ನಟಿ ಅಮಲಾ ಪೌಲ್ ಎರಡನೇ ಮದುವೆ ಆಗ್ತಿರೋ ಈ ವ್ಯಕ್ತಿ ಯಾರು ಗೊತ್ತಾ?
Amala Paul Second Husband : ನಟಿ ಅಮಲಾ ಪೌಲ್ ತಮ್ಮ ಬಹುಕಾಲದ ಗೆಳೆಯ ಜಗತ್ ದೇಸಾಯಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
Amala Paul Second Marriage : ನಟಿ ಅಮಲಾ ಪೌಲ್ ತಮ್ಮ ಬಹುಕಾಲದ ಗೆಳೆಯ ಜಗತ್ ದೇಸಾಯಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಮಲಾ ಪೌಲ್ ಅವರು ಜಗತ್ ದೇಸಾಯಿ ಎಂಬುವವರ ಜೊತೆ ಎರಡನೇ ಮದುವೆ ಆಗಲಿದ್ದಾರೆ. ಅಮಲಾ ಅವರ ಹುಟ್ಟುಹಬ್ಬದ ಪಾರ್ಟಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜಗತ್ ದೇಸಾಯಿ ಜೊತೆ ಸಖತ್ ರೋಮ್ಯಾಂಟಿಕ್ ಫೋಟೋಗಳನ್ನು ಅಮಲಾ ಪೌಲ್ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: ಮೇಜರ್ ಸರ್ಜರಿ ಮುಗಿಸಿರುವ ಪ್ರಭಾಸ್ ಯೂರೋಪ್ ನಿಂದ ಬರೋದು ಯಾವಾಗ?
2014 ರಲ್ಲಿ ಅಮಲಾ ಪೌಲ್ ಅವರು ನಿರ್ದೇಶಕ ವಿಜಯ್ ಅವರನ್ನು ವಿವಾಹವಾಗಿದ್ದರು. ಇಬ್ಬರ ಮಧ್ಯೆ 'ದೈವ ತಿರುಮಗಳು' ಸೆಟ್ನಲ್ಲಿ ಪ್ರೀತಿ ಹುಟ್ಟಿತ್ತು. ಆದರೆ ನಂತರ 2016 ರಲ್ಲಿ ವಿಚ್ಛೇದನ ಪಡೆದರು. ನಂತರ 2020 ರಲ್ಲಿ ಅಮಲಾ ಪೌಲ್ ಮುಂಬೈ ಮೂಲದ ಗಾಯಕ ಭಾವನೀಂದರ್ ಸಿಂಗ್ ಅವರೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿತ್ತು. ಅವರು ಲೈವ್-ಇನ್ನಲ್ಲಿದ್ದರು ಎಂಬ ವದಂತಿಗಳು ಹರಡಿದವು. ಆದರೆ ಈ ಸಂಬಂಧ ಸಹ ಮುರಿದುಬಿತ್ತು ಎನ್ನಲಾಗಿದೆ.
ಅದೇ ವರ್ಷ ಮಾರ್ಚ್ನಲ್ಲಿ ಸಾಂಪ್ರದಾಯಿಕ ಮದುವೆಯ ಉಡುಪಿನಲ್ಲಿರುವ ಅವರ ಚಿತ್ರಗಳು ಅಂತರ್ಜಾಲದಲ್ಲಿ ಹರಿದಾಡಿದ್ದವು. ಇದರ ಬೆನ್ನಲ್ಲೇ ಅಮಲಾ ಪೌಲ್ ಅವರು ಭಾವನೀಂದರ್ ಸಿಂಗ್ ಅವರೊಂದಿಗೆ ಎರಡನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ಗಾಳಿಸುದ್ದಿ ಶುರುವಾಗಿತ್ತು. ಆದರೆ ಸುಂದರಿ ಇದನ್ನು ಅಲ್ಲಗಳೆದಿದ್ದು, ಇದು ಕೇವಲ ಫೋಟೋಶೂಟ್ ಎಂದು ಸ್ಪಷ್ಟನೆ ನೀಡಿದ್ದರು.
ಇದನ್ನೂ ಓದಿ: ವರ್ತೂರ್ ಸಂತೋಷ್ ಬಂದ್ ಕೂಡ್ಲೇ ಗೆಟೌಟ್ ಅಂತಿರೋ ಬಿಗ್ ಮಂದಿ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.