ನವದೆಹಲಿ: ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್(Amitabh Bachchan) ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಎಲ್ಲಿಗೆ ಹೋದರೂ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಮುಗಿಬೀಳುತ್ತಾರೆ. ಅಮಿತಾಭ್ ಬಚ್ಚನ್ ಮನೆಯಿಂದ ಹೊರಬಂದ ಕೂಡಲೇ ಜಿತೇಂದ್ರ ಶಿಂಧೆ ಎಂಬ ವ್ಯಕ್ತಿ ಅವರ ಪಕ್ಕ ಪ್ರತ್ಯಕ್ಷನಾಗಿಬಿಡುತ್ತಾನೆ. ಬಿಗ್ ಬಿ ಎಲ್ಲೇ ಹೋದರೂ ಈತ ಅಲ್ಲಿ ಹಾಜರಾಗಿರುತ್ತಾನೆ. ಅವರ ನೆರಳಿನಂತೆ ಬದುಕುವ ಜಿತೇಂದ್ರ ಶಿಂಧೆ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ.  


COMMERCIAL BREAK
SCROLL TO CONTINUE READING

ಜಿತೇಂದ್ರ ಶಿಂಧೆ(Jitendra Shinde) ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರ ಪರ್ಸನಲ್ ಬಾಡಿಗಾರ್ಡ್ ಆಗಿದ್ದು, ಭಾರತ ಹಾಗೂ ವಿದೇಶಗಳಲ್ಲಿ ಅವರ ಭದ್ರತೆ  ನೋಡಿಕೊಳ್ಳುತ್ತಾರೆ. ಚಿತ್ರೀಕರಣದಿಂದ ಹಿಡಿದು ಕೆಸಿಬಿ ಸೆಟ್ ವರೆಗೆ ಅಮಿತಾಬ್ ಬಚ್ಚನ್ ಜೊತೆ ಶಿಂಧೆ ನೆರಳಿನಂತೆ ಇರುತ್ತಾರೆ. ಶಿಂಧೆ ತನ್ನದೇ ಆದ ಭದ್ರತಾ ಏಜೆನ್ಸಿಯನ್ನು ಕೂಡ ಹೊಂದಿದ್ದಾರೆ. ಆದರೆ ಅವರು ಅನೇಕ ವರ್ಷಗಳಿಂದ ಬಿಗ್ ಬಿಗೆ ಪರ್ಸನಲ್ ಬಾಡಿಗಾರ್ಡ್(Personal Bodyguard)ಆಗಿ ಕೆಲಸ ಮಾಡುತ್ತಿದ್ದಾರೆ.


 ಇದನ್ನೂ ಓದಿ: ಮತ್ತೆ ಸ್ಯಾಂಡಲ್‌ವುಡ್‌ಗೆ ಕಮ್ ಬ್ಯಾಕ್ ಮಾಡಿದ ಟಾಲಿವುಡ್ ಖ್ಯಾತ ಹಾಸ್ಯನಟ..!


ಮಾಧ್ಯಮಗಳ ವರದಿಯ ಪ್ರಕಾರ, ಅಮಿತಾಬ್ ಬಚ್ಚನ್ (Amitabh Bachchan )ತಮ್ಮ ಭದ್ರತೆ ನೋಡಿಕೊಳ್ಳುವ ಶಿಂಧೆ ಅವರಿಗೆ ವಾರ್ಷಿಕ 1.5 ಕೋಟಿ ರೂ.ಗಳ ವೇತನ ನೀಡುತ್ತಾರಂತೆ. ಇದು ದೇಶದ ಹಲವು ಖಾಸಗಿ ಕಂಪನಿಗಳ ಸಿಇಒಗಳ ಸಂಬಳಕ್ಕಿಂತಲೂ ಹೆಚ್ಚಾಗಿದೆ. ಅನೇಕ ವರ್ಷಗಳಿಂದ ಬಿಗ್ ಬಿಗೆ ನೆರಳಿನಂತೆ ಭದ್ರತೆ ಒದಗಿಸುತ್ತಿರುವ ಶಿಂಧೆ ಮಲ್ಟಿನ್ಯಾಷನಲ್ ಕಂಪನಿ ಸಿಇಒಗಳಿಗಿಂತಲೂ ಹೆಚ್ಚು ಸ್ಯಾಲರಿ ಪಡೆದುಕೊಳ್ಳುತ್ತಿದ್ದಾರೆ.


ಪ್ರಸಿದ್ಧ ಅಮೇರಿಕನ್ ನಟ ಮತ್ತು ನಿರ್ಮಾಪಕ ಎಲಿಜಾ ವುಡ್(Elijah Wood) ಭಾರತ ಪ್ರವಾಸದ ವೇಳೆ ಶಿಂಧೆ ಅವರೇ ಭದ್ರತೆ ಒದಗಿಸಿದ್ದರು. ವುಡ್ ಗೆ ಭದ್ರತೆ ನೀಡುವಂತೆ ಸ್ವತಃ ಅಮಿತಾಬ್ ಬಚ್ಚನ್ ಅವರೇ ಶಿಂಧೆಗೆ ಹೇಳಿದ್ದರಂತೆ. ಬಾಲಿವುಡ್ ತಾರೆ ಅನುಷ್ಕಾ ಶರ್ಮಾ(Anushka Sharma)ಗೆ ಸೋನು ಎಂಬ ಪರ್ಸನಲ್ ಬಾಡಿಗಾರ್ಡ್ ಇದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ(Virat Kohli) ಮತ್ತು ಅನುಷ್ಕಾ ಶರ್ಮಾ ಇಬ್ಬರಿಗೂ ಭದ್ರತೆ ನೀಡುವ ಸೋನು ಕೂಡ ಕೋಟಿ ಕೋಟಿ ರೂ. ಸಂಬಳ ಪಡೆಯುತ್ತಾರೆ. ಇದಲ್ಲದೆ ಬಾಲಿವುಡ್ ನ ಅನೇಕ ಸೆಲೆಬ್ರೆಟಿಗಳು ತಮ್ಮ ಪರ್ಸನಲ್ ಬಾಡಿಗಾರ್ಡ್ ಗಳಿಗೆ ಕೋಟಿ ಕೋಟಿ ಲೆಕ್ಕದಲ್ಲಿ ಸಂಬಳ ನೀಡುತ್ತಾರಂತೆ.


ಇದನ್ನೂ ಓದಿ: ಶಾರುಖ್ ಪುತ್ರನ ಜೊತೆ ಕಾಣಿಸಿಕೊಂಡ ಜೂಹ್ಲಿ ಪುತ್ರಿ ಜಾಹ್ನವಿ? ಜೂಹ್ಲಿ ಚಾವ್ಲಾ ಹೇಳಿದ್ದೇನು ಗೊತ್ತೇ? 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.