Tokyo Olympic 2020: ಸಾನಿಯಾ ಮಿರ್ಜಾ ಮಸ್ತ್ ಮಸ್ತ್ ಡ್ಯಾನ್ಸ್, ವಿಡಿಯೋ ವೈರಲ್

ಸಾನಿಯಾ ಮಿರ್ಜಾ ಡ್ಯಾನ್ಸ್ ಮಾಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Written by - Puttaraj K Alur | Last Updated : Jul 19, 2021, 10:03 AM IST
  • ಟೋಕಿಯೊ ಒಲಂಪಿಕ್ಸ್ ಗೆ ತೆರಳುವ ಮುನ್ನ ಸಾನಿಯಾ ಮಿರ್ಜಾ ಮಸ್ತ್ ಮಸ್ತ್ ಡ್ಯಾನ್ಸ್
  • ಒಲಂಪಿಕ್ಸ್ ಅಧಿಕೃತ ಟಿ-ಶರ್ಟ್ ಧರಿಸಿ ಅಮೆರಿಕನ್ ರ‍್ಯಾಪರ್ ಡೋಜಾ ಕ್ಯಾಟ್ ಹಾಡಿಗೆ ಸಖತ್ ಸ್ಟೆಪ್ಸ್
  • ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರ ಕಠಿಣ ಪರಿಶ್ರಮ ಅಗತ್ಯವೆಂದ ಸಾನಿಯಾ ಮಿರ್ಜಾ
Tokyo Olympic 2020: ಸಾನಿಯಾ ಮಿರ್ಜಾ ಮಸ್ತ್ ಮಸ್ತ್ ಡ್ಯಾನ್ಸ್, ವಿಡಿಯೋ ವೈರಲ್  title=
ಸಾನಿಯಾ ಮಿರ್ಜಾ ಡ್ಯಾನ್ಸ್ ವೈರಲ್

ನವದೆಹಲಿ: ಕೊರೊನಾ ಭೀತಿಯ ನಡುವೆಯೇ ಟೋಕಿಯೊ ಒಲಂಪಿಕ್ಸ್ ಗೆ ಸಕಲ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ವಿವಿಧ ದೇಶಗಳ ಕ್ರೀಡಾಪಟುಗಳು ಒಲಂಪಿಕ್ಸ್ ನಲ್ಲಿ ಭಾಗವಹಿಸಲು ಜಪಾನ್ ರಾಜಧಾನಿ ಟೋಕಿಯೊದತ್ತ ಪ್ರಯಾಣ ಬೆಳೆಸಿದ್ದಾರೆ. ಈ ಮಧ್ಯೆ ಭಾರತದ ಸ್ಟಾರ್ ಮಹಿಳಾ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಹೌದು, ಭಾರತದ ಶ್ರೇಷ್ಟ ವೃತ್ತಿಪರ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ(Sania Mirza) ಟೋಕಿಯೊ ಒಲಂಪಿಕ್ಸ್ ಗೆ ತೆರಳುವ ಮುನ್ನ ತಾವು ಮಾಡಿರುವ ಡ್ಯಾನ್ಸ್ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಟೋಕಿಯೊ ಒಲಂಪಿಕ್ಸ್ 2020(Tokyo Olympics 2020)ರ ಅಧಿಕೃತ ಟಿ-ಶರ್ಟ್ ಧರಿಸಿ ಅಮೆರಿಕನ್ ರ‍್ಯಾಪರ್ ಡೋಜಾ ಕ್ಯಾಟ್ ಅವರ ‘ಕಿಸ್ ಮಿ ಮೋರ್’ ಹಾಡಿಗೆ ಸಖತ್ ಡಾನ್ಸ್ ಮಾಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Sania Mirza (@mirzasaniar)

ಇದನ್ನೂ ಓದಿ: Sri Lanka vs India, 1st ODI: ಧವನ್,ಕಿಶನ್ ಭರ್ಜರಿ ಬ್ಯಾಟಿಂಗ್, ಭಾರತಕ್ಕೆ 7 ವಿಕೆಟ್ ಗಳ ಜಯ

