತ್ತಾಳೆ ಎಂಬುದನ್ನು ಹೇಳಿಕೊಂಡಿದ್ದಾಳೆ.



ಅಲಿಯಾ ಅವರ ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ, ಸದ್ಯ ಅಲಿಯಾ ತಮ್ಮ ಮುಂಬರುವ ಚಿತ್ರ 'ಬ್ರಹ್ಮಾಸ್ತ್ರ'ದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾಳೆ. ರಣಬೀರ್ ಕಪೂರ್ ಜೊತೆ ಅಲಿಯಾ ಮಾಡುತ್ತಿರುವ ಮೊದಲ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ಮೌನಿ ರಾಯ್ ಹಾಗೂ ಅಮಿತಾಭ್ ಬಚ್ಚನ್ ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ನಂತರ ಅಲಿಯಾ, ಕರಣ್ ಜೋಹರ್ ಅವರ ಚಿತ್ರವಾಗಿರುವ 'ತಖ್ತ'ನಲ್ಲಿಯೂ ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದಲ್ಲದೆ ಮೊಟ್ಟಮೊದಲ ಬಾರಿಗೆ ತನ್ನ ತಂದೆ ಮಹೇಶ್ ಭಟ್ ಅವರ ಚಿತ್ರವಾಗಿರುವ 'ಸಡಕ್-2'ರಲ್ಲಿಯೂ ಕೂಡ ಅಲಿಯಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅಲಿಯಾ ಜೊತೆಗೆ ಸಂಜಯ್ ದತ್ತ್, ಆದಿತ್ಯ ರಾಯ್ ಕಪೂರ್ ಹಾಗೂ ಪೂಜಾ ಭಟ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.