ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸ್ಮರಣೆಗಾಗಿ ಪಿಆರ್ ಕೆ ಸ್ಟುಡಿಯೋ(PRK Productions) ನಿರ್ಮಾಣದ 3 ಸಿನಿಮಾಗಳ ವಿಶೇಷ ಪ್ರೀಮಿಯರ್ ಹಾಗೂ ‘ಅಪ್ಪು’ ಅವರ 5 ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸುವ ಅವಕಾಶವನ್ನು ಅಮೆಜಾನ್ ಪ್ರೈಮ್ ಇಂಡಿಯಾ ಘೋಷಿಸಿದೆ.
ಸಿನಿಮಾ ಅಭಿಮಾನಿಗಳಿಗೆ ಅಮೆಜಾನ್ ಪ್ರೈಮ್(Amazon Prime) ವಿಶೇಷ ರೀತಿಯ ಆಫರ್ ಘೋಷಿಸಿದ್ದು, ಅಗಲಿದ ನಟನ ನೆನಪಿಗಾಗಿ ಉಚಿತ ಸಿನಿಮಾ ವೀಕ್ಷಿಸುವ ಅವಕಾಶವನ್ನು ನೀಡಿದೆ. ಪಿಆರ್ ಕೆ ಪ್ರೊಡಕ್ಷನ್ಸ್ ನ ‘ಮ್ಯಾನ್ ಆಫ್ ದಿ ಮ್ಯಾಚ್’, ‘ಒನ್ ಕಟ್ ಟು ಕಟ್’, ಮತ್ತು ‘ಫ್ಯಾಮಿಲಿ ಪ್ಯಾಕ್’ ಸಿನಿಮಾಗಳನ್ನು ಅಭಿಮಾನಿಗಳು ಅಮೆಜಾನ್ ಪ್ರೈಮ್ ನಲ್ಲಿ ಉಚಿತವಾಗಿ ವೀಕ್ಷಿಸಬಹುದು ಎಂದು ಅಮೆಜಾನ್ ಪ್ರೈಮ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: 'RRR' ಸಿನಿಮಾ ರಿಲೀಸ್ ಗೆ ಹೊಸ ಮುಹೂರ್ತ ಫಿಕ್ಸ್...
ಈ ಬಗ್ಗೆ ಟ್ವೀಟ್ ಮಾಡಿರುವ ಅಮೆಜಾನ್ ಪ್ರೈಮ್ ಇಂಡಿಯಾ(Amazon Prime Video), ‘ಉಚಿತ ಪ್ರದರ್ಶನದ ಎಕ್ಸ್ ಕ್ಲೂಸಿವ್ ವರ್ಲ್ಡ್ ಪ್ರೀಮಿಯರ್’ನ್ನು ಘೋಷಿಸಿದೆ. ಅಮೆಜಾನ್ ಪ್ರೈಮ್ನಲ್ಲಿ ರಿಲೀಸ್ ಆಗುತ್ತಿರುವ ಈ 3 ಸಿನಿಮಾಗಳು ವಾರಕ್ಕೆ ಒಂದರಂತೆ ಪ್ರೀಮಿಯರ್ ಆಗಲಿವೆ. ‘ಫ್ಯಾಮಿಲಿ ಪ್ಯಾಕ್’ ಸಿನಿಮಾ(Family Pack Movie)ವನ್ನು ಅರ್ಜುನ್ ಕುಮಾರ್ ನಿರ್ದೇಶನ ಮಾಡಿದ್ದು, ‘ಮ್ಯಾನ್ ಆಫ್ ದಿ ಮ್ಯಾಚ್’ ಸಿನಿಮಾ(Man Of The Match)ವನ್ನು ‘ರಾಮಾ ರಾಮಾ ರೇ’ ಖ್ಯಾತಿಯ ಡಿ.ಸತ್ಯ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ಅದೇ ರೀತಿ ‘ಒನ್ ಕಟ್ ಟು ಕಟ್’ ಸಿನಿಮಾದಲ್ಲಿ ದ್ಯಾನಿಶ್ ಸೇಠ್ ನಟಿಸಿದ್ದಾರೆ.
with all the love and respect for power star puneeth rajkumar sir, we bring you 3 beautiful stories that will stay with you forever 💙@PRK_Productions @ashwinipuneet @PRKAudio@VamBho @nakulabhyankar @danishsait @samyuktahornad #PrakashBelawadi pic.twitter.com/FEAQwwVVch
— amazon prime video IN (@PrimeVideoIN) January 21, 2022
ಪುನೀತ್ ರಾಜಕುಮಾರ್(Puneeth Rajkumar) ಅಭಿನಯದ 5 ಚಿತ್ರಗಳು ಫೆ.1ರಿಂದ ಉಚಿತ ಪ್ರದರ್ಶನವಾಗಲಿವೆ. ಪುನೀತ್ ನಿರ್ಮಾಣದ ‘ಕವಲುದಾರಿ’, ‘ಮಾಯಾ ಬಜಾರ್’ ‘ಲಾ’, ‘ಫ್ರೆಂಚ್ ಬಿರಿಯಾನಿ’ ಹಾಗೂ ಅವರೇ ನಟಿಸಿರುವ ‘ಯುವರತ್ನ’ವನ್ನು ಅಭಿಮಾನಿಗಳು ಉಚಿತವಾಗಿ ವೀಕ್ಷಿಸಬಹುದು. ಫೆ.28ರವರೆಗೆ ಉಚಿತ ಪ್ರದರ್ಶನ ಇರುತ್ತದೆ ಎಂದು ಅಮೆಜಾನ್ ಪ್ರೈಮ್ ತಿಳಿಸಿದೆ.
ಇದನ್ನೂ ಓದಿ: ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ-ನಿಕ್ ದಂಪತಿ..!
ಪುನೀತ್ ರಾಜಕುಮಾರ್ ಅವರು ಅಕ್ಟೋಬರ್ 29ರಂದು ನಿಧನ ಹೊಂದಿದ್ದರು. ಅವರ ಅಕಾಲಿಕ ಮರಣವು ಸಾಕಷ್ಟು ಜನರಿಗೆ ಶಾಕ್ ನೀಡಿದೆ. ಅವರ ‘ಜೇಮ್ಸ್’ ಸಿನಿಮಾದ ಬಹುತೇಕ ಕೆಲಸ ಪೂರ್ಣಗೊಂಡಿದ್ದು, ಈ ವರ್ಷ ಬಿಡುಗಡೆ ಆಗಲಿದೆ. ‘ಲಕ್ಕಿ ಮ್ಯಾನ್’ ಸಿನಿಮಾದಲ್ಲಿ ಪುನೀತ್ ಅತಿಥಿ ಪಾತ್ರ ಮಾಡಿದ್ದಾರೆ. ಪಿಆರ್ಕೆ ನಿರ್ಮಾಣ(PRK Productions)ದ ‘ಗಂಧದ ಗುಡಿ’ ಡಾಕ್ಯುಮೆಂಟರಿ ಚಿತ್ರಮಂದಿರದಲ್ಲೇ ರಿಲೀಸ್ ಆಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.