ಡಾ.ರಾಜಕುಮಾರ್ ರನ್ನು ನೋಡಲು ಓಡೋಡಿ ಬಂದಿದ್ದ ಅಮಿತಾಬ್ ಬಚ್ಚನ್...!
ವರನಟ ಡಾ ರಾಜ್‌ಕುಮಾರ್ ಅವರು ಇಂದು ಬದುಕಿದ್ದರೆ ಅವರಿಗೆ 93 ವರ್ಷ ತುಂಬಿರುತ್ತಿತ್ತು,1929ರ ಏಪ್ರಿಲ್ 24ರಂದು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು ಆಗಿ ಜನಿಸಿದ ಅವರು ನಾಡಿನಾದ್ಯಂತೆ ರಾಜಕುಮಾರ್ ಎಂದೇ ಮನೆಮಾತಾಗಿದ್ದರು.
ಬೆಂಗಳೂರು: ವರನಟ ಡಾ ರಾಜ್‌ಕುಮಾರ್ ಅವರು ಇಂದು ಬದುಕಿದ್ದರೆ ಅವರಿಗೆ 93 ವರ್ಷ ತುಂಬಿರುತ್ತಿತ್ತು,1929ರ ಏಪ್ರಿಲ್ 24ರಂದು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು ಆಗಿ ಜನಿಸಿದ ಅವರು ನಾಡಿನಾದ್ಯಂತೆ ರಾಜಕುಮಾರ್ ಎಂದೇ ಮನೆಮಾತಾಗಿದ್ದರು.ಕನ್ನಡದ ಕಲಾ ಮತ್ತು ಸಾಂಸ್ಕೃತಿಕ ಜಗತ್ತಿನಲ್ಲಿ ರಾಜಕುಮಾರ್ ಅವರದ್ದು ಅಗ್ರಸ್ಥಾನ, ತಮ್ಮ ಅಸಾಧಾರಣ ನಟನಾ ಕೌಶಲ್ಯದ ಜೊತೆಗೆ, ಅಣ್ಣಾವ್ರು ಎಂದು ಜನಪ್ರಿಯರಾಗಿದ್ದ ರಾಜಕುಮಾರ್ ಅವರು ತಮ್ಮ ವಿನಮ್ರತೆಯಿಂದಲೂ ನಾಡಿನ ಜನರ ಕಣ್ಮಣಿಯಾಗಿದ್ದರು.ಅವರಿಗೆ ಅಷ್ಟೆಲ್ಲಾ ಜನಪ್ರಿಯತೆ ಇದ್ದರೂ ಅವರು ತಮ್ಮ ಜೀವನದುದ್ದಕ್ಕೂ ಸ್ಟಾರ್ ಗಿರಿಯನ್ನು ತೋರಿಸಿದವರಲ್ಲ.
ಈಗ ಇಂತಹ ಮಹಾನ್ ವ್ಯಕ್ತಿಯ ಕುರಿತಾಗಿ ಹಾಸ್ಯ ಕಲಾವಿದ ದಯಾನಂದ್ ಅವರು ಅಣ್ಣಾವ್ರು ಅವರ ಮಗುವಿನಂತಹ ಗುಣವನ್ನು ಪ್ರದರ್ಶಿಸುವ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.ಕರ್ನಾಟಕದಲ್ಲಿ ನಿರ್ದೇಶಕ ಕೆ.ವಿ.ರಾಜು ಅವರ ಇಂದ್ರಜೀತ್ ಚಿತ್ರದ ಚಿತ್ರೀಕರಣದಲ್ಲಿದ್ದ ಅಣ್ಣಾವ್ರು ಮತ್ತು ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರ ಭೇಟಿಯಾದ ಕ್ಷಣವನ್ನು ಅವರು ನೆನಪಿಸಿಕೊಂಡಿದ್ದಾರೆ.
