All OK New Song: ಸಮುದ್ರದಲೆಗಳ ಮೇಲೆ ಚುಟು ಚುಟು ಚೆಲುವೆ, ಸಿಂಗಾಪುರದಲ್ಲಿ ಕನ್ನಡದ ಕಂಪು

ಕನ್ನಡದ ಆಲ್ ಓಕೆ ರ್ಯಾಪರ್ ಆಲ್‌ ಓಕೆ‌ ಹೊಸ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಸದಾ ಕನ್ನಡದ ಕಂಪನ್ನು ತಮ್ಮ ಹಾಡಿನಲ್ಲಿ ಇರಿಸಿರುತ್ತಾರೆ. ಇದೀಗ ಮಲ್ಲಿಗೆ ಹೂವಾ ಎಂಬ ಹಾಡನ್ನು ಮಾಡಿದ್ದು, ಇದೊಂದು ಬ್ಯೂಟಿಫುಲ್‌ ಹಾಡು ಎಂದು ಎಲ್ಲರೂ ಬಣ್ಣಿಸುತ್ತಿದ್ದಾರೆ. 

Written by - Chetana Devarmani | Last Updated : Sep 8, 2022, 03:56 PM IST
  • ಕನ್ನಡದ ಆಲ್ ಓಕೆ ರ್ಯಾಪರ್ ಆಲ್‌ ಓಕೆ‌ ಹೊಸ ಪ್ರಯೋಗ ಮಾಡುತ್ತಲೇ ಇರುತ್ತಾರೆ
  • ವಿಶೇಷವಾಗಿ ಈ ಸಲ ಹಾಡಿನಲ್ಲಿ ನಟಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ
  • ಸಮುದ್ರದಲೆಗಳ ಮೇಲೆ ಚುಟು ಚುಟು ಚೆಲುವೆ, ಸಿಂಗಾಪುರದಲ್ಲಿ ಕನ್ನಡದ ಕಂಪು
All OK New Song: ಸಮುದ್ರದಲೆಗಳ ಮೇಲೆ ಚುಟು ಚುಟು ಚೆಲುವೆ, ಸಿಂಗಾಪುರದಲ್ಲಿ ಕನ್ನಡದ ಕಂಪು  title=
ಆಲ್ ಓಕೆ

All OK New Song: ಕನ್ನಡದ ಆಲ್ ಓಕೆ ರ್ಯಾಪರ್ ಆಲ್‌ ಓಕೆ‌ ಹೊಸ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಸದಾ ಕನ್ನಡದ ಕಂಪನ್ನು ತಮ್ಮ ಹಾಡಿನಲ್ಲಿ ಇರಿಸಿರುತ್ತಾರೆ. ಇದೀಗ ಮಲ್ಲಿಗೆ ಹೂವಾ ಎಂಬ ಹಾಡನ್ನು ಮಾಡಿದ್ದು, ಇದೊಂದು ಬ್ಯೂಟಿಫುಲ್‌ ಹಾಡು ಎಂದು ಎಲ್ಲರೂ ಬಣ್ಣಿಸುತ್ತಿದ್ದಾರೆ. ಈ ಹಾಡನ್ನು ಸಿಂಗಪುರದಲ್ಲಿ ಚಿತ್ರೀಕರಿಸಿದ್ದು, ವಿಶೇಷವಾಗಿ ಈ ಸಲ ಹಾಡಿನಲ್ಲಿ ನಟಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. 

ಇದನ್ನೂ ಓದಿ: Bigg Boss 9: ಅತಿ ಶೀಘ್ರದಲ್ಲೇ ನಿಮ್ಮ ಟಿವಿ ಪರದೆ ಮೇಲೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 9

ಸೂಪರ್‌ ಲಿರಿಕ್ಸ್‌, ಆಲ್‌ ಓಕೆ ರ್ಯಾಪ್‌ ಸ್ಟೆಪ್‌ ಜೊತೆ ಆಶಿಕಾ ನಗು ನೋಡುಗರಿಗೆ ಹುಚ್ಚು ಹಿಡಿಸುವಂತಿದೆ. ಆಲ್ ಓಕೆ ಅಲೋಕ್ ಗಾಯನವಂತೂ ಕೇಳುಗನನ್ನು ಕುಣಿಸುತ್ತದೆ. ಸಿಂಗಾಪುರದ ಸಮುದ್ರದ ಮೇಲೆ ತೇಲೋ ಬೃಹತ್ ಕ್ರೂಸ್ ಮೇಲೆ ಮಲ್ಲಿಗೆ ಹೂವಿನ ಅಂದ ಚಂದವನ್ನ ಸೆರೆ ಹಿಡಿದಿದ್ದಾರೆ.

ಅಂತಾರಾಷ್ಟ್ರೀಯ ಸಮುದ್ರದ ಮೇಲೆ ತೇಲೋ ಕ್ರೂಸ್ ಮೇಲೆ ಆಲ್ಬಂ ಸಾಂಗ್ ಶೂಟ್ ಮಾಡಲಾಗಿದೆ. ಈ ಹಾಡು ಅರ್ಜುನ್ ಶೆಟ್ಟಿ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ನಗುವಿನಲ್ಲೇ ಯುವಕರ ಹೃದಯ ಗೆದಿದ್ದಾರೆ. ಕನ್ನಡದ ಸಂಗೀತವನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೂಟ್‌ ಮಾಡುವ ಕೆಲಸ ಸಿನಿಮಾದಲ್ಲಿ ಆಗಿಯೇ ಇದೆ. ಆದರೆ, ಆಲ್ ಓಕೆ ಅವರ ಈ ಮಲ್ಲಿಗೆ ಹೂವಾ ಹಾಡನ್ನ ದೊಡ್ಡ ಮಟ್ಟದಲ್ಲಿಯೇ ಚಿತ್ರೀಕರಿಸಲಾಗಿದೆ. ಸಿಂಗಪೂರ್ ಮತ್ತು ಮಲೆಷಿಯಾದ ಸಮುದ್ರದ ಮೇಲೆ ಬೃಹತ್ ಕ್ರೂಸ್ ಮೇಲೆ ಹೆಚ್ಚು ಕಡಿಮೆ ನಾಲ್ಕು ದಿನ ಈ ಸಾಂಗ್‌ನ್ನು ಚಿತ್ರೀಕರಿಸಿದ್ದಾರೆ. 

ಇದನ್ನೂ ಓದಿ: Actress Tabu : ಮಗು ಬೇಕಂದ್ರೆ ಮದುವೆ ಆಗ್ಬೇಕು ಅಂತೇನಿಲ್ಲ - ನಟಿ ತಬು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News