India v/s Bharat ಚರ್ಚೆಯ ನಡುವೆ ಅಮಿತಾಬ್ ಬಚ್ಚನ್ ಪೋಸ್ಟ್ ವೈರಲ್
Amitabh Bachchan : ಅಮಿತಾಬ್ ಬಚ್ಚನ್ ಇತ್ತೀಚೆಗೆ ಎಕ್ಸ್ (ಟ್ವಿಟ್ಟರ್) ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದು ಕೋಲಾಹಲವನ್ನು ಸೃಷ್ಟಿಸಿದೆ.
India v/s Bharat : ಜಿ-20 ಶೃಂಗಸಭೆಯ ಔತಣ ಕೂಟದ ಆಹ್ವಾನವು ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ. ಇಂಡಿಯಾ ಮತ್ತು ಭಾರತ ಎಂಬ ಈ ಎರಡು ಹೆಸರುಗಳ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ದೇಶದಲ್ಲಿ ನಡೆಯುತ್ತಿರುವ ಸಮಸ್ಯೆಗಳ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಲು ಹಿಂಜರಿಯುವುದಿಲ್ಲ. ಇತ್ತೀಚೆಗಷ್ಟೇ ಅವರು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಮಿತಾಬ್ ಬಚ್ಚನ್ ಇತ್ತೀಚೆಗೆ ಎಕ್ಸ್ (ಟ್ವಿಟ್ಟರ್) ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಅದು ಕೋಲಾಹಲವನ್ನು ಸೃಷ್ಟಿಸಿತು. ಅವರ ಪೋಸ್ಟ್ ನೋಡಿದ ಜನರು ಅವರು ಇದನ್ನು ಏಕೆ ಬರೆದಿದ್ದಾರೆ ಎಂದು ಯೋಚಿಸುತ್ತಿದ್ದಾರೆ.
ಜಾನೆ ಜಾನ್ ಟ್ರೈಲರ್ ರಿಲೀಸ್ : ಚೊಚ್ಚಲ OTT ಸಿನಿಮಾದಲ್ಲಿ ಕರೀನಾ ಕಪೂರ್
ಅಮಿತಾಬ್, 'ಭಾರತ್ ಮಾತಾ ಕೀ ಜೈ' ಎಂದು ಘೋಷಣೆಯನ್ನು ಬರೆದು ಪೋಸ್ಟ್ ಮಾಡಿದ್ದಾರೆ. ದೇಶದ ಇಂಗ್ಲಿಷ್ ಹೆಸರು ಇಂಡಿಯಾ ವನ್ನು ರದ್ದುಗೊಳಿಸಲು ಸರ್ಕಾರ ಯೋಜಿಸುತ್ತಿದೆ ಎಂಬ ವರದಿಗಳಿವೆ. ಶೀಘ್ರದಲ್ಲೇ ಸರ್ಕಾರವು ಈ ಪ್ರಸ್ತಾವನೆಯನ್ನು ಸಂಸತ್ತಿನಲ್ಲಿ ಮಂಡಿಸಬಹುದು ಎಂಬ ಹೇಳಲಾಗ್ತಿದೆ. ಈ ಸುದ್ದಿಗಳ ನಡುವೆ, ಜನರು ಅಮಿತಾಬ್ ಬಚ್ಚನ್ ಅವರ ಈ ಟ್ವೀಟ್ ಅನ್ನು ಸಂಯೋಜಿಸುತ್ತಿದ್ದಾರೆ. ಟ್ವೀಟ್‌ನ ಎಡಭಾಗದಲ್ಲಿ ಅವರು ತ್ರಿವರ್ಣ ಧ್ವಜದ ಎಮೋಜಿಯನ್ನು ಹಾಕಿದ್ದಾರೆ ಮತ್ತು ಬಲಭಾಗದಲ್ಲಿ ಅವರು ಕೆಂಪು ಧ್ವಜದ ಎಮೋಜಿಯನ್ನು ಹಾಕಿದ್ದಾರೆ.
ಆದರೆ, ಈ ಹೇಳಿಕೆಗಳಲ್ಲಿ ಎಷ್ಟರಮಟ್ಟಿಗೆ ಸತ್ಯಾಂಶವಿದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ. ಸದ್ಯ ರಾಜಕೀಯ ವಲಯದಿಂದ ದೇಶದ ಹೆಸರಲ್ಲಿ ಚರ್ಚೆ ನಡೆಯುತ್ತಿದ್ದು, ಬಾಲಿವುಡ್‌ಗೂ ಕಾಲಿಟ್ಟಿದೆ.
ಇದನ್ನೂ ಓದಿ: ಸೀರೆಯುಟ್ಟು ನಾಭಿ ದರ್ಶನ ಮಾಡಿಸಿದ ಮೌನಿ ರಾಯ್...ಫೋಟೋಸ್ ನೋಡಿ
ಜಿ-20 ಶೃಂಗಸಭೆಯ ವೇಳೆ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾದ ಔತಣಕೂಟದ ಆಮಂತ್ರಣ ಪತ್ರದ ಬಗ್ಗೆಯೂ ವಿವಾದ ಉದ್ಭವಿಸಿದೆ. ಸೆಪ್ಟೆಂಬರ್ 9 ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಜಿ-20 ಔತಣಕೂಟದ ಆಮಂತ್ರಣ ಪತ್ರಿಕೆಯಲ್ಲಿ 'ಪ್ರೆಸಿಡೆಂಟ್ ಆಫ್ ಇಂಡಿಯಾ' ಬದಲು 'ಪ್ರೆಸಿಡೆಂಟ್ ಆಫ್ ಭಾರತ' ಎಂದು ಬರೆಯಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.