Ananth Ambanis Watch: ಅನಂತ್ ಅಂಬಾನಿ ಮದುವೆ ಈಗ ರಾಷ್ಟ್ರೀಯ ಮಟ್ಟದಲ್ಲಿ ಅಷ್ಟೇ ಅಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅನಂತ್ ಅಂಬಾನಿ - ರಾಧಿಕಾ ಮರ್ಚಂಟ್ ನಿಶ್ಚಿತಾರ್ಥ ಮತ್ತು ವಿವಾಹ ಪೂರ್ವ ಸಂಭ್ರಮಾಚರಣೆಗಳು ಅದ್ಧೂರಿಯಾಗಿ ನೆರವೇರಿದೆ. ಇನ್ನೇನು ಎಲ್ಲರೂ ಕಾತುರದಿಂದ ಕಾಯುತ್ತಿರುವ ರಾಯಲ್‌ ಜೋಡಿಯ ಅದ್ದೂರಿ ಮದುವೆಗೆ ಕೆಲವೇ ದಿನಗಳಷ್ಟೇ ಬಾಕಿ ಇದೆ. 


COMMERCIAL BREAK
SCROLL TO CONTINUE READING

ಅನಂತ್ ಅಂಬಾನಿ ಮದುವೆಗೂ ಮುನ್ನ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದು, ಇತ್ತೀಚೆಗಷ್ಟೇ  ಮಹಾರಾಷ್ಟ್ರದ ನೇರಲ್‌ನಲ್ಲಿರುವ ಕೃಷ್ಣ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವಿಯ ಆಶೀರ್ವಾದ ಪಡೆಯಲು ದೇವಸ್ಥಾನದಲ್ಲಿ ಹವನ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಅನಂತ್ ಧರಿಸಿದ್ದ ವಾಚ್ ಎಲ್ಲರ ಗಮನ ಸೆಳೆಯಿತು. ಇದರ ಬೆಲೆ ಕೇಳಿದರೆ ನೀವು ಬೆಚ್ಚಿ ಬೀಳೋದು ಕಂಡಿತಾ, ಹಾಗಾದರೆ ಅನಂತ್‌ ಧರಿಸಿದ್ದ ವಾಚ್‌ನ ಬೆಲೆ ಎಷ್ಟು ಅಂತೀರಾ? ಮುಂದೆ ಓದಿ...


ಇದನ್ನೂ ಓದಿ: Kalki 2898 AD OTT: ಸಧ್ಯಕ್ಕೆ ಓಟಿಟಿಗೆ ಬರಲ್ಲ ಕಲ್ಕಿ ಚಿತ್ರ..!ಚಿತ್ರತಂಡ ಹೀಗೊಂದು ನಿರ್ಧಾರ ಮಾಡಿದ್ದು ಯಾಕೆ..?


ಅನಂತ್ ಅಂಬಾನಿಗೆ ಯೂನಿಕ್‌ ವಾಚ್‌ಗಳನ್ನು ಸಂಗ್ರಹಿಸುವ ಅಭ್ಯಾಸವಿದೆ. ಅವುಗಳಲ್ಲಿ ದುಬಾರಿ ಪಾಟೆಕ್ ಫಿಲಿಪ್, ರಿಚರ್ಡ್ ಮಿಲ್ಲೆ ಅವರ ಅಪರೂಪದ ಕೈಗಡಿಯಾರಗಳು. ಕೃಷ್ಣ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ, ಅನಂತ್ ರಿಚರ್ಡ್ ಮಿಲ್ಲೆ ವಾಚ್ ಧರಿಸಿದ್ದರು. ಇದರ ಬೆಲೆ ಬರೋಬ್ಬರಿ 6.91 ಕೋಟಿ ಎಂದು ಇನ್ಸ್‌ಟಾಗ್ರಾಂ(Instagram) ಪುಟದ 'ದಿ ಇಂಡಿಯನ್‌ ಹೋರೋಲೊಜಿ'(The Indian Horology) ತಿಳಿಸಿದೆ. ಇದು ಲಿಮಿಟೆಡ್‌ ವರ್ಷನ್‌ ವಾಚ್‌ ಆಗಿದ್ದು, ಈವರೆಗೂ ಕೆವಲ 18 ವಾಚ್‌ಗಳನ್ನಷ್ಟೆ ಕಂಪನಿ ತಯಾರಿಸಿದೆ.


ಈ ಹಿಂದೆ ಇಶಾ ಅಂಬಾನಿ ತನ್ನ ಸಹೋದರನ ವಿವಾಹದ ಸಂದರ್ಭದಲ್ಲಿ ಕೃಷ್ಣ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆನಂದ್ ಪಿರಮಾಲ್ ಇಶಾ ಅವರೊಂದಿಗೆ ಹವನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅನಂತ್ ಅಂಬಾನಿ ಇದೇ ತಿಂಗಳು ರಾಧಿಕಾ ಮರ್ಚಂಟ್ ಅವರನ್ನು ಮದುವೆಯಾಗಲಿದ್ದಾರೆ. ಇವರ ಮದುವೆ ಜುಲೈ 12 ರಂದು ಅದ್ಧೂರಿಯಾಗಿ ನಡೆಯಲಿದೆ. ಜುಲೈ 12ರಿಂದ 14ರವರೆಗೆ ಮೂರು ದಿನಗಳ ಕಾಲ ವಿವಾಹ ಮಹೋತ್ಸವ ನಡೆಯಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.