Work From Home Scam: 8 ಲಕ್ಷ ರೂ. ರೂ. ಕಳೆದುಕೊಂಡ ಕರ್ನಾಟಕದ ಮಹಿಳೆ!

Work-from-home Scam: Aidnet ಗ್ಲೋಬಲ್ ಮಾರ್ಕೆಟಿಂಗ್ ಕಂಪನಿಯಲ್ಲಿ HRನ ಸಹಾಯಕ ಮ್ಯಾನೇಜರ್ ಯೂಸ್ಫತ್ ಎಂದು ಹೇಳಿಕೊಂಡಿದ್ದ ವಂಚಕ, ಸರಿತಾ ಅವರಿಗೆ ಟಾಸ್ಕ್ ಪೂರ್ಣಗೊಳಿಸುವ ಮೂಲಕ ಲಾಭ ಗಳಿಸುವ ಅವಕಾಶದ ಭರವಸೆ ನೀಡಿದ್ದರು.

Written by - Puttaraj K Alur | Last Updated : Apr 7, 2023, 12:50 PM IST
  • ಮನೆಯಿಂದ ಕೆಲಸ ಮಾಡುವ ವಂಚನೆಯಲ್ಲಿ 8 ಲಕ್ಷ ರೂ. ಕಳೆದುಕೊಂಡ ಕರ್ನಾಟಕದ ಮಹಿಳೆ
  • ಮನೆಯಿಂದ ಹಣ ಸಂಪಾದಿಸುವ ಅವಕಾಶ ನೀಡುವ ವಾಟ್ಸಾಪ್ ಸಂದೇಶ ಸ್ವೀಕರಿಸಿದ್ದ ಮಹಿಳೆ
  • ಯೂಟ್ಯೂಬ್ ಚಾನೆಲ್‌ಗೆ ಪ್ರತಿ ಚಂದಾದಾರಿಕೆಗೆ 50 ರೂ. ಗಳಿಸಬಹುದು ಎಂಬ ಸಂದೇಶ ನೀಡಿದ್ದ ವಂಚಕರು
Work From Home Scam: 8 ಲಕ್ಷ ರೂ. ರೂ. ಕಳೆದುಕೊಂಡ ಕರ್ನಾಟಕದ ಮಹಿಳೆ! title=
8 ಲಕ್ಷ ಕಳೆದುಕೊಂಡ ಮಹಿಳೆ!

ನವದೆಹಲಿ: ಮನೆಯಿಂದ ಕೆಲಸ ಮಾಡುವ ವಂಚನೆಗೆ ಬಲಿಯಾಗಿ ಕರ್ನಾಟಕದ ಮಹಿಳೆಯೊಬ್ಬರು 8 ಲಕ್ಷ ರೂ. ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನ ಪ್ರಕಾರ ಗುರುಗ್ರಾಮ್‌ನ ಸೆಕ್ಟರ್ 43ರ ಪ್ರದೇಶದಲ್ಲಿ ನೆಲೆಸಿರುವ ಸರಿತಾ ಎಸ್, ಮನೆಯಿಂದ ಹಣ ಸಂಪಾದಿಸುವ ಅವಕಾಶ ನೀಡುವ ವಾಟ್ಸಾಪ್ ಸಂದೇಶವನ್ನು ಸ್ವೀಕರಿಸಿದ್ದರು.

ಯೂಟ್ಯೂಬ್ ಚಾನೆಲ್‌ಗೆ ಪ್ರತಿ ಚಂದಾದಾರಿಕೆಗೆ 50 ರೂ. ಗಳಿಸಬಹುದು ಎಂಬ ಸಂದೇಶವನ್ನು ಸರಿತಾ ಅವರು ಸ್ವೀಕರಿಸಿದ್ದರು. Aidnet ಗ್ಲೋಬಲ್ ಮಾರ್ಕೆಟಿಂಗ್ ಕಂಪನಿಯಲ್ಲಿ HRನ ಸಹಾಯಕ ಮ್ಯಾನೇಜರ್ ಯೂಸ್ಫತ್ ಎಂದು ಹೇಳಿಕೊಂಡಿದ್ದ ವಂಚಕ, ಸರಿತಾ ಅವರಿಗೆ ಟಾಸ್ಕ್ ಪೂರ್ಣಗೊಳಿಸುವ ಮೂಲಕ ಲಾಭ ಗಳಿಸುವ ಅವಕಾಶದ ಭರವಸೆ ನೀಡಿದ್ದರು.

