ಎಡೆಯೂರು ಶ್ರೀ ಸಿದ್ದಲಿಂಗೇಶ್ವರ.. ಸ್ಟಾರ್ ಸುವರ್ಣದಲ್ಲಿ ಪ್ರಸಾವಾಗಿರೋ ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ. ಸದ್ಯ ಈ ಧಾರಾವಾಹಿಯಲ್ಲಿ ಡಮರುಗನ ಕತೆ ಪ್ರಸಾರವಾಗುತ್ತಿದೆ. ಶಿವನ ಪರಮ ವೈರಿಯಾಗಿ ಭೂಮಿ ಮೇಲೆ ಜನ್ಮ ತಾಳಿರುವ ಡಮರುಗ ಸಿದ್ದಲಿಂಗ ಸ್ವಾಮಿಗಳಿಗೆ ತೊಂದರೆ ಕೊಡುತ್ತಿರುತ್ತಾನೆ. ಗುರುಕುಲದಲ್ಲಿ ಕಲಿಯುತ್ತಿರುವ ಮಕ್ಕಳನ್ನು ಸಿದ್ದಲಿಂಗ ಸ್ವಾಮಿಗಳು ಕೂಡಲ ಸಂಗಮಕ್ಕೆ ಕರೆದುಕೊಂಡು ಹೋಗುತ್ತಾರೆ. ವಿದ್ಯಾರ್ಥಿಗಳ ಸೋಗಿನಲ್ಲಿ ಗುರುಕುಲಕ್ಕೆ ಸೇರಿರುವ ಕಂಬ ಮತ್ತು ಬಂಬನ ಸಹಾಯದಿಂದ ಕೂಡಲ ಸಂಗಮಕ್ಕೆ ಹೋಗಿರುವ ಗುರುಕುಲದ ಮಕ್ಕಳನ್ನು ಡಮರುಗ ಅಪಹರಿಸುತ್ತಾನೆ.
ಇದನ್ನೂ ಓದಿ:Sai Pallavi: ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರಂತೆ ಸಾಯಿ ಪಲ್ಲವಿ!?
ಡಮರುಗ ತಾನೇ ಸೃಷ್ಟಿಸಿರುವ ನರಕದಲ್ಲಿ ಮಕ್ಕಳನ್ನು ಬೆಂಕಿಯಲ್ಲಿ ಬೇಯುವಂತೆ ಮಾಡುತ್ತಾನೆ. ಇದನೆಲ್ಲಾ ತಮ್ಮ ದಿವ್ಯ ದೃಷ್ಟಿಯಿಂದ ನೋಡುವ ಸಿದ್ದಲಿಂಗ ಸ್ವಾಮಿಗಳು ಬೆಂಕಿ ಮೇಲೆ ಕುಳಿತು, ತಪಸ್ಸು ಮಾಡುತ್ತಾರೆ. ಸಿದ್ದಲಿಂಗ ಸ್ವಾಮಿಗಳ ಸಹಾಯಕ್ಕೆ ಬರುವ ನಾರಾಯಣನ ವಾಹನ ಗರುಡ, ಮಕ್ಕಳನ್ನು ಡಮರುಗನ ಅಂಕೆಯಿಂದ ಬಿಡಿಸುತ್ತಾನೆ.
ಇದಾದ ಬಳಿಕ ಶಿವನಿಂದ ಡಮರುಗ ಅಂತ್ಯವಾಗುತ್ತದೆ. ವಾರಪೂರ್ತಿ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿಯಲ್ಲಿ ಪ್ರಸಾರವಾಗಲಿರುವ "ಡಮರುಗ ಅಂತ್ಯ" ಸಂಚಿಕೆಗಳಲ್ಲಿ ಅದ್ಭುತವಾದ ಗ್ರಾಫಿಕ್ಸ್ ಬಳಸಲಾಗಿದ್ದು, ಕತೆ ಮತ್ತು ದೃಶ್ಯವೈಭವ ದೊಡ್ಡವರಿಂದ ಮಕ್ಕಳವರೆಗೂ ಎಲ್ಲರ ಗಮನ ಸೆಳೆಯಲಿದೆ.
ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿಯಲ್ಲಿ "ಡಮರುಗ ಅಂತ್ಯ" ಸಂಚಿಕೆಗಳು ಏ.29ರಿಂದ - ಮೇ 6ರವರೆಗೂ ರಾತ್ರಿ 9ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಬೊಂಬಾಟ್ ಭೋಜನ:
ಬೊಂಬಾಟ್ ಭೋಜನ.. ಇದು ಸ್ಟಾರ್ ಸುವರ್ಣ ವಾಹಿನಿಯ ಬೊಂಬಾಟ್ ಕಾರ್ಯಕ್ರಮ... ಕಿರುತೆರೆಯ ಅಡುಗೆ ಕಾರ್ಯಕ್ರಮಗಳ ಈ ಪೈಕಿ ಇದು ಎಲ್ಲರಿಗೂ ಅಚ್ಚುಮೆಚ್ಚು. ಅಂದ್ ಹಂಗೆ ಈ ಕಾರ್ಯಕ್ರಮವನ್ನು ನಡೆಸಿಕೊಡೋರು ಪಾಕ ಪ್ರವೀಣ ಸಿಹಿಕಹಿ ಚಂದ್ರು..
ಕಿರುತೆರೆಯ ಮಧ್ಯಾಹ್ನದ ಮನರಂಜನೆಯಲ್ಲಿ ಈ ಕಾರ್ಯಕ್ರಮಕ್ಕೆ ಅಗ್ರಸ್ಥಾನವಿದೆ.. ವಿಶೇಷ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸೋದು ಈ ಕಾರ್ಯಕ್ರಮದ ವಿಶೇಷ. ಈ ವಾರ ಈ ಬೊಂಬಾಟ್ ಭೋಜನದಲ್ಲಿ ಈ ವಾರ ಪೂರ್ತಿ ಸೆಲಬ್ರಿಟಿಗಳು ಭಾಗವಹಿಸಲಿದ್ದಾರೆ.
ಇದನ್ನೂ ಓದಿ:ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ರಿಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ ಪ್ರದಾನ
ಮೇ 3 ರಂದು ರಂಗಭೂಮಿ ನಿರ್ದೇಶಕರಾದ ಝಾಫರ್ ಮೋಹಿಯುದ್ದೀನ್, ಮೇ 4ರಂದು ದಿಯಾ ಸಿನಿಮಾ ಖ್ಯಾತಿಯ ನಾಯಕ ನಟಿ ಖುಷಿ, ಮೇ 5 ಮತ್ತು 6 ರಂದು ಹಿರಿಯ ನಟಿ ಭವ್ಯ ಮತ್ತು ನಿರ್ದೇಶಕ ಸಿಂಪಲ್ ಸುನಿ ಹಾಗೂ ಮೇ 7 ರಂದು ನಟಿ ಸಂಜನ ಆನಂದ್ ಬೊಂಬಾಟ್ ಭೋಜನದಲ್ಲಿ ತಮ್ಮ ಕೈರುಚಿ ತೋರಿಸಲಿದ್ದಾರೆ.
ಸೋಮವಾರಂದಿಂದ ಶನಿವಾರ ಮಧ್ಯಾಹ್ನ 12 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ವಿಶೇಷ ಅತಿಥಿಗಳ ನಳಪಾಕ ನೋಡಲು ರೆಡಿಯಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.