ಬೆಂಗಳೂರು: ದ್ವಾರಕೀಶ್ ಪ್ರೊಡಕ್ಷನ್ಸ್ ನಿರ್ಮಾಣದ 51ನೇ ಚಿತ್ರ 'ಅಮ್ಮ ಐ ಲವ್ ಯು' ಇದೇ ಜೂ.15ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. 


COMMERCIAL BREAK
SCROLL TO CONTINUE READING

'ಆ ದಿನಗಳು' ಚಿತ್ರ ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶಿಸಿರುವ, ನಟ ಚಿರಂಜೀವಿ ಸರ್ಜಾ ಅಭಿನಯದ ಈ ಚಿತ್ರದ ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡಿದ್ದು, ಚಿರು ಮದುವೆಯ ನಂತರ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ ಇದಾಗಿದೆ. 


ತಮಿಳಿನ ‘ಪಿಚ್ಚೈಕ್ಕಾರನ್’ ಚಿತ್ರ ಕನ್ನಡದಲ್ಲಿ ‘ಅಮ್ಮ ಐ ಲವ್‌ ಯು’ ಹೆಸರಿನಡಿ ರೂಪಾಂತರಗೊಂಡು ಜೂ.15ಕ್ಕೆ ತೆರೆಗೆ ಬರಲು ಸಜ್ಜಾಗಿದ್ದು, ರಾಜ್ಯಾದ್ಯಂತ 150 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಸರ್ಟಿಫಿಕೆಟ್ ದೊರೆತಿದ್ದು, ಕಮರ್ಷಿಯಲ್ ಮತ್ತು ತಾಯಿ-ಮಗನ ಸೆಂಟಿಮೆಂಟ್ ಇರುವ ಕುಟುಂಬ ಸಮೇತ ಕೂತು ನೋಡಬಹುದಾದ ಚಿತ್ರ ಇದಾಗಿದೆ. 


ವಿಶ್ವ ತಾಯಂದಿರ ದಿನಕ್ಕೆ 'ಅಮ್ಮ ಐ ಲವ್ ಯೂ' ಚಿತ್ರದ ಟೀಸರ್ ಬಿಡುಗಡೆ


ಚಿರಂಜೀವಿ ಸರ್ಜಾ ಈ ಚಿತ್ರದಲ್ಲಿ ಹೊಸ ಗೆಟಪ್'ನಲ್ಲಿ ಕಾಣಿಸಿಕೊಂಡಿದ್ದು, ಚಿರು ತಾಯಿ ಪಾತ್ರದಲ್ಲಿ ಬಹುಭಾಷಾ ನಟಿ ಸಿತಾರ ಅಭಿನಯಿಸಿದ್ದಾರೆ. ಜಿರು ಜೋಡಿಯಾಗಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ 5 ಹಾಡುಗಳಿದ್ದು, ಗುರುಕಿರಣ್‌ ಸಂಗೀತ ನೀಡಿದ್ದಾರೆ. ಶೇಖರ್‌ ಚಂದ್ರು ಅವರು ಛಾಯಾಗ್ರಹಣ, ಎಂ.ಎನ್‌. ವಿಶ್ವ ಚಿತ್ರದ ಸಂಕಲನ ಮಾಡಿದ್ದಾರೆ. ಉಳಿದಂತೆ ಪ್ರಕಾಶ್‌ ಬೆಳವಾಡಿ, ಗಿರಿ ದ್ವಾರಕೀಶ್‌, ಚಿಕ್ಕಣ್ಣ, ಬಿರಾದಾರ್‌, ರವಿಕಾಳೆ ತಾರಾಗಣದಲ್ಲಿದ್ದಾರೆ ಎಂದರು. 


ತಾಯಿಯ ಕುರಿತಾದ ಸೆಂಟಿಮೆಂಟ್ ಚಿತ್ರವಾದ್ದರಿಂದ, ತಾಯಂದಿರ ದಿನದಂದು 'ಅಮ್ಮ ಐ ಲವ್ ಯೂ' ಚಿತ್ರದ ಟೀಸರ್ ಬಿಡುಗಡೆಮಾಡಲಾಗಿತ್ತು.