ಅಭಿಷೇಕ್ ಜೊತೆಗಿನ ಡಿವೋರ್ಸ್ ವದಂತಿ ಮಧ್ಯೆ ಪುತ್ರಿಯೊಂದಿಗೆ ಒಬ್ಬಂಟಿಯಾಗಿ ಹೊರಹೋದ ಐಶ್ವರ್ಯ ರೈ! ವಿಚ್ಚೇದನ ಕನ್ಫರ್ಮ್??
Aishwarya Rai Abhishek Bachchan Divorce Rumors: ಬಾಲಿವುಡ್ ಮೂಲಗಳ ಪ್ರಕಾರ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯ ಚಾಕಣ ಚೂರಾಗುತ್ತಿದೆ ಎಂಬ ದಟ್ಟ ವದಂತಿಯನ್ನು ಅಲ್ಲಗೆಳೆಯಬೇಕು ಎನ್ನುವ ಕಾರಣಕ್ಕಾಗಿಯೇ ಅಮಿತಾಬ್ ಬಚ್ಚನ್ ಅವರಿಂದ ಹಿಡಿದು ಬಚ್ಚನ್ ಕುಟುಂಬದ ಎಲ್ಲರೂ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ...
Aishwarya Rai Abhishek Bachchan Divorce Rumors: ಬಾಲಿವುಡ್ನ ಸೆಲಬ್ರಿಟಿ ಸಂಗಾತಿಗಳಾಗಿದ್ದ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಬೇರೆಯಾಗೇಬಿಟ್ಟರು ಎನ್ನುವ ಗಾಸಿಪ್ ಈಗ ಇನ್ನಷ್ಟು ಗಟ್ಟಿಯಾಗುತ್ತಿದೆ. ಎಲ್ಲಾ ಸರಿಹೋಯಿತು ಎನ್ನುವಷ್ಟರಲ್ಲಿ ದಂಪತಿಗಳ ಮನಸುಗಳು ಮುರಿದು ಮೂರುಕಾಸಿಗೆ ಹರಾಜಾಗುತ್ತಿದೆ ಎನ್ನುವುದನ್ನು ನಿನ್ನೆ ನಡೆದ ಕಹಿ ಘಟನೆ ಬಿಡಿಬಿಡಿಸಿ ಹೇಳುತ್ತಿದೆ.
ನಿನ್ನೆ (ಡಿಸಂಬರ್ 19) ಪುತ್ರಿ ಆರಾಧ್ಯ ಓದುತ್ತಿರುವ ಮುಂಬೈನ ಸ್ಕೂಲಿನಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಇತ್ತು. ಬಾಲಿವುಡ್ನ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಇದ್ದ ಈ ಸಮಾರಂಭಕ್ಕೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಪ್ರತ್ಯೇಕವಾಗಿ ಆಗಮಿಸಿದರು. ಹೊರಡುವಾಗಲೂ ಐಶ್ವರ್ಯ ರೈ ಮಗಳು ಆರಾಧ್ಯಾ ಜೊತೆ ಹೊರಟ ಮೇಲೆ ಅಭಿಷೇಕ್ ಬಚ್ಚನ್ ತಡವಾಗಿ ಅಲ್ಲಿಂದ ತೆರಳಿದರು.
ಇದನ್ನೂ ಓದಿ- ಅಂಗರಕ್ಷಕನಾಗಿದ್ದವ ಇಂದು ಯಶ್'ಗೆ ವಿಲನ್! ನಟನನ್ನು ಮುಗಿಸಲು ಸ್ಕೆಚ್ ಹಾಕಿದ ಈತ ಯಾರು ಗೊತ್ತಾ..?
ಬಾಲಿವುಡ್ ಮೂಲಗಳ ಪ್ರಕಾರ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯ ಚಾಕಣ ಚೂರಾಗುತ್ತಿದೆ ಎಂಬ ದಟ್ಟ ವದಂತಿಯನ್ನು ಅಲ್ಲಗೆಳೆಯಬೇಕು ಎನ್ನುವ ಕಾರಣಕ್ಕಾಗಿಯೇ ಅಮಿತಾಬ್ ಬಚ್ಚನ್ ಅವರಿಂದ ಹಿಡಿದು ಬಚ್ಚನ್ ಕುಟುಂಬದ ಎಲ್ಲರೂ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ಕಡೆಗಾಗಿದ್ದು ಬೇರೆಯೇ. ಮತ್ತೆ ಅನುಮಾನಗಳಿಗೆ ಅನುವುಮಾಡಿಕೊಡುವಂತೆಯೇ ಆಯಿತು.
ಇದನ್ನೂ ಓದಿ- ಬಿಗ್ ಬಾಸ್‌ನಿಂದ ಹೊರಬರಲು ಇದೇ ಮುಖ್ಯ ಕಾರಣ: ಜೀ ಕನ್ನಡ ನ್ಯೂಸ್‌ಗೆ ಗೋಲ್ಡ್ ಸುರೇಶ್ ಸ್ಪಷ್ಟನೆ
ಕಾರ್ಯಕ್ರಮದ ವೇಳೆ ಐಶ್ವರ್ಯ ರೈ, ಆರಾಧ್ಯಾ, ಅಭಿಷೇಕ್ ಬಚ್ಚನ್ ಮತ್ತು ಅಮಿತಾಬಚ್ಚನ್ ಒಟ್ಟಿಗೆ ಇರುವ ಫೋಟೋಗಳೂ ಇವೆ. ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಅಭಿಮಾನಿಗಳು ‘ದಂಪತಿಗಳ ನಡುವೆ ಏನೇನು ಆಗಿಲ್ಲ’ ಅಂತಾ ಬರೆಯುತ್ತಿದ್ದಾರೆ. ಆದರೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಪ್ರತ್ಯೇಕವಾಗಿ ಕಾರ್ಯಕ್ರಮಕ್ಕೆ ಬಂದಿದ್ದು ಹಾಗು ಹೋಗಿದ್ದ ವಿಡಿಯೋಗಳು ‘ಪ್ರೇಮ್ ಕಹಾನಿ’ಯನ್ನು ಬೇರೆ ರೀತಿ ಹೇಳುತ್ತಿವೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.