ಇಂದು ವರನಟ ಡಾ.ರಾಜ್ ಕುಮಾರ್ 94 ಹುಟ್ಟುಹಬ್ಬ: ಅಭಿಮಾನಿ ಸಂಘಗಳಿಂದ ರಥೋತ್ಸವ
'ನಾನು ಅಣ್ಣಾವ್ರು ಜೊತೆ ಪರಶುರಾಮ್ ಚಿತ್ರೀಕರಣದಲ್ಲಿದ್ದಾಗ, ನಾವು ಅಮಿತಾಬ್ ಬಚ್ಚನ್ ಅವರನ್ನು ಭೇಟಿ ಮಾಡಬಹುದೇ? ಎಂದು ಅವರು ನನ್ನನ್ನು ಕೇಳಿದರು. ಆಗ ನಾನು ಖಂಡಿತ, ಅವರು ನಿಮಗೆ ಅವಕಾಶ ನೀಡುತ್ತಾರೆ ಎಂದು ಹೇಳಿದೆ.ಆಗ ಅವರು, ‘ಹೆಚ್ಚು ಭದ್ರತೆ ಇರುತ್ತದೆ ಅಲ್ಲವೇ? ಎಂದು ನನ್ನನ್ನು ಕೇಳಿದರು.ಅಣ್ಣಾವ್ರಿಗೆ ಕರ್ನಾಟಕದಲ್ಲಿ ಪ್ರವೇಶವನ್ನು ಯಾರಾದರೂ ನಿರಾಕರಿಸುತ್ತಾರಾ ಹೇಳಿ? ಆದರೆ ಅವರು ಅಮಿತಾಬ್ ಬಚ್ಚನ್ ಅವರನ್ನು ಭೇಟಿ ಮಾಡಲು ಅನುಮತಿ ನೀಡುತ್ತಾರೆಯೇ? ಎಂದು ಆಶ್ಚರ್ಯಪಡುವ ಸಾಮಾನ್ಯ ಮನುಷ್ಯನಂತೆ ಇದ್ದರು.ಅವರು ಯಾವಾಗಲೂ ಹಾಗೆ ಇರುತ್ತಿದ್ದರು, ಎಂದು ದಯಾನಂದ ಹೇಳಿದರು.
ಇದೇ ವೇಳೆ ಅಮಿತಾಬ್ ಬಚ್ಚನ್ ಅವರು ಇದ್ದ ಶೂಟಿಂಗ್ ಸ್ಥಳಕ್ಕೆ ಅಣ್ಣಾವ್ರು ಆಗಮಿಸುತ್ತಿರುವುದನ್ನು ನೋಡಿ ಅಮಿತಾಭ್ ಹೇಗೆ ಪ್ರತಿಕ್ರಿಯಿಸಿದರು ಎನ್ನುವುದನ್ನು ದಯಾನಂದ್ ವಿವರಿಸಿದ್ದಾರೆ. "ಅಮಿತಾಭ್ ಬಚ್ಚನ್ ಸುತ್ತಲೂ ಭಾರೀ ಭದ್ರತೆಯನ್ನು ನಿಯೋಜಿಸಲಾಗಿತ್ತು.ಅವರಿಂದ ಅರ್ಧ ಕಿಲೋಮೀಟರ್ ವ್ಯಾಪ್ತಿಯೊಳಗೆ ಯಾರಿಗೂ ಅವಕಾಶವಿರಲಿಲ್ಲ.ಮತ್ತು ಅವರು ತಮ್ಮ ಗಡ್ಡವನ್ನು ಸರಿಪಡಿಸುತ್ತಾ ಕುರ್ಚಿಯ ಮೇಲೆ ಕುಳಿತಿದ್ದರು.ಆಗ ಅಣ್ಣಾವ್ರುನ್ನು ನೋಡಿದ ತಕ್ಷಣ ಎಲ್ಲವನ್ನು ಒಮ್ಮೆಗೇ ಅಲ್ಲಿಯೇ ಕೈಬಿಟ್ಟು ಶಾಲೆ ಬಿಟ್ಟ ತಕ್ಷಣ ಅಪ್ಪನನ್ನು ನೋಡಿದ ಮಗುವಿನಂತೆ ಓಡಿ ಬಂದರು.ಅಣ್ಣಾವ್ರು ಹತ್ತಿರ ಓಡಿ ಬಂದು ಆಮೇಲೆ ಅವರ ಪಾದವನ್ನು ಮುಟ್ಟಿ ನಮಸ್ಕರಿಸಿದರು 'ನೀವು ಹೇಳಿದ್ದರೆ ನಾನೇ ಬಂದು ಭೇಟಿ ಮಾಡುತ್ತಿದ್ದೆ.ನೀವು ಮಹಾನ್ ವ್ಯಕ್ತಿ, ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಸರ್' ಎಂದು ಅಣ್ಣಾವ್ರು ಭೇಟಿಯ ವೇಳೆ ಅಮಿತಾಬ್ ಹೇಳಿದ ಮಾತುಗಳನ್ನು ದಯಾನಂದ್ ನೆನಪಿಸಿಕೊಂಡರು.
