Amala Paul : ʻಹೆಬ್ಬುಲಿʼ ನಟಿ ಅಮಲಾ ಪೌಲ್ ಬಗ್ಗೆ ಆಘಾತಕಾರಿ ವಿಷಯವೊಂದು ಮುನ್ನೆಲೆಗೆ ಬಂದಿದೆ. ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ ಬಹುಭಾಷಾ ನಟಿ. ಸಿನಿಮಾಗಳಿಗಿಂತ ಹೆಚ್ಚು ವಿವಾದಗಳಿಂದಲೇ ಇತ್ತಿಚೆಗೆ ಸದ್ದು ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮಾಜಿ ಪ್ರಿಯಕರ ಭಾವನೀಂದರ್ ಸಿಂಗ್ ಧತ್ ತನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ, ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು. ಇದರಿಂದ ನಟಿ ಅಮಲಾ ಪೌಲ್ ವೈವಾಹಿಕ ಸ್ಥಿತಿ ಚರ್ಚೆಗೆ ಗ್ರಾಸವಾಗಿದೆ. ಕೆಲವು ದಿನಗಳ ಹಿಂದೆ, ಅವರ ಪ್ರತ್ಯೇಕತೆಯ ಸಮಯದಲ್ಲಿ ನಟಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಪೊಲೀಸರು ಆಕೆಯ ಮಾಜಿ ಗೆಳೆಯ ಭಾವನಿಂದರ್ ಸಿಂಗ್ ಅವರನ್ನು ಬಂಧಿಸಿದ್ದರು. ಆತನಿಂದ ವಂಚನೆ ಮತ್ತು ಬೆದರಿಕೆ ಇದೆ ಎಂದು ಆರೋಪಿಸಿ ವಿಲ್ಲುಪುರಂ ಜಿಲ್ಲಾ ಅಪರಾಧ ವಿಭಾಗದ ಪೊಲೀಸರಿಗೆ ದೂರು ನೀಡಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  All OK New Song: ಸಮುದ್ರದಲೆಗಳ ಮೇಲೆ ಚುಟು ಚುಟು ಚೆಲುವೆ, ಸಿಂಗಾಪುರದಲ್ಲಿ ಕನ್ನಡದ ಕಂಪು


ಈಗ, ಭಾವನೀಂದರ್ ಸಿಂಗ್ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ ಮತ್ತು ವಿಚಾರಣೆಯ ಸಮಯದಲ್ಲಿ, ಅವರ ವಕೀಲರು 2017 ರಲ್ಲಿ ಪಂಜಾಬಿ ಪದ್ಧತಿಗಳ ಪ್ರಕಾರ ಪರಸ್ಪರ ಮದುವೆಯಾದರೆಂದು ಸಾಬೀತುಪಡಿಸಲು ಕೆಲವು ಪುರಾವೆಗಳನ್ನು ಪ್ರಸ್ತುತಪಡಿಸಿದರು. ನ್ಯಾಯಾಲಯ ಆರೋಪಿಗೆ ಬೇಷರತ್ ಜಾಮೀನು ನೀಡಿದೆ. 


2020 ರಲ್ಲಿ, ಅಮಲಾ ಪೌಲ್ ಮುಂಬೈ ಮೂಲದ ಗಾಯಕ ಭಾವನೀಂದರ್ ಸಿಂಗ್ ಅವರೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದಾರೆ ಎಂಬ ಸುದ್ದಿ ಹರಿದಾಡಲು ಪ್ರಾರಂಭಿಸಿತು. ಮಾರ್ಚ್ 2020 ರಲ್ಲಿ, ಸಾಂಪ್ರದಾಯಿಕ ಮದುವೆಯ ಉಡುಪುಗಳನ್ನು ಧರಿಸಿರುವ ದಂಪತಿಗಳ ಫೋಟೋಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡವು. ಈ ಚಿತ್ರವನ್ನು ಭಾವನೀಂದರ್ ಸಿಂಗ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದಾಗ್ಯೂ, ಈ ಫೋಟೋವನ್ನು ನಂತರ ಫೀಡ್‌ನಿಂದ ತೆಗೆದುಹಾಕಲಾಗಿದೆ.


ಇದನ್ನೂ ಓದಿ:  Fact Check : ಇದ್ದಕ್ಕಿದ್ದಂತೆ ಸಮುದ್ರದ ಮಧ್ಯೆ ಬೆಂಕಿ! ವೈರಲ್‌ ವಿಡಿಯೋದ ಅಸಲಿಯತ್ತೇನು?


ಈ ಹಿಂದೆ ಅಮಲಾ ಪೌಲ್ ಅವರು ಚಲನಚಿತ್ರ ನಿರ್ಮಾಪಕ ಎಎಲ್ ವಿಜಯ್ ಅವರನ್ನು ವಿವಾಹವಾಗಿದ್ದರು. 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇವರಿಬ್ಬರು 2017ರಲ್ಲಿ ಬೇರ್ಪಟ್ಟಿದ್ದರು. ಇದೀಗ ಅಮಲಾ ಪೌಲ್‌ ಭಾವನೀಂದರ್ ಸಿಂಗ್ ಮದುವೆ ಫೋಟೋಗಳು ವೈರಲ್‌ ಆದ ಕಾರಣ ನಟಿ ಎರಡನೇ ಮದುವೆ ಆಗಿದ್ದರಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. 


ಮುಂದೆ, ನಟಿ ಅತಿರನ್ ಖ್ಯಾತಿಯ ನಿರ್ದೇಶಕ ವಿವೇಕ್ ಅವರ ಸಸ್ಪೆನ್ಸ್ ಥ್ರಿಲ್ಲರ್ ದಿ ಟೀಚರ್‌ನ ಭಾಗವಾಗಲಿದ್ದಾರೆ. ಈ ಯೋಜನೆಯಲ್ಲಿ ಮಂಜು ಪಿಳ್ಳೈ, ಚೆಂಬನ್ ವಿನೋದ್ ಜೋಸ್, ಹಕ್ಕಿಮ್ ಶಾ, ಪ್ರಶಾಂತ್ ಮುರಳಿ, ನಂದು, ಅನುಮೋಲ್, ಮಾಲಾ ಪಾರ್ವತಿ ಮತ್ತು ವಿನಿತಾ ಕೋಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ತಾಂತ್ರಿಕ ವರ್ಗದ ವಿಚಾರಕ್ಕೆ ಬರುವುದಾದರೆ, ಚಿತ್ರದ ಛಾಯಾಗ್ರಹಣ ಅನು ಮೂತೇದತ್ ಆಗಿದ್ದು, ಡಾನ್ ವಿನ್ಸೆಂಟ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಸಂಕಲನವನ್ನು ಮನೋಜ್ ನಿರ್ವಹಿಸಲಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.