ಇನ್ಮುಂದೆ Netflix,Hotstar ಹಾಗೂ ಇತರೆ OTT ಕಂಟೆಂಟ್ ಗಳ ಮೇಲೆ ಕೇಂದ್ರ ಸರ್ಕಾರದ ನಿಗಾ

ಈ ಎಲ್ಲಾ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಗುತ್ತಿರುವ ಸಂಗತಿಗಳ ಮೇಲೆ ಇದೀಗ ಸರ್ಕಾರ ನಿಗಾವಹಿಸಲಿದೆ.  

Last Updated : Nov 11, 2020, 03:11 PM IST
  • OTT ಪ್ಲಾಟ್ಫಾರ್ಮ್ ಗಳಲ್ಲಿ ಪ್ರಸಾರವಾಗುತ್ತಿರುವ ಕಂಟೆಂಟ್ ಮೇಲೆ ಮೋದಿ ಸರ್ಕಾರದ ಕಣ್ಣು.
  • ಈ ಪ್ಲಾಟ್ ಫಾರ್ಮ್ ಗಳ ಕಂಟೆಂಟ್ ಇದೀಗ ಮಾಹಿತಿ ಮತ್ತು ಪ್ರಸಾರ ಇಲಾಖೆಯ ವ್ಯಾಪ್ತಿಗೆ ಬಂದಿವೆ.
  • ಈ ಕುರಿತು ಇಲಾಖೆ ಹೊರಡಿಸಿರುವ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ.
ಇನ್ಮುಂದೆ Netflix,Hotstar ಹಾಗೂ ಇತರೆ OTT ಕಂಟೆಂಟ್ ಗಳ ಮೇಲೆ ಕೇಂದ್ರ ಸರ್ಕಾರದ ನಿಗಾ title=

ನವದೆಹಲಿ: ನೆಟ್‌ಫ್ಲಿಕ್ಸ್ (Netflix), ಹಾಟ್‌ಸ್ಟಾರ್ ಮತ್ತು ಅಮೆಜಾನ್ ಪ್ರೈಮ್‌ನಂತಹ ಒಟಿಟಿ ಪ್ಲಾಟ್ಫಾರ್ಮ್ ಗಳಲ್ಲಿ ಬಿಡುಗಡೆಯಾಗುತ್ತಿರುವ ಚಲನಚಿತ್ರಗಳು ಸೇರಿದಂತೆ ಎಲ್ಲಾ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಗಲಿರುವ ಆಡಿಯೋ ದೃಶ್ಯಗಳು, ಸುದ್ದಿ ಮತ್ತು ಕರೆಂಟ್ ಅಫೇರ್ಸ್ ವಿಷಯಗಳ ಕುರಿತು ಕೇಂದ್ರ ಸರ್ಕಾರ ತನ್ನ ಕಣ್ಗಾವಲು ಹೆಚ್ಚಿಸಿದೆ. ಕೇಂದ್ರ ಸರ್ಕಾರದ ಹೊಸ ಆದೇಶದ ಪ್ರಕಾರ, ಇವೆಲ್ಲವೂ ಈಗ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ (MIB) ವ್ಯಾಪ್ತಿಗೆ ಬರಲಿವೆ. ಇದರರ್ಥ ಈಗ ಈ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿರುವ ವಿಷಯಗಳ ಮೇಲೆ ಸಚಿವಾಲಯ ನಿಗಾವಹಿಸಲಿದೆ. ಇದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಮಂಗಳವಾರ ರಾತ್ರಿ ಕ್ಯಾಬಿನೆಟ್ ಸೆಕ್ರೆಟರಿಯಟ್ ಬಿಡುಗಡೆ ಮಾಡಿದೆ.

ಇದನ್ನು ಓದಿ- Netflix-ಅಮೆಜಾನ್ ಪ್ರೈಮ್ನಲ್ಲಿ ಮೂವೀಸ್, ವೆಬ್ ಸರಣಿಗಳನ್ನು ಉಚಿತವಾಗಿ ವೀಕ್ಷಿಸಿ

ಸರ್ಕಾರದ ಆದೇಶ ತಕ್ಷಣದಿಂದಲೇ ಅನ್ವಯಿಸಲಿದೆ
ಈ ಕುರಿತು ಹೊರಡಿಸಲಾಗಿರುವ ಅಧಿಸೂಚನೆಯ ಪ್ರಕಾರ, ಕೇಂದ್ರ ಸರ್ಕಾರವು ಸಂವಿಧಾನದ 77 ನೇ ಪರಿಚ್ಛೇದದ ಷರತ್ತು 3 ರ ಅಡಿಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದರ ಅಡಿಯಲ್ಲಿ ಕೇಂದ್ರ ಸರ್ಕಾರವು ಭಾರತ ಸರ್ಕಾರ (ವ್ಯವಹಾರ ಹಂಚಿಕೆ) ನಿಯಮಗಳು, 1961 ಕ್ಕೆ ತಿದ್ದುಪಡಿ ಮಾಡಿದೆ. ಸರ್ಕಾರ ಹೊರಡಿಸಿರುವ ಈ ಅಧಿಸೂಚನೆ ತಕ್ಷಣದಿಂದಲೇ ಜಾರಿಗೆ ಬಂದಿದೆ.

ಇದನ್ನು ಓದಿ- ಇದೀಗ Netflix ಸಹಾಯ ಇಲ್ಲದೆ ಉಚಿತವಾಗಿ ವೀಕ್ಷಿಸಿ HD Quality Movies

ದೀರ್ಘಕಾಲದಿಂದ ಈ ಬೇಡಿಕೆ ಇಡಲಾಗಿತ್ತು
ಈ ಹೊಸ ಸರ್ಕಾರದ ಆದೇಶದ ಮೂಲಕ, ಯಾವುದೇ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗುತ್ತಿರುವ ಸುದ್ದಿ, ಆಡಿಯೋ, ದೃಶ್ಯ ವಿಷಯ ಮತ್ತು ಚಲನಚಿತ್ರಗಳನ್ನು ನಿಯಂತ್ರಿಸುವ ಅಧಿಕಾರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಈಗ ಇದೆ. ಈ ಮೊದಲು, ಚಲನಚಿತ್ರಗಳಿಗೆ ಸೆನ್ಸಾರ್ ಬೋರ್ಡ್‌ನಂತಹ ಯಾವುದೇ ನಿಯಂತ್ರಕ ಸಂಸ್ಥೆ ಇರಲಿಲ್ಲ ಮತ್ತು ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್ ಮತ್ತು ಅಮೆಜಾನ್ ಪ್ರೈಮ್‌ನಂತಹ ಒಟಿಟಿಯಲ್ಲಿ ವೆಬ್ ಸರಣಿಗಳನ್ನು ಬಿಡುಗಡೆ ಮಾಡಲಾಗುತ್ತಿತ್ತು. ಇವುಗಳ ಬಗ್ಗೆಯೂ ನಿಗಾ ಇಡಬೇಕು ಎಂಬ ಬಗ್ಗೆ ನಿರಂತರ ಬೇಡಿಕೆ ಇತ್ತು.

Trending News