ಇಂದು ವರನಟ ಡಾ.ರಾಜ್ ಕುಮಾರ್ 94ನೇ ಹುಟ್ಟುಹಬ್ಬ: ಅಭಿಮಾನಿ ಸಂಘಗಳಿಂದ ರಥೋತ್ಸವ

ಚಾಮರಾಜನಗರ ಜಿಲ್ಲೆ ಗಡಿಭಾಗದಲ್ಲಿರುವ ಗಾಜನೂರಿನಲ್ಲಿ 1929ರ ಏಪ್ರಿಲ್ 24ರಂದು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿ ಪುತ್ರನಾಗಿ ಮುತ್ತುರಾಜ್ ಜನಿಸಿದರು.

Last Updated : Apr 24, 2022, 08:01 PM IST
  • ಇಂದು ವರನಟ ಡಾ.ರಾಜ್ ಕುಮಾರ್ ಅವರ 94ನೇ ಹುಟ್ಟುಹಬ್ಬ
  • ಡಾ.ರಾಜ್ ಸ್ಮಾರಕಕ್ಕೆ ಕುಟುಂಬಸ್ಥರು, ಅಭಿಮಾನಿಗಳಿಂದ ಪೂಜೆ
  • ಡಾ.ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿ ಸಂಘಗಳಿಂದ ರಥಯಾತ್ರೆ
ಇಂದು ವರನಟ ಡಾ.ರಾಜ್ ಕುಮಾರ್ 94ನೇ ಹುಟ್ಟುಹಬ್ಬ: ಅಭಿಮಾನಿ ಸಂಘಗಳಿಂದ ರಥೋತ್ಸವ title=
ಡಾ.ರಾಜ್ ಕುಮಾರ್ ಅವರ 94ನೇ ಹುಟ್ಟುಹಬ್ಬ

ಬೆಂಗಳೂರು: ಇಂದು ಗಾನ ಗಂಧರ್ವ, ಪದ್ಮ ಭೂಷಣ, ನಟಸಾರ್ವಭೌಮ ವರನಟ ಡಾ.ರಾಜ್ ಕುಮಾರ್ ಅವರ 94 ಹುಟ್ಟುಹಬ್ಬ. ಚಾಮರಾಜನಗರ ಜಿಲ್ಲೆ ಗಡಿಭಾಗದಲ್ಲಿರುವ ಗಾಜನೂರಿನಲ್ಲಿ 1929ರ ಏಪ್ರಿಲ್ 24ರಂದು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿ ಪುತ್ರನಾಗಿ ಮುತ್ತುರಾಜ್ ಜನಿಸಿದರು. ಭಾರತೀಯ ಚಿತ್ರರಂಗದ ಮೇರುನಟನಾಗಿ ಬೆಳೆದ ಡಾ. ರಾಜ್ ಕನ್ನಡ ಚಿತ್ರರಂಗ ಮಾತ್ರವಲ್ಲ, ನಾಡು ನುಡಿಗಾಗಿ ಸಲ್ಲಿಸಿರುವ ಕೊಡುಗೆ ಅಪಾರ. ಅವರ ವ್ಯಕ್ತಿತ್ವ, ಅವರ ಸಾಧನೆಗಳೆಲ್ಲವೂ ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಚಿರಸ್ಥಾಯಿಯಾಗಿದೆ.

ಡಾ.ರಾಜ್ ಗೊತ್ತಿಲ್ಲದ ಕನ್ನಡಿಗರು ಬಹುಶಃ ಇರಲಿಕ್ಕಿಲ್ಲ. ಕನ್ನಡ ಸಿನೆಮಾರಂಗದ ಧ್ರುವರತ್ನವಾಗಿ ಬೆಳಗಿದ ಡಾ.ರಾಜ್ ಬೆಳೆದದ್ದು ಈಗ ಇತಿಹಾಸ. ಇಂದು ಅವರ 94 ಹುಟ್ಟಿದ ದಿನ. ಸಹಜವಾಗಿ ಕನ್ನಡಿಗರು ಅವರನ್ನು ಸ್ಮರಿಸುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಡಾ.ರಾಜ್ ಸ್ಮಾರಕಕ್ಕೆ ಇಂದು ಅವರ ಮಕ್ಕಳು, ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಸಾವಿರಾರು ಅಭಿಮಾನಿಗಳು ಡಾ.ರಾಜ್ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಅಣ್ಣಾವ್ರ ಹುಟ್ಟುಹಬ್ಬ ಹಿನ್ನೆಲೆ : ಮಹಾತ್ಕಾರ್ಯಕ್ಕೆ ಮುಂದಾದ ಅಶ್ವಿನಿ

