Pushpa Allu Arjun: 2021ರಲ್ಲಿ ಸಾಕಷ್ಟು ಗಳಿಕೆ ಕಂಡಿರುವ ಪುಷ್ಪ ಚಿತ್ರದ ಸೀಕ್ವೆಲ್ ಸದ್ಯದಲ್ಲೇ ತೆರೆಗೆ ಬರಲಿದೆ. ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 350 ಕೋಟಿಗೂ ಹೆಚ್ಚು ಗಳಿಕೆ ಮಾಡಿದ ಈ ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ತಮ್ಮ ನಟನೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದರು. ಆದರೆ ಈ ಚಿತ್ರಕ್ಕೆ ಅಲ್ಲು ಅರ್ಜುನ್ ಮೊದಲ ಆಯ್ಕೆಯಾಗಿರಲಿಲ್ಲ. ಹೌದು... ಅಲ್ಲು ಅರ್ಜುನ್‌ಗಿಂತ ಮೊದಲು, ಈ ಸೌತ್ ಸೂಪರ್ ಸ್ಟಾರ್ ಅನ್ನು 'ಪುಷ್ಪ: ದಿ ರೈಸ್'ಗಾಗಿ ಸಂಪರ್ಕಿಸಲಾಯಿತು ಆದರೆ ಅವರು ನಿರಾಕರಿಸಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Karnataka Election 2023 : ಜಗಳೂರಿನಲ್ಲಿ ಬಾದ್ ಶಾ ಸುದೀಪ್ ಭರ್ಜರಿ ರೋಡ್ ಶೋ, ಬಿಜೆಪಿ ಪರ ಮತಬೇಟೆ


ಕೆಲವು ವರದಿಗಳ ಪ್ರಕಾರ, ಪುಷ್ಪ ಚಿತ್ರದ ನಿರ್ದೇಶಕ ಸುಕುಮಾರ್ ಅವರು ಶ್ರೀಗಂಧದ ಕಳ್ಳಸಾಗಣೆಗೆ ಸಂಬಂಧಿಸಿದ ವಿಭಿನ್ನ ಸ್ಕ್ರಿಪ್ಟ್ ಬರೆದಿದ್ದರು. ಅದಕ್ಕೆ ಪುಷ್ಪ ಚಿತ್ರಕಥೆಯನ್ನು ಬರೆದರು. ನಂತರ ಅವರು ಸೌತ್‌ ಸೂಪರ್‌ಸ್ಟಾರ್‌ ಮಹೇಶ್ ಬಾಬು ಅವರನ್ನು ಮೊದಲು ಸಂಪರ್ಕಿಸಿದರಂತೆ. ಚಿತ್ರದ ಕಥೆ ಕೇಳಿದ ಮಹೇಶ್ ಬಾಬು ಈ ಸಿನಿಮಾದಲ್ಲಿ ಪಾತ್ರ ಮಾಡಲು ನಿರಾಕರಿಸಿದ್ದರಂತೆ. ಮಹೇಶ್ ಬಾಬು ನಾಯಕನ ನೆಗೆಟಿವ್ ಇಮೇಜ್ ಅನ್ನು ಇಷ್ಟಪಡಲಿಲ್ಲ ಎಂದು ಹೇಳಲಾಗುತ್ತದೆ. ಆದ್ದರಿಂದ ಅವರು ಪುಷ್ಪಾ ಸಿನಿಮಾದಲ್ಲಿ ನಟಿಸಲು ಒಲ್ಲೆ ಎಂದರಂತೆ. 


ವರದಿಗಳ ಪ್ರಕಾರ, ಮಹೇಶ್ ಬಾಬು ಬೇಡ ಎಂದ ಬಳಿಕ, ನಿರ್ದೇಶಕ ಸುಕುಮಾರ್ ಅಲ್ಲು ಅರ್ಜುನ್ ಜೊತೆ ಮಾತನಾಡಿದ್ದಾರೆ. ಆಗ ಅಲ್ಲು ತಕ್ಷಣ ಚಿತ್ರಕ್ಕೆ ಯೆಸ್ ಅಂದಿದ್ದಾರಂತೆ. ಪುಷ್ಪ: ದಿ ರೈಸ್ ಚಿತ್ರದ ಯಶಸ್ಸಿನ ನಂತರ ನಿರ್ದೇಶಕರು ಚಿತ್ರದ ಎರಡನೇ ಭಾಗವನ್ನು ಮಾಡುವುದಾಗಿ ಅನೌನ್ಸ್‌ ಮಾಡಿದರು. ಪುಷ್ಪಾ ಸೀಕ್ವೆಲ್‌ನಲ್ಲಿ ಶ್ರೀಗಂಧದ ಕಳ್ಳಸಾಗಣೆ ಅಂತರಾಷ್ಟ್ರೀಯ ಮಟ್ಟದಲ್ಲಿ ತೋರಿಸಲಾಗುವುದು ಎಂದು ಹೇಳಲಾಗುತ್ತಿದೆ. ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ಪುಷ್ಪ 2 ರ ಮೊದಲ ಟೀಸರ್ ಬಿಡುಗಡೆಯಾಗಿದೆ, ಅಭಿಮಾನಿಗಳು ಚಿತ್ರದ ನಟನ ಡ್ಯಾಶಿಂಗ್ ಲುಕ್ ಅನ್ನು ಇಷ್ಟಪಟ್ಟಿದ್ದಾರೆ.


ಇದನ್ನೂ ಓದಿ: ನಟಿ ಪೂಜಾ ಹೆಗ್ಡೆಗೆ ಮಂಗಳೂರಿನ ಈ ಖಾದ್ಯ ಅಂದ್ರೆ ಪಂಚಪ್ರಾಣ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.