Amazon Prime Subscription: ಇದೀಗ ನೀವು ಕೂಡ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಕೇವಲ 129 ರೂಪಾಯಿಗೆ (Amazon Prime Video 129 Recharge Plan) ಕಂಟೆಂಟ್ ವೀಕ್ಷಿಸಬಹುದು. OTT ಪ್ಲಾಟ್‌ಫಾರ್ಮ್ ಪ್ರೈಮ್ ವಿಡಿಯೋ ತನ್ನ ಬಳಕೆದಾರರಿಗಾಗಿ ಮತ್ತೊಮ್ಮೆ ಮಾಸಿಕ ಚಂದಾದಾರಿಕೆ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಲ್ಲಿ, ನೀವು ತಿಂಗಳಿಗೆ ಕೇವಲ 129 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ ಮತ್ತು ನೀವು ತಿಂಗಳು ಪೂರ್ತಿ ಸಂಪೂರ್ಣ ಮನರಂಜನೆಯನ್ನು ಆನಂದಿಸಬಹುದು. ಮೊದಲು ನೀವು ಅಮೆಜಾನ್ ಪ್ರೈಮ್ ವಿಡಿಯೋಗಾಗಿ ರೂ 999 ರ ವಾರ್ಷಿಕ ಯೋಜನೆಯನ್ನು ಖರೀದಿಸಬೇಕಾಗುತ್ತಿತ್ತು.


COMMERCIAL BREAK
SCROLL TO CONTINUE READING

ಆದರೆ ಇದೀಗ Amazon Prime Video ಒಟ್ಟು ಮೂರು ಚಂದಾದಾರಿಕೆ ಯೋಜನೆಗಳನ್ನು ಮತ್ತೆ ಪರಿಚಯಿಸಿದೆ. ಇದರಲ್ಲಿ, ಬಳಕೆದಾರರು 1 ತಿಂಗಳಿಗೆ ರೀಚಾರ್ಜ್‌ಗೆ 129 ರೂ., 3 ತಿಂಗಳಿಗೆ ರೀಚಾರ್ಜ್‌ಗೆ 329 ರೂ. ಮತ್ತು 1 ವರ್ಷಕ್ಕೆ ರೀಚಾರ್ಜ್‌ಗೆ 999 ರೂ. ಪಾವತಿಸಬೇಕಾಗಲಿದೆ. Amazon Prime Video ತನ್ನ ಜನಪ್ರೀಯ ರೂ.129ರ  ಮಾಸಿಕ ರೀಚಾರ್ಜ್ ಯೋಜನೆಯನ್ನು ಮರುಪ್ರಾರಂಭಿಸಿದೆ.


ಅಮೆಜಾನ್ ಪ್ರೈಮ್ ವಿಡಿಯೋ ಕೆಲ ತಿಂಗಳ ಹಿಂದೆ ತನ್ನ ಈ ಜನಪ್ರೀಯ ಯೋಜನೆಯನ್ನು ಸ್ಥಗಿತಗೊಳಿಸಿತ್ತು ಎಂಬುದು ಇಲ್ಲಿ ಉಲ್ಲೇಖನೀಯ ಭಾರತೀಯ ರಿಸರ್ವ್ ಬ್ಯಾಂಕ್  ಅಥಾಂಟಿಕೆಶನ್ ಗಾಗಿ ಒಂದು ಹೆಚ್ಚುವರಿ ಫ್ಯಾಕ್ಟರ್ ಜಾರಿಗೊಳಿಸುವ ಬೇಡಿಕೆಯ ಹಿನ್ನೆಲೆ ಇದನ್ನು ಸ್ಥಗಿತಗೊಳಿಸಲಾಗಿತ್ತು.


RBI ಹೊಸ ನಿಯಮ ಜಾರಿಗೊಳಿಸಿದ ಬಳಿಕ ಅಮೆಜಾನ್ ಕೇವಲ ತನ್ನ ಎರಡು ಯೋಜನೆಗಳನ್ನು ಮಾತ್ರ ಮುಂದುವರೆಸಿ, ತನ್ನ ಮಾಸಿಕ ಯೋಜನೆಯನ್ನು ಸ್ಥಗಿತಗೊಳಿಸಿತ್ತು.


ಇದನ್ನೂ ಓದಿ-RBI ಹೊಸ ನಿಯಮಗಳನ್ನ ಅನುಸರಿಸದಿದ್ದರೆ ಬಂದ್ ಆಗಲಿವೆ ನಿಮ್ಮ Netflix, Amazon Prime ಮತ್ತು Hotstar ಚಂದಾದಾರಿಕೆ


ಆಯ್ದ ಕಾರ್ಡ್ ಗಳ ಮೇಲೆಯೇ ಕಾರ್ಯನಿರ್ವಹಿಸಲಿದೆ ಮಾಸಿಕ ಪ್ಲಾನ್
ಅಮೆಜಾನ್ ಪ್ರೈಮ್ ವಿಡಿಯೋದ ರೂ 129 ಪ್ಲಾನ್ ಅನ್ನು ನೀವು ಆಯ್ದ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಗಳ ಮೂಲಕ ಮಾತ್ರ ಪಡೆಯಬಹುದು.  RBI ಮಾರ್ಗಸೂಚಿಗಳನ್ನು ಅನುಸರಿಸದ ಯಾವುದೇ ಅಥವಾ ಎಲ್ಲಾ ಬ್ಯಾಂಕುಗಳ ಬಳಕೆದಾರರು ಅಮೆಜಾನ್ ನ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ.


ಇದನ್ನೂ ಓದಿ-Jio ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ Netflix, Amazon Prime, Disney+ Hotstar ಚಂದಾದಾರಿಕೆ


ತಮ್ಮ ಸದಸ್ಯತ್ವವನ್ನು (Amazon Prime Video Membersip) ರದ್ದುಗೊಳಿಸಲು ಮರೆಯುವ ಗ್ರಾಹಕರಿಗೆ ಈ ಯೋಜನೆ ಉತ್ತಮವಾಗಿದೆ. RBI ಹೊಸ ಮಾರ್ಗಸೂಚಿಗಳು ಅಕ್ಟೋಬರ್ 1, 2021 ರಿಂದ ಜಾರಿಗೆ ಬಂದಿದೆ.


ಇದನ್ನೂ ಓದಿ-Amazon Prime: ಕೇವಲ 499 ರೂ.ಗಳಿಗೆ ಲಭ್ಯವಾಗಲಿದೆ ಅಮೆಜಾನ್ ಪ್ರೈಮ್ ಸದಸ್ಯತ್ವ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