Tokyo Olympic 2020: ವಿಡಿಯೋ ಶೇರ್ ಮಾಡಿ ಭಾರತೀಯ ಕ್ರೀಡಾಪಟುಗಳಿಗೆ ಅನಿಲ್ ಕಪೂರ್ ಶುಭಾಶಯ
ಟ್ರ್ಯಾಕ್ ನಲ್ಲಿ ಯುವಕರನ್ನು ನಾಚಿಸುವಂತೆ ಓಡಿದ ಅನಿಲ್ ಕಪೂರ್.
ನವದೆಹಲಿ: ಬಾಲಿವುಡ್ ನಟ ಅನಿಲ್ ಕಪೂರ್ ಟೋಕಿಯೊ ಒಲಂಪಿಕ್ಸ್ ನಲ್ಲಿ ಪಾಲ್ಗೊಳ್ಳುವ ಭಾರತೀಯ ಕ್ರೀಡಾಪಟುಗಳಿಗೆ ಶುಭಾಶಯ ತಿಳಿಸಿದ್ದಾರೆ. ಟ್ರ್ಯಾಕ್ ನಲ್ಲಿ ಓಡುವ ಮೂಲಕ 64 ವರ್ಷದ ನಟ ಕ್ರೀಡಾಪಟುಗಳಲ್ಲಿ ಹೊಸ ಉತ್ಸಾಹ ಮೂಡಿಸಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಂಡಿರುವ ಹಿರಿಯ ನಟ ಅನಿಲ್ ಕಪೂರ್ ಟ್ರ್ಯಾಕ್ ನಲ್ಲಿ ಬೆವರಳಿಸಿದ್ದಾರೆ. ತರಬೇತುದಾರರ ಸಲಹೆ ಮೇರೆಗೆ ಟ್ರ್ಯಾಕ್ ನಲ್ಲಿ ರನ್ನಿಂಗ್ ಮಾಡಿದ್ದಾರೆ. ಟೋಕಿಯೊ ಒಲಂಪಿಕ್ಸ್(Tokyo Olympic 2020) ನ ವಿವಿಧ ಸ್ಪರ್ಧೆಗಳಲ್ಲಿ ಭಾರತದಿಂದ 126ಕ್ಕೂ ಹೆಚ್ಚು ಕ್ರೀಟಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ಈ ಬಾರಿ ಭಾರತಕ್ಕೆ ಹೆಚ್ಚಿನ ಪದಕಗಳು ಸಿಗುವ ನಿರೀಕ್ಷೆ ಇದೆ. ಅನೇಕ ಕ್ರೀಡಾಪಟುಗಳು ಕಠಿಣ ಅಭ್ಯಾಸ ನಡೆಸಿ ಟೋಕಿಯೊ ಒಲಂಪಿಕ್ಸ್ ಗೆ ಭರ್ಜರಿ ತಯಾರಿ ನಡೆಸಿದ್ದಾರೆ.
Smriti Mandhana: 25ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಲೋಕದ ಬ್ಯೂಟಿ ಕ್ವೀನ್ ಬಗ್ಗೆ ನಿಮಗೆಷ್ಟು ಗೊತ್ತು..?
ಭಾರತೀಯ ಕ್ರೀಡಾಪಟುಗಳ ಮೇಲಿನ ನಿರೀಕ್ಷೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಹೀಗಾಗಿ ಅವರಲ್ಲಿ ಹೊಸ ಉತ್ಸಾಹ ಮೂಡಿಸುವ ನಿಟ್ಟಿನಲ್ಲಿ ನಟ ಅನಿಲ್ ಕಪೂರ್(Anil Kapoor) ಸ್ವತಃ ತಾವೇ ರನ್ನಿಂಗ್ ಟ್ರ್ಯಾಕ್ ನಲ್ಲಿ ಯುವಕರನ್ನು ನಾಚಿಸುವಂತೆ ಓಡಿದ್ದಾರೆ. ತಮ್ಮ ಪೋಸ್ಟ್ ನಲ್ಲಿ ‘ವಿಜಯಶಾಲಿಯಾಗಿ ಬನ್ನಿ ಎಂದು ಭಾರತೀಯ ಕ್ರೀಡಾಪಟುಗಳಿಗೆ ಶುಭಾಶಯ ಕೋರಿರುವ’ ಅವರು, ‘ಮತ್ತೆ ಕಾರ್ಯರೂಪಕ್ಕೆ ಬರುತ್ತಿದೆ’ #literally. ನಾನು ಮತ್ತೆ ಟ್ರ್ಯಾಕ್ ಗೆ ಮರಳಿರುವುದು ಅತ್ಯಂತ ಖುಷಿ ನೀಡಿದೆ. ಇಡೀ ದೇಶಕ್ಕೆ ಹೆಮ್ಮೆ ತಂದಿರುವ ಭಾರತೀಯ ಕ್ರೀಡಾಪಟುಗಳಿಂದ ನಾನು ಪ್ರಭಾವಿತನಾಗಿದ್ದೇನೆ! #Cheer4India #Olympcis2021.’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: IPL ಮೊದಲು ತೂಕ ಇಳಿಸಿಕೊಂಡ MS Dhoni, ಫಿಟ್ & ಸ್ಲಿಮ್ ಮಹಿ ಫೋಟೋ ಆಯ್ತು ವೈರಲ್
ನಾಳೆಯಿಂದ(ಜುಲೈ 23) ಟೋಕಿಯೊ ಒಲಂಪಿಕ್ಸ್(Tokyo Olympic 2020 Games) ಆರಂಭವಾಗಲಿದ್ದು, ಆಗಸ್ಟ್ 8 ರವರೆಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಕಳೆದ ವರ್ಷವೇ(2020) ಈ ಒಲಂಪಿಕ್ಸ್ ಕ್ರೀಡಾಕೂಟ ನಡೆಯಬೇಕಾಗಿತ್ತು, ಆದರೆ ಕೊರೊನಾ ಸಾಂಕ್ರಾಮಿಕದ ಪರಿಣಾಮ ಮುಂದೂಡಿಕೆಯಾಗಿತ್ತು. ನಟ ಅನಿಲ್ ಕಪೂರ್ ಕೊನೆಯದಾಗಿ ನಿರ್ದೇಶಕ ಅನುರಾಗ್ ಕಶ್ಯಪ್ ಅವರ AK Vs AK ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ನೆಟ್‍ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾದಲ್ಲಿ ಅವರ ಪುತ್ರಿ ಸೋನಂ ಕಪೂರ್ ಕೂಡ ನಟಿಸಿದ್ದಾರೆ.
ಸದ್ಯ ರಾಜ್ ಮೇಹ್ತಾ ನಿರ್ದೇಶನದ ಜಗ್ ಜಗ್ ಜೀಯೋದಲ್ಲಿ ಅನಿಲ್ ಕಪೂರ್ ನಟಿಸುತ್ತಿದ್ದಾರೆ. ವರುಣ್ ಧವನ್, ಕೈರಾ ಅಡ್ವಾಣಿ, ನೀತು ಸಿಂಗ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ANIMAL(ಅನಿಮಲ್) ನಲ್ಲಿಯೂ ರಣಬೀರ್ ಕಪೂರ್, ಪರಿಣೀತಿ ಚೋಪ್ರಾ, ಬಾಬ್ಬಿ ಡಿಯೋಲ್ ಜೊತೆ ಅನಿಲ್ ಕಪೂರ್ ಅಭಿನಯಿಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.