ಅಭಿಮಾನಿ ಸಂಘಗಳಿಂದ ರಥಯಾತ್ರೆ

ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಬೆಂಗಳೂರಿನ ಅಭಿಮಾನಿ ಸಂಘಗಳಿಂದ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 11 ಗಂಟೆಗೆ ಡಾ.ರಾಜ್ ಸಮಾಧಿಯಿಂದ ಕೂಲಿ ನಗರ ಬ್ರಿಡ್ಜ್‍ನವರೆಗೆ ಶ್ರೀರಾಜ್ ರಥೋತ್ಸವ ನಡೆಯಲಿದೆ. ಮಧ್ಯಾಹ್ನ 10 ಸಾವಿರ ಜನರಿಗೆ ಅನ್ನದಾನ ಕಾರ್ಯಕ್ರಮವನ್ನು ಸಹ ಏರ್ಪಪಡಿಸಲಾಗಿದೆ.

ಬೆಳ್ಳಿ ರಥದಲ್ಲಿ ರಥಯಾತ್ರೆ

ಅಣ್ಣಾವ್ರ ಜನ್ಮದಿನ ಪ್ರಯುಕ್ತ ಡಾ.ರಾಜ್ ಹಾಗೂ ಅಪ್ಪು ಅಭಿಮಾನಿ ಸಂಘದ ಎನ್.ಆರ್.ರಮೇಶ್ ಹಾಗೂ ಹೊನ್ನೇಗೌಡ ನೇತೃತ್ವದಲ್ಲಿ ಬೆಳ್ಳಿ ರಥದಲ್ಲಿ ವಿಜಯನಗರ ತನಕ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಅಣ್ಣಾವ್ರ ಹುಟ್ಟುಹಬ್ಬಕ್ಕೆ ಸಾಕಷ್ಟು ವರ್ಷಗಳಿಂದ ಅಜ್ಜಿಯೊಬ್ಬರು ಕಡಲೆಪುರಿ ಹಾರವನ್ನು ‌ಹಾಕುತ್ತಾ ಬಂದಿದ್ದಾರೆ. ಅದೇ ರೀತಿ ಪ್ರತಿ ವರ್ಷದಂತೆ ಈ ವರ್ಷವೂ ಆ ಅಜ್ಜಿ ಡಾ.ರಾಜ್ ಸ್ಮಾರಕಕ್ಕೆ ಭೇಟಿ ನೀಡಿ ಸಮಾಧಿಗೆ ಕಡಲೆಪುರಿ ಹಾರವನ್ನು ಹಾಕಿ  ನಮಸ್ಕರಿಸಿದ್ದಾರೆ.

ಇದನ್ನೂ ಓದಿ: ಕೆಜಿಎಫ್ 2 ಚಿತ್ರ ನನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ನೆನಪಿಸಿತು - ಸಂಜಯ್ ದತ್

ಡಾ.ರಾಜ್ ಸ್ಮಾರಕಕ್ಕೆ ನಳೀನ್ ಕುಮಾರ್ ಕಟೀಲ್ ಭೇಟಿ

ವರನಟ ಡಾ.ರಾಜ್ ಕುಮಾರ್ ಅವರು ಪರಂಪರೆಗಳನ್ನು ಸೃಷ್ಟಿಸಿದ ಶ್ರೇಷ್ಠ ಕಲಾವಿದ ಎಂದು ಬಿಜೆಪಿ ರಾಜ್ಯಾಧ‍್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಭಾನುವಾರ ಡಾ.ರಾಜ್ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ ಅವರು, ಕನ್ನಡ ಭಾಷೆ, ನೆಲಕ್ಕೆ ಅದ್ಬುತ ಕೊಡುಗೆ ಕೊಟ್ಟ ನಟ‌. ಅವರ ಹುಟ್ಟುಹಬ್ಬದ ಪ್ರಯುಕ್ತ ಸಮಾಜಕ್ಕೆ ಅವರು ನೀಡಿರುವ ಕೊಡುಗಗಳನ್ನು ನಾವೆಲ್ಲರೂ ಸ್ಮರಿಸಬೇಕಾಗಿದೆ. ಅವರ ನೆನಪು ಸದಾ ನಮ್ಮ ಜೊತೆಗೆ ಇದೆ‌. ಅವರ ಆದರ್ಶಗಳನ್ನು ನಾವು ಪಾಲಿಸಬೇಕು. ಡಾ.ರಾಜ್ ಸಮಾಧಿ ಸಂಬಂಧ ಕೆಲವು ಬೇಡಿಕೆಗಳು ಇದ್ದು, ಅವುಗಳನ್ನು ಸರ್ಕಾರಕ್ಕೆ ಮುಟ್ಟಿಸುತ್ತೇವೆ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News