`ಪುಷ್ಪಾ 2` ಪ್ರೀಮಿಯರ್ ಶೋ ವೇಳೆ ಕಾಲ್ತುಳಿತದಿಂದ ಮಹಿಳೆ ಸಾವು..! ₹25 ಲಕ್ಷ ನೆರವು ಘೋಷಿಸಿದ ಅಲ್ಲು ಅರ್ಜುನ್
Allu Arjun : `ಪುಷ್ಪಾ 2: ದಿ ರೂಲ್` ಪ್ರೀಮಿಯರ್ ಶೋ ವೇಳೆ ಥಿಯೇಟರ್‌ನಲ್ಲಿ ಕಾಲ್ತುಳಿತ ಏರ್ಪಟ್ಟು ಮಹಿಳೆಯೊಬ್ಬರು ಸಾವನ್ನಪ್ಪಿದರು ಮತ್ತು ಅವರ ಮಗ ತೀವ್ರವಾಗಿ ಗಾಯಗೊಂಡಿದ್ದಾರೆ. ಇದೀಗ ಈ ಘಟನೆ ಸಂಭವಿಸಿ ಎರಡು ದಿನಗಳ ನಂತರ, ನಟ ಅಲ್ಲು ಅರ್ಜುನ್ ಕುಟುಂಬಕ್ಕೆ ಧೈರ್ಯ ತುಂಬುವುದರ ಜೊತೆ ₹25 ಲಕ್ಷ ರೂ. ಸಹಾಯವನ್ನು ಘೋಷಿಸಿದ್ದಾರೆ.
Allu Arjun on stampede : ದುಃಖದಲ್ಲಿರುವ ಕುಟುಂಬವನ್ನು ಖುದ್ದಾಗಿ ಭೇಟಿ ಮಾಡುವುದಾಗಿ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ. ಬಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಆತನ ವೈದ್ಯಕೀಯ ವೆಚ್ಚವನ್ನು ನೋಡಿಕೊಳ್ಳುವುದಾಗಿ ಅಲ್ಲು ಅರ್ಜುನ್ ಭರವಸೆ ನೀಡಿದ್ದಾರೆ.
ಡಿಸೆಂಬರ್ 4 ರ ರಾತ್ರಿ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ದುರಂತದ ಬಗ್ಗೆ ಪ್ರತಿಕ್ರಿಯಿಸಲು ಅಲ್ಲು ಅರ್ಜುನ್ ತಮ್ಮ ಟ್ವಿಟರ್ (X) ಖಾತೆಯ ಮೂಲಕ ಸಂತಾಪ ಸೂಚಿಸಿದ್ದಾರೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ನಟ, ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ದುರಂತ ಘಟನೆಯ ಕುರಿತು ಮಾತನಾಡಿದ್ದಾರೆ.
ಇದನ್ನೂ ಓದಿ:Deepika Padukone: ಬೆಂಗಳೂರಿನಲ್ಲಿ ಪಂಜಾಬಿ ಗಾಯಕನಿಗೆ ಕನ್ನಡ ಕಲಿಸಿದ ಕನ್ನಡತಿ ದೀಪಿಕಾ ಪಡುಕೋಣೆ.
ಇದೊಂದು ತೀವ್ರ ಹೃದಯ ವಿದ್ರಾವಕ ಘಟನೆ. ಊಹೆಗೂ ನಿಲುಕದ ಕಷ್ಟದ ಸಮಯದಲ್ಲಿ ದುಃಖದಲ್ಲಿರುವ ಕುಟುಂಬಕ್ಕೆ ನನ್ನ ಸಂತಾಪಗಳು. ಈ ನೋವಿನಲ್ಲಿ ಅವರು ಒಬ್ಬಂಟಿಯಾಗಿಲ್ಲ, ನಾನು ಆ ಕುಟುಂಬವನ್ನು ವೈಯಕ್ತಿಕವಾಗಿ ಭೇಟಿಯಾಗುತ್ತಾನೆ. ಹೋದ ಪ್ರಾಣವನ್ನು ಮರಳಿ ತರಲು ಆಗದಿದ್ದರೂ, ಅವರಿಗೆ ಬೇಕಾದ ಸಹಾಯ ಮಾಡಲು ನಾನು ಸದಾ ಬದ್ಧನಾಗಿರುತ್ತೇನೆ ಎಂದು ಅಲ್ಲು ಅರ್ಜುನ್ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ..
ಇದನ್ನೂ ಓದಿ:ಮಗುವಿಗೆ ಜನ್ಮ ನೀಡಿದ ಮೂರು ತಿಂಗಳಲ್ಲೆ ಬೆಂಗಳೂರಿಗೆ ಎಂಟ್ರಿ ಕೊಟ್ಟ ದೀಪಿಕಾ ಪಡುಕೋಣೆ.. ಅಭಿಮಾನಿಗಳು ಫುಲ್ ಖುಷ್..!
ಅಲ್ಲದೆ ವೀಡಿಯೊದಲ್ಲಿ, ಘಟನೆಯಿಂದ ಇಡೀ ಚಿತ್ರ ತಂಡವು ಆಘಾತಕ್ಕೊಳಗಾಗಿದೆ. ಮಹಿಳೆಯನ್ನು ಕಳೆದುಕೊಂಡ ಆ ಕುಟುಂಬದ ಭವಿಷ್ಯದ ಭದ್ರತೆಗಾಗಿ ₹25 ಲಕ್ಷ ರೂ. ನೀಡುವುದಾಗಿ ಅಲ್ಲು ಅರ್ಜುನ್ ಘೋಷಿಸಿದ್ದಾರೆ. ಅಲ್ಲದೆ, ಜಾಗೃತವಾಗಿರುವಂತೆ ಅಭಿಮಾನಿಗಳಿಗೂ ಮನವಿ ಮಾಡಿದ್ದಾರೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.