Home Work Viral Video: ಬದಲಾಗುತ್ತಿರುವ ಜೀವನಶೈಲಿಗೆ ತಕ್ಕಂತೆ ಮಕ್ಕಳ ಶಿಕ್ಷಣ ವ್ಯವಸ್ಥೆಯೂ ಬದಲಾಗುತ್ತಿದೆ. ಇದೀಗ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವಿಡಿಯೋ ಮಕ್ಕಳ ರಜೆಯ ಹೋಂ ವರ್ಕ್‌ಗೆ ಸಂಬಂಧಿಸಿದೆ...
ಹೋಂ ವರ್ಕ್ ಮಕ್ಕಳಿಗೋ? ಪೋಷಕರಿಗೋ?
ಮಕ್ಕಳಿಗೆ ರಜೆಯಲ್ಲಿ ನೀಡುವ ಹೋಂ ವರ್ಕ್ (Holiday HomeWork) ಬಗ್ಗೆ ಅಸಮಾಧಾನ ಹೊರಹಾಕಿರುವ ತಾಯಿಯೊಬ್ಬರು, ರಜಾ ದಿನಗಳಲ್ಲಿ ಮಕ್ಕಳಿಗೆ ನೀಡುವ ಕೆಲವು ಹೋಂ ವರ್ಕ್ ಗಳನ್ನು ಮಕ್ಕಳು ಮಾಡಲು ಸಾಧ್ಯವಿಲ್ಲ. ಅವರ ಪೋಷಕರೇ ಮಾಡಬೇಕಾಗುತ್ತದೆ. ಈ ಬಗ್ಗೆ ಅರಿವಿದ್ದರೂ ಪೋಷಕರನ್ನು ರಜೆ ಎಂಜಾಯ್ ಮಾಡದಂತೆ ಮಾಡಲು ಶಿಕ್ಷಕರು ಅಂತಹ ಕೆಲಸಗಳನ್ನೇ ನೀಡುತ್ತಾರೆ. ಇಲ್ಲಿ ಮಕ್ಕಳು ಆಟವಾಡುತ್ತಿದ್ದರೆ ಪೋಷಕರು ಕುಳಿತು ಈ ಪ್ರಾಜೆಕ್ಟ್ ಗಳನ್ನು ಮಾಡುತ್ತಾರೆ. ರಜೆಯಲ್ಲಿ ಮಕ್ಕಳು ಸ್ವತಃ ಮಾಡಬಹುದಾದ ಕೆಲಸಗಳನ್ನಷ್ಟೇ ಹೋಂ ವರ್ಕ್ ಆಗಿ ನೀಡುವಂತೆ ನಾನು ಶಿಕ್ಷಕರಲ್ಲಿ ಕೈ ಜೋಡಿಸಿ ವಿನಂತಿಸುತ್ತೇನೆ ಎಂದಿದ್ದಾರೆ.
Education system is doing this to parents ❌ pic.twitter.com/0UthwtwHyN
— Eminent Woke (@WokePandemic) June 30, 2024
ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿರುವ ಈ ವಿಡಿಯೋಗೆ ಕೆಲವರು ಬೆಂಬಲ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಈ ರೀತಿಯ ಹೋಂ ವರ್ಕ್ ನೀಡುವುದರ ಉದ್ದೇಶ, ಮೌಲ್ಯದ ಬಗ್ಗೆ ತಿಳಿ ಹೇಳುತ್ತಿದ್ದಾರೆ.
ಇದನ್ನೂ ಓದಿ- ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಸಿಕ್ಕ ಹಾವನ್ನೇ ಬೆಲ್ಟ್ ಮಾಡಿಕೊಂಡ ಮದ್ಯ ಪ್ರಿಯ..! ವಿಡಿಯೋ ವೈರಲ್
ಈ ವಿಡಿಯೋಗೇ ಪ್ರತಿಕ್ರಿಯಿಸಿರುವ ಸಾಮಾಜಿಕ ಬಳಕೆದಾರರೊಬ್ಬರು, "ನಾನು ಶಿಕ್ಷಣ ಸಚಿವನಾಗಿದ್ದರೆ, 8 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಯಾವುದೇ ಹೋಮ್‌ವರ್ಕ್ (HomeWork) ನೀಡುತ್ತಿರಲಿಲ್ಲ" ಎಂದಿದ್ದಾರೆ.
ಇನ್ನೋರ್ವ ಬಳಕೆದಾರರು, "ಮಕ್ಕಳ ಕೆಲಸಗಳನ್ನು ಪಾಲಕರು ಮಾಡುತ್ತಿದ್ದಾರೆ. ಆದರೆ, ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವ ಜವಾಬ್ದಾರಿಯನ್ನು ಮಕ್ಕಳಲ್ಲಿ ಮೂಡಿಸಬೇಕು. ಮಕ್ಕಳಿಗೆ ಸಹಾಯ ಮಾಡುವುದು ಸರಿ. ಆದರೆ, ಪೋಷಕರೇ (Parents) ಪೂರ್ತಿಯಾಗಿ ಪ್ರಾಜೆಕ್ಟ್ ಕೆಲಸವನ್ನು ಮಾಡಬಾರದು" ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ- Viral Video: ಮಗುವಿನ ತೊಟ್ಟಿಲ ಮೇಲೆ ಹೆಡೆ ಎತ್ತಿ ನಿಂತ ನಾಗರಹಾವು..!
ತಾಯಿಯ ಈ ವಿಡಿಯೋಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಮತ್ತೊರ್ವ ಬಳಕೆದಾರರು, "ಮಕ್ಕಳಿಗೆ ಪೋಷಕರೇ ಮೊದಲ ಗುರುಗಳು- ಪೋಷಕರು ಮತ್ತು ಮಕ್ಕಳು ಒಟ್ಟಿಗೆ ಸೇರಿ ರಜೆಯ ಹೋಂ ವರ್ಕ್ ಮಾಡಲು ಅನುವಾಗುವಂತೆ ಇದನ್ನು ನೀಡಲಾಗುತ್ತದೆ. ಶಾಲೆಗಳು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಅದೇ ರೀತಿಯಲ್ಲಿ ಸಂವಹನ ಮಾಡುವ ಉತ್ತಮ ಕೆಲಸವನ್ನು ಮಾಡಬಹುದೆಂದು ನಾನು ನಂಬುತ್ತೇನೆ, ಇದರಿಂದಾಗಿ ಅವರು ತಾರ್ಕಿಕತೆಯನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಸಂವಾದದ ಸಮಯದಲ್ಲಿ ನೀಡಲಾದ ಕೆಲಸದ ಪ್ರಸ್ತುತತೆಯನ್ನು ಚರ್ಚಿಸಬಹುದು. ಹೆಚ್ಚಿನ ಶಾಲೆಗಳು ಈ ಪ್ರಮುಖ ಹಂತವನ್ನು ಕಳೆದುಕೊಳ್ಳುತ್ತಿವೆ ಎಂದೆನಿಸುತ್ತಿದೆ ಎಂದಿದ್ದಾರೆ.
ಜೂನ್ 30ರಂದು ಸಾಮಾಜಿಕ ಜಾಲತಾಣ ಎಕ್ಸ್ (ಹಿಂದಿನ ಟ್ವಿಟ್ಟರ್) ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಇದುವರೆಗೂ 7 ಲಕ್ಷಕ್ಕೂ ಅಧಿಕಾಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಕೆಲವರು ಇದನ್ನು ಶೇರ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.