ನಟನಿಗೆ `ಗೆಟ್ ಔಟ್ ಆಫ್ ಮೈ ಸ್ಟುಡಿಯೋ` ಎಂದ ನಿರೂಪಕಿ: ವಿಡಿಯೋ ವೈರಲ್
ವಿಶ್ವಕ್ ಸೇನ್ ಅವರನ್ನು ಪಾಗಲ್ ಸೇನ್ ಹಾಗೂ ಖಿನ್ನತೆಗೆ ಒಳಾಗದವನೆಂದು ಮಾತಿನ ನಡುವೆ ನಿರೂಪಕಿ ಹೇಳಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ, ಹಾಗೆ ಕರೆಯಬೇಡಿ ಎಂದು ವಿಶ್ವಕ್ ಏರು ಧ್ವನಿಯಲ್ಲಿ ಹೇಳಿದ್ದಾರೆ. ಈ ವೇಳೆ ನಿರೂಪಕಿ ‘ಗೆಟ್ ಔಟ್ ಆಫ್ ಮೈ ಸ್ಟುಡಿಯೊ‘ ಎಂದು ಜೋರಾಗಿ ಕಿರುಚುತ್ತಾರೆ.
ಹೈದರಾಬಾದ್: ತೆಲುಗಿನ ಖಾಸಗಿ ಸುದ್ದಿ ವಾಹಿನಿಯ ನಿರೂಪಕಿ ದೇವಿ ನಾಗವಲ್ಲಿ ಮತ್ತು ಯುವ ನಟ ವಿಶ್ವಕ್ ಸೇನ್ ನಡುವೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ವಾಗ್ವಾದ ನಡೆದಿದೆ. ಈ ವೇಳೆ ಸೇನ್ ಅವರಿಗೆ ‘ಗೆಟ್ ಔಟ್ ಆಫ್ ಮೈ ಸ್ಟುಡಿಯೋ‘ ಎಂದು ಆಂಕರ್ ಹೇಳಿರುವ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇದನ್ನು ಓದಿ: ಜೂನ್‌ನಲ್ಲಿ "ರಾಜಮಾರ್ತಾಂಡ"ನ ಆಗಮನ: ಅಣ್ಣನ ಕೊನೆಯ ಚಿತ್ರಕ್ಕೆ ಧ್ರುವ ಸರ್ಜಾ ಧ್ವನಿ
ಏನಿದು ಘಟನೆ:
ವಿಶ್ವಕ್ ಸೇನ್ ಅಭಿನಯದ ʼಅಶೋಕ ವನಂಲೋ ಅರ್ಜುನ ಕಲ್ಯಾಣಂʼ ಎಂಬ ಸಿನಿಮಾ ಮೇ 6ರಂದು ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಪ್ರಚಾರಕ್ಕಾಗಿ ಅವರು, ಹೈದರಾಬಾದ್‌ನ ರಸ್ತೆಯೊಂದರಲ್ಲಿ ಪ್ರ್ಯಾಂಕ್ ವಿಡಿಯೋ ಮಾಡಿದ್ದರು. ಇದರಲ್ಲಿ ಅವರು ತನಗೆ ಮದುವೆಯಾಗಿಲ್ಲ. ಹೀಗಾಗಿ ನಾನು ಸೂಸೈಡ್ ಮಾಡಿಕೊಳ್ಳುತ್ತೇನೆ ಎಂದು ನಾಟಕ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾನವ ಹಕ್ಕುಗಳ ಹೋರಾಟಗಾರರೊಬ್ಬರು ವಿಶ್ವಕ್ ಸೇನ್ ಮತ್ತು ತಂಡದ ವಿರುದ್ಧ ದೂರು ದಾಖಲಿಸಿದ್ದರು. ಘಟನೆಯ ಬಗ್ಗೆ ಖಾಸಗಿ ಸುದ್ದಿ ವಾಹಿನಿಯೊಂದು ಚರ್ಚೆ ನಡೆಸಲು ಸೇನ್ ಅವರನ್ನು ಸ್ಟುಡಿಯೋಗೆ ಕರೆಸಿದೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದೆ.
‘ಗೆಟ್ ಔಟ್ ಆಫ್ ಮೈ ಸ್ಟುಡಿಯೊ‘ ಎಂದು ಜೋರಾಗಿ ಕಿರುಚುತ್ತಾರೆ. ನಂತರ ವಿಶ್ವಕ್ ಸ್ಟುಡಿಯೊದಿಂದ ತೆರಳಿದ್ದಾರೆ.
ಇದನ್ನು ಓದಿ: ಇವು ಸುವರ್ಣ ವಾಹಿನಿಯ ಸೂಪರ್ ಡೂಪರ್ ಧಾರಾವಾಹಿಗಳು
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಿರೂಪಕಿಯ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಆಕೆ ಸಂಯಮದಿಂದ ವರ್ತಿಸಬೇಕಿತ್ತು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.