ಕೊಲೆ ಬೆದರಿಕೆ: ಅತ್ಯಾಧುನಿಕ ಬುಲೆಟ್ ಪ್ರೂಫ್ SUV ಖರೀದಿಸಿದ ನಟ ಸಲ್ಮಾನ್ ಖಾನ್!
Salman Khan bullet proof SUV: ಇತ್ತೀಚೆಗಷ್ಟೇ ನಟ ಸಲ್ಮಾನ್ ಖಾನ್ ಅವರಿಗೆ ಕೊಲೆ ಬೆದರಿಕೆ ಇಮೇಲ್ಗಳು ಬಂದಿದ್ದವು. ಇದರ ಮಧ್ಯೆ ಸೂಪರ್‌ಸ್ಟಾರ್ ಉನ್ನತ ಮಟ್ಟದ ಬುಲೆಟ್ ಪ್ರೂಫ್ ಎಸ್ಯುವಿಯನ್ನು ಖರೀದಿಸಿದ್ದಾರೆ.
ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್‌ಗೆ ನಿರಂತರವಾಗಿ ಕೊಲೆ ಬೆದರಿಕೆ ಹಾಕಲಾಗುತ್ತಿದೆ. ಕಳೆದೆರಡು ದಿನಗಳಲ್ಲಿ ಸಲ್ಲುಮಿಯಾಗೆ ಇ-ಮೇಲ್ ಬೆದರಿಕೆ ಮತ್ತು ಕೊಲೆ ಬೆದರಿಕೆ ಬಂದಿತ್ತು. ಹೀಗಾಗಿ ಅವರಿಗೆ ಮುಂಬೈ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದರು. ತನಗೆ ಬರುತ್ತಿರುವ ಎಲ್ಲಾ ಕೊಲೆ ಬೆದರಿಕೆಗಳ ನಡುವೆ, ಸಲ್ಮಾನ್ ಖಾನ್ ತನ್ನ ಸುರಕ್ಷತೆಗಾಗಿ ಅತ್ಯಾಧುನಿಕ ಬುಲೆಟ್ ಪ್ರೂಫ್ ಎಸ್‌ಯುವಿ ಖರೀದಿಸಿದ್ದಾರೆ.
ಹೊಸ ಬುಲೆಟ್ ಪ್ರೂಫ್ SUV ಖರೀದಿ
ಕೊಲೆ ಬೆದರಿಕೆಯಿಂದ ಆತಂಕದಲ್ಲಿರುವ ನಟ ಸಲ್ಮಾನ್ ಖಾನ್ ಅವರು ಪೆಟ್ರೋಲ್ ಎಂಜಿನ್ ಹೊಂದಿರುವ ಎಸ್‌ಯುವಿ ಖರೀದಿಸಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಇದುವರೆಗೆ ಲಭ್ಯವಿಲ್ಲದ ಕಾರಣ ಈ ಕಾರನ್ನು ಆಮದು ಮಾಡಿಕೊಳ್ಳಲಾಗಿದೆ. ಈ SUV ಭಾರತದಲ್ಲಿ ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಭದ್ರತೆಯ ದೃಷ್ಟಿಯಿಂದ ಈ ಕಾರು ಖರೀದಿಸಲು ಸಲ್ಮಾನ್ ಖಾನ್ ನಿರ್ಧರಿಸಿದ್ದಾರೆ.
ಇದನ್ನೂ ಓದಿ: Work From Home Scam: 8 ಲಕ್ಷ ರೂ. ರೂ. ಕಳೆದುಕೊಂಡ ಕರ್ನಾಟಕದ ಮಹಿಳೆ!
ಈ ಅತ್ಯಾಧುನಿಕ ಕಾರಿನ ಹೇಳುವುದಾದರೆ, ಇದು ದಕ್ಷಿಣ ಏಷ್ಯಾ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ SUVಗಳಲ್ಲಿ ಒಂದಾಗಿದೆ ಮತ್ತು ಅತ್ಯಂತ ದುಬಾರಿ ಮಾದರಿಯಾಗಿದೆ. ಈ ಕಾರಿನ ವಿಶೇಷತೆ ಎಂದರೆ ಇದು ಒಬ್ಬರ ಸುರಕ್ಷತೆಗೆ ಮಾತ್ರ ಉಪಯುಕ್ತವಾಗಿದೆ.
ಸದ್ಯ ನಟ ಸಲ್ಮಾನ್ ಖಾನ್ ‘ಕಿಸಿ ಕಾ ಭಾಯಿ ಕಿಸಿ ಕಿ ಜಾನ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಶೆಹನಾಜ್ ಗಿಲ್, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರವು ಏಪ್ರಿಲ್ 21ರಂದು ಬಿಡುಗಡೆಯಾಗಲಿದೆ.
ಇದನ್ನೂ ಓದಿ: ದೇಶದಲ್ಲಿ 6,050 ಹೊಸ ಕೋವಿಡ್ ಪ್ರಕರಣ: ಆರೋಗ್ಯ ಸಚಿವರಿಂದ ಉನ್ನತ ಮಟ್ಟದ ಸಭೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.