ನವದೆಹಲಿ: ರಿಯಾ ಸೇನ್(Riya Sen)ಬಾಲಿವುಡ್ ನ ಸುಂದರ ನಟಿಯಾಗಿದ್ದರು. ಭವಿಷ್ಯದಲ್ಲಿ ಅವರು ಸಾಕಷ್ಟು ಹೆಸರು ಮಾಡುತ್ತಾರೆ ಅಂತಾ ಅನೇಕರು ಭಾವಿಸಿದ್ದರು. ರಿಯಾ ನೋಟದಲ್ಲಿ ಎಷ್ಟು ಸುಂದರಿಯಾಗಿದ್ದಳೋ, ನಟನೆಯಲ್ಲಿಯೂ ಅಷ್ಟೇ ಪರಿಪಕ್ವತೆಯನ್ನು ಹೊಂದಿದ್ದರು. ಆದರೆ ಒಂದೇ ಒಂದು MMS ಅವರ ಸಿನಿಮಾ ವೃತ್ತಿಜೀವನ(Riya Sen MMS Leak)ಕ್ಕೆ ಗ್ರಹಣ ಹಿಡಿಯುವಂತೆ ಮಾಡಿತು. ಇಂದು(ಜ.24) ರಿಯಾ ಸೇನ್ ಜನ್ಮದಿನವಾಗಿದ್ದು, ಅವರು 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದ ರಿಯಾ


ರಿಯಾ ಸೇನ್ ಬಾಲಿವುಡ್(Riya Sen Bollywood Career)ನಲ್ಲಿ ತಮ್ಮದೇಯಾದ ಹೊಸ ಅಲೆ ಸೃಷ್ಟಿಸಿದ್ದ ನಟಿ. ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದ ಈ ನಟಿಗೂ ವಿವಾದಗಳಿಗೆ ಒಂದು ರೀತಿ ನಂಟು ಇದ್ದೇ ಇದೆ. ರಿಯಾ ಸೇನ್ ಹಿಂದಿ ಮತ್ತು ಬಂಗಾಳಿ ಚಿತ್ರಗಳ ಪ್ರಸಿದ್ಧ ನಟಿ ಮುನ್ಮುನ್ ಸೇನ್(Moon Moon Sen)ಅವರ ಪುತ್ರಿ. ರಿಯಾ ಸೇನ್ ಅವರ ಹಿಟ್ ಚಿತ್ರಗಳಲ್ಲಿ ‘ಸ್ಟೈಲ್’, ‘ಝಂಕರ್ ಬೀಟ್ಸ್’, ‘ಅಪ್ನಾ ಸಪ್ನಾ ಮನಿ-ಮನಿ’ ಚಿತ್ರಗಳು ಮಾತ್ರ ನೆನಪಾಗುತ್ತವೆ. ಆದರೆ ಹೆಚ್ಚಿನ ಜನರು ಅವರಿಗೆ ಸಂಬಂಧಿಸಿದ ವಿವಾದವನ್ನು ನೆನಪಿಸಿಕೊಳ್ಳುತ್ತಾರೆ. ಇದು ಅವರ ಚಿತ್ರಜಗತ್ತನ್ನೇ ತಲೆಕೆಳಗಾಗಿ ಮಾಡಿದ ವಿವಾದ. ಅವರನ್ನು ಯಶಸ್ಸಿನ ಪ್ರಭೆಯಿಂದ ಕುಖ್ಯಾತಿಯ ಕತ್ತಲೆಗೆ ಕರೆತಂದ ವಿವಾದ.


Amazon Prime Offer: ಪವರ್ ಸ್ಟಾರ್ ಪುನೀತ್ ಸ್ಮರಣೆಗಾಗಿ ಉಚಿತ ಸಿನಿಮಾ ನೋಡುವ ಅವಕಾಶ


ಬೋಲ್ಡ್ & ಹಾಟ್ ಸೀನ್ ಗಳ ಬಗ್ಗೆ ಚರ್ಚೆ


ರಿಯಾ ಸೇನ್ 1991ರಲ್ಲಿ ಬಾಲ ಕಲಾವಿದೆಯಾಗಿ(Riya Sen Movies) ತಮ್ಮ ನಟನಾ ವೃತ್ತಿ ಪ್ರಾರಂಭಿಸಿದರು. ಅವರು ನಟಿ ರೈಮಾ ಸೇನ್ ಅವರ ಕಿರಿಯ ಸಹೋದರಿಯೂ ಹೌದು. ರಿಯಾ ಸೇನ್ ತ್ರಿಪುರಾದ ರಾಜಮನೆತನಕ್ಕೆ ಸೇರಿದವರು. ಅವರ ತಂದೆ ಭರತ್ ದೇವ್ ವರ್ಮಾ(Bharat Dev Varma)ಕೂಚ್ ಬೆಹಾರ್ ರಾಣಿ ಇಲಾ ದೇವಿಯ ಮಗ. ಫಲ್ಗುಣಿ ಪಾಠಕ್ ಅವರ ‘ಚೂಡಿ ಜೋ ಖಾಂಕಿ ಹಾಥ್ ಮೇ’ ಹಾಡಿನಿಂದ ರಿಯಾಗೆ ಮೊದಲ ಜನಮನ್ನಣೆ ಸಿಕ್ಕಿತು. ಸ್ಟಾರ್ ಕಿಡ್ ಆದ ನಂತರವೂ ರಿಯಾ ಯಶಸ್ವಿ ನಟಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಿಯಾ ತನ್ನ ಚಿತ್ರಗಳಲ್ಲಿನ ಬೋಲ್ಡ್ ಮತ್ತು ಹಾಟ್ ದೃಶ್ಯಗಳ ಬಗ್ಗೆ ಯಾವಾಗಲೂ ಚರ್ಚೆಯಲ್ಲಿದ್ದಾಳೆ. ಅವರ ಬಗೆಗಿನ ಎಂದು ಹೇಳಲಾದ MMS(Riya Sen MMS) ಇಂಟರ್ನೆಟ್ ನಲ್ಲಿ ವೈರಲ್ ಆದ ಬಳಿಕ ರಿಯಾ ಸೈಲೆಂಟ್ ಆದರು. ಬಳಿಕ ಅವರು ಬಾಲಿವುಡ್ ಅನ್ನೇ ತೊರೆದರು.  


ರಿಯಾ ಸೇನ್ ಪ್ರೇಮ ಪುರಾಣ!


Puneeth Rajkumar : 'ಜೇಮ್ಸ್ ಸಿನಿಮಾ'ದ ಶೂಟಿಂಗ್ ಕಂಪ್ಲೀಟ್ ಮಾಡಿದ ಚಿತ್ರ ತಂಡ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.