ಬೆಂಗಳೂರು: ವಿಲನ್‌ ಪಾತ್ರಧಾರಿಗೆ ಸರಿ ಸಾಟಿ ಹೊಂದುವ ನಟಿ ಅನಿಖಾ ಸಿಂಧ್ಯ. ಸ್ಯಾಂಡಲ್ವುಡ್‌ ನಲ್ಲಿ ಎಂಥ ಪಾತ್ರ ಕೊಟ್ಟರು ಅಚ್ಚುಕಟ್ಟಾಗಿ ನಿಭಾಯಿಸುವ ನಟಿ. ಕಿರುತೆರೆಯಲ್ಲಿ ಹೆಚ್ಚಾಗಿ ನೆಗೆಟಿವ್ ರೋಲ್ ಮೂಲಕವೇ ಗುರುತಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಕೆಲವೊಂದು ಬಾರಿ ಸಿನಿಮಾ ಧಾರವಾಹಿಗಳಲ್ಲಿ ನಟಿಸಿ ಮನ ಗೆಲ್ಲಿವುದು ಸಹಜ. ಆದರೆ ಆ ಪಾತ್ರವು ಜೀವನಕ್ಕೆ ಮುಳ್ಳಗಾಬಾರದು. ನಟಿ ಅನಿಖಾ ಸಿಂಧ್ಯರವರ ಜೀವನದಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. 


ನಟಿ ಅನೇಕ ಸಿನಿಮಾಗಳಲ್ಲಿ ವಿಲನ್ ಪಾತ್ರ  ಮಾಡಿದ್ದರಿಂದ ಇವರು ನಿಜಾ ಜೀವನದಲ್ಲಿ ಖಳ ನಾಯಕಿ ಗುಣ ಹೊಂದಿದುವರೆಂದು ಇವರನ್ನು ದ್ವೇಷಿಸುವವರೇ ಹೆಚ್ಚಂತೆ. ಹಾಗೆಯೇ ಪ್ರತಿ ಹೆಣ್ಣಿಗೂ ಮದುವೆ ಬಗ್ಗೆ ದೊಡ್ಡ ಕನಸ್ಸನೇ ಹೊತ್ತಿರುತ್ತಾರೆ. ನಟಿ ಎಂದ ಮಾತ್ರಕ್ಕೆ  ಮದುವೆ ಕನಸ್ಸು ಇರಬಾರದೇ ? ಇಲ್ಲಿ ನಟಿಗೆ ತಮ್ಮ ನಟನೆಯ ಪಾತ್ರವೇ ಮದುವೆ ಅಡ್ಡಿಯಾಯಿತ್ತಂತೆ!


ಇದನ್ನೂ ಓದಿ: Amala Paul Lip Kiss : ಹೆಬ್ಬುಲಿ ನಟಿ ಅಮಲಾ ಪೌಲ್​ ಲಿಪ್​ ಕಿಸ್​ ಫೋಟೋ ವೈರಲ್‌


ಹೌದು, ಹೀರೋಯಿನ್ ಆಗಬೇಕೆಂದು ಅನಿಖಾ ಅವರು ಕಿರುತೆರೆಗೆ ಬಂದರು. ಆದರೆ ಅವರ ನೀರಿಕ್ಷೆಗೂ ಮೀರಿದ ನಟನೆಯಲ್ಲಿ ಆಕೆಯ ಹಾವ ಭಾವದಿಂದ ಹೀರೋಯಿನ್ ಬದಲು ವಿಲನ್‌ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. 


ಇದನ್ನೂ ಓದಿ: Samantha Viral Video: ಇಂಗ್ಲಿಷ್ ಮಾತನಾಡಿ ಟ್ರೋಲ್ ಆದ ನಟಿ ಸಮಂತಾ


ಧಾರಾವಾಹಿಯ ಆರಂಭದ ಮೊದಲೇ ನೆಗೆಟಿವ್ ಶೇಡ್‌ ಮಾಡಿ ಮನಗೆದ್ದಿದ್ದರು. ಬಳಿಕ ಇವರ ನಿಜ ಜೀವನದಲ್ಲಿ ಮದುವೆ ಪ್ರಸಂಗ ಬಂದಾಗ ಅನೇಕ ಸಂಬಂಧಗಳು ವಿಲನ್‌ ಪಾತ್ರವನ್ನು ಮುಂದಿಟ್ಟು ಸಂಬಂಧ ಬೇಡ ಎಂದಿದ್ದಾರಂತೆ. ಸಿನಿಮಾ ಧಾರವಾಹಿಗಳಲ್ಲಿ ಕೆಟ್ಟವಳಾಗಿ ಕಾಣಿಸಿಕೊಂಡಿದ್ದರಿಂದ ಇವರು ನಿಜ ಜೀವನದಲ್ಲಿ ಹಾಗೆ ಇದ್ದಾರೆಂದು ನಟಿಯನ್ನು ತಿರಸ್ಕರಿಸಿದ್ದಾರೆ ಎಂದಿದ್ದಾರೆ. 


ಪದೇ ಪದೇ ನೆಗೆಟಿವ್ ಪಾತ್ರಗಳಲ್ಲಿ ಹೆಚ್ಚು ಅವಕಾಶ ಸಿಗುತ್ತಿದ್ದವು.  ನನಗೆ ಯಾರೂ ಸಲಹೆ ನೀಡುವವರೂ ಇರಲಿಲ್ಲ, ಯಾವ ಗಾಡ್ ಫಾದರ್ ಇಲ್ಲದೆ ಚಿತ್ರರಂಗಕ್ಕೆ ಕಾಲಿಟ್ಟೆ. ನೆಗೆಟಿವ್ ಶೇಡ್‌ ಮಾಡೋದು ನನ್ನ ಬದುಕನ್ನು ಹೇಗೆ ರೂಪಿಸುತ್ತದೆ ಎಂಬುದೇ ಗೊತ್ತಿರಲಿಲ್ಲ ಎಂದು ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.