ಒಂದು ಕಾಲದಲ್ಲಿ ಪಾರ್ಟಿಗಳಲ್ಲಿ ಪರಭಾಷೆಯ ಹಾಡುಗಳನ್ನು ಡಿಜೆಯಾಗಿ ಬಳಸುತ್ತಿದ್ದರು. ಆದರೆ ಇತ್ತೀಚೆಗೆ ಕನ್ನಡದ ರ್ಯಾಪ್‌ ಸಾಂಗ್ (Kannada Rap Songs).‌ ಡಿಜೆ ಗಳು ಬಂದಿವೆ. ಕನ್ನಡದ ಕೆಲವು ಪ್ರತಿಭೆಗಳು ಇದಕ್ಕೆ ಮುಖ್ಯ ಕಾರಣ. ಆ ಪೈಕಿ ಅಲೋಕ್​ (Alok Babu) ಕೂಡ ತುಂಬ ಫೇಮಸ್​. 


COMMERCIAL BREAK
SCROLL TO CONTINUE READING

ಇದನ್ನೂ ಓದಿ:ಟ್ರೋಲ್ ಆಯ್ತು ಉಪೇಂದ್ರ ಹೊಸ ಡಿಪಿ! ಉಪ್ಪಿ ಹೊಸ ಅವತಾರ ಕಂಡು ದಂಗಾದ ಫ್ಯಾನ್ಸ್..


ಆಲ್​​ ಓಕೆ (All Ok) ಎಂಬ ಹೆಸರಿನಿಂದಲೇ ಜನಪ್ರಿಯತೆ ಪಡೆದುಕೊಂಡಿರುವ ಅವರು ಈಗಾಗಲೇ ಅನೇಕ ಹಿಟ್​ ಹಾಡುಗಳನ್ನು ನೀಡಿದ್ದಾರೆ. ‘ಡೋಂಟ್​ ವರಿ’, ‘ಹ್ಯಾಪಿ ಆಗಿದೆ’, ‘ಮಾರಮ್ಮನ ಡಿಸ್ಕೋ’, ‘ಯಾಕಿಂಗೆ ಮಗಾ ಯಾಕಿಂಗೆ’ ಮುಂತಾದ ಹಾಡುಗಳು ಜನಮೆಚ್ಚುಗೆ ಗಳಿಸಿವೆ. ಅದರಿಂದಾಗಿ ಆಲ್​ ಓಕೆ ಯಶಸ್ಸು ಪಡೆದುಕೊಂಡರು. 


RRR ರಿಲೀಸ್‌ಗೆ ಕ್ಷಣಗಣನೆ.. ಸಿನಿಮಾ ವಿರುದ್ಧ ಕನ್ನಡಿಗರ ಆಕ್ರೋಶಕ್ಕೆ ಕಾರಣವೇನು?


ಯೂಟ್ಯೂಬ್​ನಲ್ಲಿ ಆಲ್​ ಓಕೆ  ಆಫಿಸಿಯಲ್‌ ಚಾನಲ್‌ನಲ್ಲಿ ಈ ಸಾಂಗ್ ಬಿಡುಗಡೆಯಾಗಿದೆ. ಅಲೋಕ್​ ಅಭಿಮಾನಿಗಳು ಈ ಹಾಡನ್ನು ಇಷ್ಟಪಟ್ಟಿದ್ದಾರೆ. ಈ ಗೀತೆಯ ಇನ್ನೊಂದು ವಿಶೇಷ ಅಂದರೆ ಕನ್ನಡಕ್ಕೆ ಹೊಸ ಬೆಡಗಿ ಅದ್ವಿಕಾ ಎಂಟ್ರಿ. ಈ ಹಾಡಿನ ಮೂಲಕ ಅದ್ವಿಕಾ (Adhvika) ಅವರನ್ನು ಇಂಟ್ರಡ್ಯೂಸ್‌ ಮಾಡಲಾಗಿದೆ. 


ಒಟ್ಟಿನಲ್ಲಿ ಸೂಪರ್‌ ಡೂಪರ್‌ ಆಗಿ ಈ ಪಾರ್ಟಿ ಸಾಂಗ್‌ (House Party Song) ರೆಡಿಯಾಗಿ, ರಿಲೀಸ್‌ ಆಗಿದ್ದು, ಆಲ್‌ ಓಕೆ ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.