ನವದೆಹಲಿ: ಯಾವಾಗಲು ತನ್ನ ಬೋಲ್ಡ್ ಭಾವಚಿತ್ರಗಳನ್ನು ತನ್ನ ಸಾಮಾಜಿಕ ಮಾಧ್ಯಮಗಳ ಖಾತೆಗೆ ಹಂಚಿಕೊಳ್ಳುವ ಖ್ಯಾತ ಬಾಲಿವುಡ್ ನಟಿ ಅಮಿಷಾ ಪಟೇಲ್ ಆಗಾಗ ಹೆಡ್ಲೈನ್ ಲೈನ್ ಗಿಟ್ಟಿಸುತ್ತಲೇ ಇರುತ್ತಾಳೆ. ಅಮಿಷಾ ಇನ್ಸ್ಟಾಗ್ರಾಮ್ ಖಾತೆಯನ್ನೊಮ್ಮೆ ಗಮನಿಸಿ. ಆಗಾಗ ತನ್ನ ನೂತನ ಭಾವಚಿತ್ರಗಳನ್ನು ಹಂಚಿಕೊಳ್ಳುವ ಈ ನಟಿ ತನ್ನ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾಳೆ. ಆದರೆ, ಇತ್ತೀಚಿಗೆ ಅಮಿಷಾ ಮಾಡಿರುವ ಒಂದು ಕೆಲಸದ ಕಾರಣ ಜನರು ಅವಳನ್ನು ಭಾರಿ ಟ್ರೋಲ್ ಮಾಡರಂಭಿಸಿದ್ದಾರೆ.


COMMERCIAL BREAK
SCROLL TO CONTINUE READING

ಅಮೀಷಾ ಆಗಾಗ್ಗೆ ವಿವಿಧ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಾಳೆ, ಆದರೆ ಸದ್ಯಕ್ಕೆ ಲಾಕ್ ಡೌನ್ ಕಾರಣ ಎಲ್ಲರೂ ತಮ್ಮ ತಮ್ಮ ಉಳಿದುಕೊಂಡಿದ್ದು, ಕೆಲವೇ ಕೆಲವರು ಹೊರಗೆ ಹೋಗುತ್ತಿದ್ದಾರೆ, ಆದರೆ ಇತ್ತೀಚೆಗೆ ಅಮಿಷಾ ಬಹಳ ಸಮಯದ ನಂತರ ದೇವಾಲಯವೊಂದರ ಹೊರಗೆ ಕಾಣಿಸಿಕೊಂಡಿದ್ದಾಳೆ. ಈ ಕುರಿತಾದ ಅವಳ  ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ಭಾರಿ ವೈರಲ್ಆಗುತ್ತಿದೆ. ಅವಳ ಈ ವಿಡಿಯೋ ವಿಡಿಯೋ ನೋಡಿದ ನಂತರ ಜನರು ಅಮಿಷಾ ಅವರನ್ನು ಭಾರಿ ಟ್ರೋಲ್ ಮಾಡಲು ಆರಂಭಿಸಿದ್ದಾರೆ.



ವಿಷಯ ಏನು ಅಂದ್ರೆ, ಅಮಿಷಾ ಇತ್ತೀಚಿಗೆ ದೇವರ ದರುಶನಕ್ಕೆಂದು ದೇವಸ್ಥಾನಕ್ಕೆ ಹೋಗಿದ್ದಾರೆ. ಆದರೆ, ದೇವಸ್ಥಾನಕ್ಕೆ ಹೋಗಲು ಅಮಿಷಾ ಧರಿಸಿರುವ ಡ್ರೆಸ್ ಜನರಿಗೆ ಅಷ್ಟೊಂದು ಇಷ್ಟವಾಗಿಲ್ಲ ಎಂಬಂತೆ ಕಂಡುಬರುತ್ತಿದೆ. ದೇವರ ದರ್ಶನಕ್ಕ್ ಹೋಗುವ ವೇಳೆ ಅಮಿಷಾ ಯಾವ ರೀತಿ ಬಟ್ಟೆ ಧರಿಸಬೇಕು ಎಂಬ ಸಲಹೆ ನೀಡುತ್ತಿರುವ ಜನರು ಅವಳನ್ನು ಟ್ರೋಲ್ ಕೂಡ ಮಾಡುತ್ತಿದ್ದಾರೆ.


ಸದ್ಯ ಶ್ರಾವಣ ಮಾಸ ನಡೆಯುತ್ತಿದೆ. ಶ್ರಾವಣ ಮಾಸದಲ್ಲಿ ಶಿವನ ಪೂಜೆಗೆ ಭಾರಿ ಮಹತ್ವ ಇದೆ. ಅಮಿಷಾ ಕೂಡ ದೇವಾಧಿದೇವ ಶಿವನ ದರ್ಶನ ಪಡೆಯಲು ದೇವಸ್ಥಾನದ ಹೊರಗೆ ಕಾಣಿಸಿಕೊಂಡಿದ್ದಾರೆ. ದರ್ಶನಕ್ಕೆ ಹೋಗುವ ವೇಳೆ ಅಮಿಷಾ ಟ್ಯಾಂಕ್ ಟಾಪ್ ಹಾಗೂ ಶಾರ್ಟ್ಸ್ ಧರಿಸಿದ್ದು, ಅಮಿಷಾ ಅವರ ಈ ಉಡುಗೆ ಅವಳ ಅಭಿಮಾನಿಗಳಿಗೆ ಮೆಚ್ಚುಗೆಯಾಗಿಲ್ಲ ಮತ್ತು ಅವರು ಅಮಿಷಾ ಕಾಲೆಳೆಯಲು ಆರಂಭಿಸಿದ್ದಾರೆ. ಈ ವೇಳೆ ಅಮಿಷಾ ಮಾಸ್ಕ್ ಕೂಡ ಧರಿಸಿದ್ದಾಳೆ. ಯಾವಾಗಲು ತನ್ನ ಬೋಲ್ಡ್ ಲುಕ್ ನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿ ಏರಿಸುವ  ನಟಿಯ ವಿಡಿಯೋ ಹಾಗೂ ಭಾವಚಿತ್ರಗಳನ್ನು ಹಂಚಿಕೊಳ್ಳುತ್ತಿರುವ ಆಕೆಯ ಅಭಿಮಾನಿಗಳು ಇದೆಗ ಆಕೆಯನ್ನು ಭಾರಿ ಟ್ರೋಲ್ ಮಾಡುತ್ತಿದ್ದಾರೆ.