ಇದನ್ನೂ ಓದಿ: Viral Video : ಓದೋ ವಯಸ್ಸಲ್ಲಿ ತರಗತಿಯಲ್ಲಿ ಈ ವಿದ್ಯಾರ್ಥಿಗಳು ಮಾಡ್ತಿರೋ ಕೆಲಸ ನೋಡಿ.!

ಸಂದೇಶದ ಪ್ರಕಾರ ಸರಿತಾ 2 ಚಾನಲ್‌ಗಳಿಗೆ ಚಂದಾದಾರಿಕೆ ಮಾಡಲು Receptionist ಲೈಲಾ ಎಂಬುವರಿಂದ ಕರೆ ಸ್ವೀಕರಿಸಿದ್ದರು. ನಂತರ ಲೈಲಾ ಟೆಲಿಗ್ರಾಮ್ ಐಡಿಯನ್ನು ಹಂಚಿಕೊಳ್ಳಲು ಸರಿತಾಳಿಗೆ ಸೂಚಿಸಿದ್ದರು. ನಂತರ ಅವರನ್ನು 180 ಸದಸ್ಯರಿದ್ದ ಟೆಲಿಗ್ರಾಮ್ ಗುಂಪಿಗೆ ಸೇರಿಸಲಾಗಿತ್ತು. ಬಳಿಕ ಸರಿಯಾ ನೀಡಿದ್ದ ಟಾಸ್ಕ್‍ಗಳನ್ನು ಮಾಡುತ್ತಿದ್ದರು. ಟಾಸ್ಕ್ ಪೂರ್ಣಗೊಳಿಸುವ ಮೂಲಕ ನೀವು ಹೆಚ್ಚು ಲಾಭ ಗಳಿಸಬಹುದು ಎಂದು ಲೈಲಾ ಸರಿತಾಗೆ ಹೇಳಿದ್ದಳು.

ಆದರೆ ಸರಿತಾ ಈ ಟಾಸ್ಕ್‌ನಿಂದ ಯಾವುದೇ ಲಾಭ ಗಳಿಸಲಿಲ್ಲ. ಬಳಿಕ ವಂಚಕರು ಅವರಿಗೆ 8.20 ಲಕ್ಷ ರೂ. ಟೋಪಿ ಹಾಕಿದ್ದಾರೆ. ವರ್ಕ್ ಫ್ರಮ್ ಹೋಮ್ ಕೆಲಸ ಸಿಗುತ್ತದೆ ಎಂದು ನಂಬಿದ್ದ ಸರಿತಾರಿಗೆ ವಂಚಕರು ಮೋಸ ಮಾಡಿದ್ದರು. ಈ ಬಗ್ಗೆ ಬುಧವಾರ ಮಾನೇಸರ್ ಪೊಲೀಸ್ ಠಾಣೆಯ ಸೈಬರ್ ಕ್ರೈಮ್ ವಿಭಾಗದಲ್ಲಿ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 419 (ಸೋಗಿನಲ್ಲಿ ವಂಚನೆ) ಮತ್ತು 420 (ವಂಚನೆ) ಅಡಿಯಲ್ಲಿ ಅಪರಿಚಿತ ಅಪರಾಧಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸತ್ತಿದ್ದಾರೆ.

ಇದನ್ನೂ ಓದಿ: OMG! ಕುಡಿದ ಮತ್ತಿನಲ್ಲಿ ಓರ್ವ ಯುವಕ ಮತ್ತೊರ್ವ ಯುವಕನ ಜೊತೆಗೆ ವಿವಾಹವಾದ... ಮುಂದೇನಾಯ್ತು ತಿಳಿಯಲು ಸುದ್ದಿ ಓದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News