How to get rid from mosquito : ಮಳೆಗಾಲದ ನಂತರ ಸೊಳ್ಳೆಗಳ ಹಾವಳಿ ಹೆಚ್ಚುತ್ತದೆ. ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ, ಮಲೇರಿಯಾ, ಚಿಕೂನ್ ಗುನ್ಯಾ ಹರಡುವ ಸೊಳ್ಳೆಗಳು ಹೆಚ್ಚಿವೆ. ಈ ಸಮಸ್ಯೆಯನ್ನು ತಪ್ಪಿಸಲು ಜನರು ವಿಭಿನ್ನ ಪರಿಹಾರಗಳನ್ನು ಪ್ರಯತ್ನಿಸುತ್ತಾರೆ. ಇದರಲ್ಲಿ ಅತಿ ಹೆಚ್ಚು ಸೊಳ್ಳೆ ಸುರುಳಿಗಳನ್ನು ಅಂದರೆ ಸೊಳ್ಳೆ ಬತ್ತಿಯನ್ನು ಸುಡುತ್ತಾರೆ... ಈ ಬತ್ತಿ ಮನುಷ್ಯರಿಗೂ ಅಪಾಯಕಾರಿ, ಇದು ಹೆಚ್ಚಿನ ಜನರಿಗೆ ತಿಳಿದಿಲ್ಲ.
ಸೊಳ್ಳೆ ಬತ್ತಿ ಸುಡುವುದರಿಂದ ಹೊರಸೂಸುವ ಹೊಗೆ ಒಂದಲ್ಲ ಹಲವು ಸಿಗರೇಟ್ ಸೇದುವುದಕ್ಕೆ ಸಮ ಎನ್ನುತ್ತಾರೆ ಹಲವು ಆರೋಗ್ಯ ತಜ್ಞರು. ಈ ಸುರುಳಿಗಳಲ್ಲಿ ಬಹಳಷ್ಟು ರಾಸಾಯನಿಕಗಳನ್ನು ಬಳಸಲಾಗುತ್ತದೆ, ಅದು ಸುಟ್ಟ ನಂತರ ಬರುವ ಹೊಗೆ ಮಾನವ ಶ್ವಾಸಕೋಶವನ್ನು ತಲುಪುತ್ತದೆ. ಈ ಹೊಗೆಯ ಪರಿಣಾಮ ಅನಾರೋಗ್ಯ ಸಮಸ್ಯೆಗಳು ಕಾಡುತ್ತವೆ..
ಇದನ್ನೂ ಓದಿ:ಈ ಮನೆ ಮದ್ದುಗಳನ್ನು ಬಳಸಿ, ಕೆಲವೇ ದಿನಗಳಲ್ಲಿ ಸಿಗಲಿದೆ ಯೂರಿಕ್ ಆಸಿಡ್‌ಗೆ ಮುಕ್ತಿ..!
ನಿಯಮಿತವಾಗಿ ಮನೆಯಲ್ಲಿ ಸೊಳ್ಳೆ ಬತ್ತಿ ಸುಡುವ ಮತ್ತು ಈ ಹೊಗೆಯಲ್ಲಿ ವಾಸಿಸುವ ಜನರು ಭವಿಷ್ಯದಲ್ಲಿ ಅಸ್ತಮಾ ಸೇರಿದಂತೆ ಇತರೆ ಉಸಿರಾಟದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸೊಳ್ಳೆ ಕಾಯಿಲ್ ಹೊಗೆಯಿಂದಾಗಿ ಅನೇಕ ಜನರು ಚರ್ಮದ ಅಲರ್ಜಿಗೂ ಒಳಗಾಗುತ್ತಾರೆ.
ತಜ್ಞರ ಪ್ರಕಾರ, ಸೊಳ್ಳೆ ಬತ್ತಿ ಹೊಗೆ ತುಂಬಾ ವಿಷಕಾರಿಯಾಗಿದ್ದು ಅದು ಮಾನವನ ಮೆದುಳಿಗೆ ಹಾನಿ ಮಾಡುತ್ತದೆ. ಸೊಳ್ಳೆ ಸುರುಳಿ ಮನುಷ್ಯರಿಗೆ ಮಾತ್ರವಲ್ಲ ಪರಿಸರಕ್ಕೂ ಹಾನಿಕಾರಕ. ಇದರ ವಿಷಕಾರಿ ಹೊಗೆಯು ಅದನ್ನು ಮಾಲಿನ್ಯಕಾರಕ ಮತ್ತು ವಿಷಕಾರಿಯನ್ನಾಗಿ ಮಾಡುತ್ತದೆಯಂತೆ..
ಇದನ್ನೂ ಓದಿ:ಅಪ್ಪಿತಪ್ಪಿಯೂ ಈ ಪದಾರ್ಥಗಳನ್ನು ಬಳಸಬೇಡಿ... ನಿಮ್ಮ ದೃಷ್ಟಿಯೇ ಹೋದೀತು...!
ಸೊಳ್ಳೆಗಳನ್ನು ಓಡಿಸಲು ಸೊಳ್ಳೆ ಬತ್ತಿ ಏಕೈಕ ಆಯ್ಕೆ ಅಲ್ಲ.. ಆರೋಗ್ಯದ ದೃಷ್ಟಿಯಿಂದ ಇತರ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಎಲೆಕ್ಟ್ರಿಕ್ ಸೊಳ್ಳೆ ನಿವಾರಕ ಯಂತ್ರಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತವೆ. ಇದಲ್ಲದೆ, ನೀವು ಕೆಲವು ಮನೆಮದ್ದುಗಳ ಸಹಾಯದಿಂದ ಸೊಳ್ಳೆಗಳ ಸಮಸ್ಯೆಯಿಂದ ಪಾರಾಗಬಹುದು.. ಮನೆ ಮತ್ತು ಸುತ್ತಮುತ್ತ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ.. ಆಗ ಸೊಳ್ಳೆಗಳ ಕಾಟವೂ ಕಡಿಮೆಯಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.