ನನ್ನ ಜೀವನದಲ್ಲಿ ‘A’ ಎನ್ನುವುದು ತುಂಬಾ ಮುಖ್ಯವಾದುದು. ‘A’ ಅಂದರೆ ಆಕ್ರಮಣಶೀಲತೆ(Aggression), ಮಹತ್ವಾಕಾಂಕ್ಷೆ(Ambition), ಸಾಧನೆ(Achievement) ಮತ್ತು ಪ್ರೀತಿ(Affection) ಎಂದು ಸಾನಿಯಾ ಬರೆದುಕೊಂಡಿದ್ದಾರೆ. ಒಲಂಪಿಕ್ಸ್(Olympics) ಕಿಟ್ ಜೊತೆಗೆ ಸಾನಿಯಾ ಮಿರ್ಜಾ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗಿದೆ. ಅವರ ಅನೇಕ ಅಭಿಮಾನಿಗಳು ಡ್ಯಾನ್ಸ್ ಗೆ ಫಿದಾ ಆಗಿದ್ದು, ಖುಷಿಯಿಂದ ಶೇರ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Smriti Mandhana: 25ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಲೋಕದ ಬ್ಯೂಟಿ ಕ್ವೀನ್ ಬಗ್ಗೆ ನಿಮಗೆಷ್ಟು ಗೊತ್ತು..?

ಪ್ರಧಾನಿ ಮೋದಿ ಜೊತೆ ಸಾನಿಯಾ ಮಾತು

ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಜೊತೆ ಸಾನಿಯಾ ಮಿರ್ಜಾ ಮಂಗಳವಾರ ಮಾತುಕತೆ ನಡೆಸಿದ್ದರು. ಟೆನಿಸ್ ನಲ್ಲಿ ಏನಾದರೂ ದೊಡ್ಡ ಸಾಧನೆ ಮಾಡಬೇಕಾದರೆ ಮಕ್ಕಳು ಹೆಚ್ಚು ಶ್ರಮಪಡಬೇಕು. ಕಠಿಣ ಶ್ರಮವಿರದಿದ್ದರೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಈಗ ಕ್ರೀಡಾಪಟುಗಳಿಗೆ ಅನೇಕ ಸೌಲಭ್ಯಗಳಿವೆ. ಇದು ನನ್ನ ಜೀವನದ 4ನೇ ಒಲಂಪಿಕ್ಸ್ ಕ್ರೀಡಾಕೂಟ. ಭಾರತದ ಕಾಮನ್ ವೆಲ್ತ್ ಕ್ರೀಡಾಕೂಟ(Commonwealth Games)ದಿಂದ ದೇಶದ ಜನರ ನಿರೀಕ್ಷೆ ಹೆಚ್ಚಾಗಿದೆ. ಟೋಕಿಯೊ ಒಲಂಪಿಕ್ಸ್ ನ 18 ಸ್ಪರ್ಧೆಗಳಲ್ಲಿ ಭಾರತದಿಂದ 126 ಕ್ರೀಟಾಪಟುಗಳು ಸ್ಪರ್ಧಿಸುತ್ತಿರುವುದು ಹೆಮ್ಮೆಯ ವಿಷಯ. ಭಾರತೀಯ ಕ್ರೀಡಾಪಟುಗಳು ಶೂಟಿಂಗ್, ಕುಸ್ತಿ ಮತ್ತು ಬಿಲ್ಲುಗಾರಿಕೆಯಲ್ಲಿ ದೇಶಕ್ಕೆ ಪದಕ ತಂದುಕೊಡುತ್ತಾರೆಂಬ ನಿರೀಕ್ಷೆ ಇದೆ ಎಂದು ಸಾನಿಯಾ ಮಿರ್ಜಾ ಹೇಳಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News