ಭಾರತದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಜೊತೆ ಬಾಲಿವುಡ್ ನಟಿ ಅನನ್ಯ ಪಾಂಡೆಯವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿದ್ದರು. ಇದೀಗ ನಟಿ  ಹೊಸ ಐಷಾರಾಮಿ ಎಸ್ಯುವಿಯನ್ನು ಕಾರನ್ನು  ಖರೀದಿಸಿದ್ದಾರೆ. 


COMMERCIAL BREAK
SCROLL TO CONTINUE READING

ಜುಲೈ 21ರಂದು ರವಿವಾರ ಮುಂಬೈನಲ್ಲಿ ಹೊಸ ಬಿಳಿ ಲ್ಯಾಂಡ್ ರೋವರ್ ರೇಂಜ್ ರೋವರ್ 3.0  3.38 ಕೋಟಿ ಬೆಲೆಯ ಕಾರ್ ಕಾಣಿಸಿಕೊಂಡಿದೆ. ಕಾರನ್ನು ನೋಡಿದಾಗ ಇದು ಹೊಸ ಕಾರೆಂದು ಅದರ ಮೇಲಿರುವ ಹಾರದಿಂದ ಗೊತ್ತಾಗುತ್ತದೆ. 


ಇದನ್ನು ಓದಿ : ಬಾಲಿವುಡ್ ನ ಶ್ರೀಮಂತ ಕುಟುಂಬ.. ಸೂಪರ್ ಸ್ಟಾರ್ ಅಲ್ಲ ಒಟ್ಟು ನಿವ್ವಳ ಮೌಲ್ಯ 10,000ಕೋಟಿ ರೂ!


ಅನನ್ಯಾ ತನ್ನ ಹೊಸ ಕಾರಿನಿಂದ ಇಳಿದು ಕ್ಯಾಶುಯಲ್ ಲುಕ್‌ನಲ್ಲಿ ಪೋಸ್ ಕೊಟ್ಟಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.  ಅನನ್ಯಾ ಬೂದು ಬಣ್ಣದ ಟ್ಯಾಂಕ್ ಟಾಪ್ ಮತ್ತು ಚಪ್ಪಲಿಯೊಂದಿಗೆ ಕಪ್ಪು ಶಾರ್ಟ್ಸ್‌ನಲ್ಲಿ ಸರಳವಾಗಿ  ವೈರಲ್ ಆಗಿರುವ ಫೋಟೋ ದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ತೆರೆ ಕಂಡಿರುವ  ‘ಬ್ಯಾಡ್ ನ್ಯೂಸ್’ ಸಿನಿಮಾದಲ್ಲಿ ಅನನ್ಯಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮತ್ತು ನಟಿ ಕಂಟ್ರೋಲ್ ಎಂಬ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 


ಇತ್ತೀಚೆಗೆ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿ ಹಾರ್ದಿಕ್ ಮತ್ತು ನಟಿ ಅನನ್ಯಾ ಪಾಂಡೆ ಅವರ ವೀಡಿಯೊ ವ್ಯಾಪಕ ಗಮನವನ್ನು ಸೆಳೆದಿದ್ದು, ಅವರ ಕುರಿತಾದ ವಿಷಯವನ್ನು ಸಾಮಾಜಿಕ ಮಾಧ್ಯಮವು ಕಂಡುಕೊಂಡಿದೆ. 


ಇದನ್ನು ಓದಿ : ಖ್ಯಾತ ಬಿಗ್ ಬಾಸ್ ಸ್ಪರ್ಧಿ ಜೊತೆ ನಯನತಾರಾ ರೋಮ್ಯಾನ್ಸ್..! ಏನಿದು ಹೊಸ ವಿಷಯ?!  


ಇದರ ಬೆನ್ನಲ್ಲೇ ಇವರಿಬ್ಬರ ಸಂಬಂಧದ ಬಗ್ಗೆ ಊಹಾಪೋಹಗಳು ಬಾಲಿವುಡ್ ಗಾಸಿಪ್ ಕಾಲಂಗಳಲ್ಲಿ ಹರಿದಾಡುತ್ತಿವೆ. ಮತ್ತು ಇವರಿಬ್ಬರು ಇತ್ತೀಚೆಗೆ ಬ್ರೇಕಪ್  ಮಾಡಿಕೊಂಡಿದ್ದಾರೆ  ಎಂದು ಹಲವರು ಹೇಳುತ್ತಾರೆ. ಮತ್ತು ಅನನ್ಯಾ ಇತ್ತೀಚೆಗೆ ಆದಿತ್ಯ ರಾಯ್ ಕಪೂರ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಿದ್ದಾರೆ ಎಂದು ವದಂತಿಗಳು ಕೇಳಿ ಬರುತ್ತಿವೆ. ಅದರಲ್ಲೂ ಕೆಲವು ಇಬ್ಬರೂ ಒಂದಾದರೆ ಉತ್ತಮ ಎಂದು ಕಾಮೆಂಟ್ ಗಳು ಕೇಳಿ ಬರುತ್ತಿವೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