Allu Arjun: ಕಾರುಗಳನ್ನು ಇಷ್ಟಪಡುವ ಚಿತ್ರನಟ ಅಲ್ಲು ಅರ್ಜುನ್ ಮತ್ತೊಂದು ಹೊಸ ಕಾರನ್ನು ಖರೀದಿಸಿದ್ದಾರೆ. ಹೊಸ ಕಾರಿನ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಖುದ್ದು ಅಲ್ಲು ಅರ್ಜುನ್‌ ಸಾರಿಗೆ ಇಲಾಖೆಯ ಕಚೇರಿಗೆ ಬಂದಿದ್ದರು. ಅಲ್ಲು ಅರ್ಜುನ್ ಹೈದರಾಬಾದ್‌ನ ಖೈರತಾಬಾದ್‌ನಲ್ಲಿರುವ ಸಾರಿಗೆ ಇಲಾಖೆ ಕಚೇರಿಗೆ ಬಂದಿದ್ದರು. ನೋಂದಣಿ ಪ್ರಕ್ರಿಯೆಯ ಭಾಗವಾಗಿ ಅವರು ದಾಖಲೆಗಳಿಗೆ ಸಹಿ ಹಾಕಿದರು. ಜೊತೆಗೆ ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಖೈರತಾಬಾದ್‌ನಲ್ಲಿರುವ ಆರ್‌ಟಿಒ ಕಚೇರಿಗೆ ಆಗಮಿಸಿದ ಅಲ್ಲು ಅರ್ಜುನ್ ಅವರನ್ನು ಅಧಿಕಾರಿಗಳು ಸ್ವಾಗತಿಸಿದರು. ಈ ಸಂದರ್ಭದಲ್ಲಿ ನಾಯಕನಿಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ತಕ್ಷಣವೇ ಪೂರ್ಣಗೊಳಿಸಲು ಅಧಿಕಾರಿಗಳು ಶ್ರಮಿಸಿದರು. ಅಲ್ಲು ಅರ್ಜುನ್ ಹೊಸ ರೇಂಜ್ ರೋವರ್ ಕಾರನ್ನು ರಿಜಿಸ್ಟರ್ ಮಾಡಲು ಬಂದಿದ್ದಾರೆ ಎಂದು ಹೇಳಲಾಗಿದೆ. 


ಇದನ್ನೂ ಓದಿ: Samantha: ಸಂಭಾವನೆ ದುಪ್ಪಟ್ಟು ಮಾಡಿದ ಸಮಂತಾ.. ಎಷ್ಟು ಕೋಟಿ ಬೇಡಿಕೆ ಇಡ್ತಿದ್ದಾರಂತೆ ಗೊತ್ತಾ? 


ಇದಲ್ಲದೇ ಇಂಟರ್ ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್ ಗೂ ಅರ್ಜಿ ಹಾಕಿದ್ದಾರಂತೆ ಎನ್ನಲಾಗಿದೆ. ಅಲ್ಲು ಅರ್ಜುನ್‌ ಇಂಟರ್ ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿ ಹಾಕಿರುವ ವಿಚಾರ ತಿಳಿದು ಹಲವರು ಅವರು ವಿದೇಶದಲ್ಲಿ ನೆಲೆಸುವ ಯೋಚನೆಯಲ್ಲಿರಬಹುದು. ಭಾರತ ಬಿಡಲು ಸಜ್ಜಾಗುತ್ತಿರಬಹುದು ಎಂದು ವದಂತಿ ಸೃಷ್ಟಿಸಿದ್ದಾರೆ. ಆದರೆ ಅಲ್ಲು ಅರ್ಜುನ್‌ ಈ ಲೈಸೆನ್ಸ್ ಪಡೆಯೋಕೆ ಕಾರಣ ಪುಷ್ಪ 2 ಸಿನಿಮಾ.


ಹೌದು, ಸದ್ಯ ಭಾರತದಲ್ಲೇ ಚಿತ್ರೀಕರಣ ಮಾಡುತ್ತಿರುವ ಪುಷ್ಪ 2 ಚಿತ್ರತಂಡ ಮುಂದಿನ ದಿನಗಳಲ್ಲಿ ಚೀನಾದಲ್ಲಿ ಚಿತ್ರೀಕರಣ ಮುಂದುವರೆಸಲಿದೆ ಎಂದು ಹೇಳಲಾಗಿದೆ. ಅಲ್ಲಿ ಈ ಲೈಸೆನ್ಸ್ ಉಪಯೋಗಕ್ಕೆ ಬರುವ ಹಿನ್ನೆಲೆ ಅಲ್ಲು ಅರ್ಜುನ್‌ ಇಂಟರ್ ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್ ಪಡೆಯಲಿದ್ದಾರೆ. ಈ ಕಾರಣದಿಂದಾಗಿಯೇ ಅವರು ಆರ್.ಟಿ.ಓ ಆಫೀಸಿಗೆ ತೆರಳಿದ್ದರು ಎನ್ನಲಾಗಿದೆ. 


ಇದನ್ನೂ ಓದಿ: ಸೌಂದರ್ಯದ ಗಣಿ ನೀತಾ ಗೆ ಟ್ರಾಫಿಕ್ ಸಿಗ್ನಲ್ ನಲ್ಲಿ ಪ್ರಪೋಸ್ ಮಾಡಿದ್ದ ಮುಖೇಶ್.. ಯಾವ ಸಿನಿಮಾಗೂ ಕಮ್ಮಿಯಿಲ್ಲ ಅಂಬಾನಿ ಪ್ರೇಮ ಕಹಾನಿ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.