ಇದನ್ನೂ ಓದಿ: ಅಣ್ಣಾವ್ರ ಹುಟ್ಟುಹಬ್ಬ ಹಿನ್ನೆಲೆ : ಮಹಾತ್ಕಾರ್ಯಕ್ಕೆ ಮುಂದಾದ ಅಶ್ವಿನಿ
ಇನ್ನೂ ಮುಂದುವರೆದು ಅಣ್ಣಾವ್ರು ಅವರ ಇಂಗ್ಲಿಷ್ ನಿರರ್ಗಳತೆಯಿಂದ ನಾನು ತುಂಬಾ ಪ್ರಭಾವಿತನಾಗಿದ್ದೆ ಎಂದು ದಯಾನಂದ ಸ್ಮರಿಸಿಕೊಂಡರು. “ಅಣ್ಣಾವ್ರು ಇಂಗ್ಲಿಷ್ ಮಾತನಾಡುವುದನ್ನು ನಾನು ಮೊದಲ ಬಾರಿಗೆ ನೋಡಿದೆ.ಅವರು ಅಮಿತಾಭ್ ಅವರಿಗೆ, ‘ನನ್ನ ಮಗ ಪುನೀತ್ ನಿಮ್ಮ ದೊಡ್ಡ ಅಭಿಮಾನಿ.ನನ್ನ ಮಕ್ಕಳೆಲ್ಲ ನಿಮ್ಮ ಅಭಿಮಾನಿಗಳು.ಈಗ ನಿಮ್ಮ ಕೈ ಹೇಗಿದೆ? ನಿಮ್ಮ ಹೊಟ್ಟೆ ಹೇಗಿದೆ? ನೀವು ನಮ್ಮ ಸ್ಥಳಕ್ಕೆ ಬಂದಿರುವುದು ತುಂಬಾ ಸಂತೋಷವಾಗಿದೆ. ಕೆವಿ ರಾಜು ತುಂಬಾ ಒಳ್ಳೆಯ ನಿರ್ದೇಶಕ. ನಮ್ಮ ಕಡೆಯಿಂದ ನಿಮಗೇನಾದರೂ ಸಮಸ್ಯೆಯಿದ್ದರೆ ನಾವೂ ಬೇರೆ ಸ್ಥಳಕ್ಕೆ ಶಿಫ್ಟ್ ಆಗುತ್ತೇವೆ' ಎಂದು ರಾಜಕುಮಾರ ಅಮಿತಾಬ್ ಬಚ್ಚನ್ ಅವರಿಗೆ ಹೇಳಿದ್ದನ್ನು ದಯಾನಂದ್ ಅವರು ಸ್ಮರಿಸಿಕೊಂಡಿದ್ದಾರೆ.
ಅಣ್ಣಾವ್ರು ಅವರ ಮಾತಿಗೆ ಪ್ರತಿಯಾಗಿ ಅಮಿತಾಭ್ ಅವರು ಪರಶುರಾಮ್ ಸೆಟ್‌ನಲ್ಲಿದ್ದ ಇಡೀ ಪಾತ್ರವರ್ಗ ಮತ್ತು ಸಿಬ್ಬಂದಿಯೊಂದಿಗೆ ಚಿತ್ರವನ್ನು ತೆಗೆದುಕೊಂಡರು ಎಂದು ದಯಾನಂದ್ ಸ್ಮರಿಸಿಕೊಳ್ಳುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.