Actor Suriya : ಕಳೆದ 26 ವರ್ಷಗಳಿಂದ ನಟ ಸೂರ್ಯ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ತಂದೆ ಶಿವಕುಮಾರ್ ಅವರಂತೆ ಉತ್ತಮ ಹೆಸರನ್ನು ಸಂಪಾದಿಸಿದ್ದಾರೆ. ಅಲ್ಲದೆ, ಸೂರ್ಯ ಅವರ ಕುಟುಂಬವನ್ನು ಅಭಿಮಾನಿಗಳು ಮಾತ್ರವಲ್ಲವೆ, ತಮಿಳು ಚಿತ್ರರಂಗದ ಅನೇಕ ನಟ, ನಟಿಯರೂ ಗೌರವಿಸುತ್ತಾರೆ. ಸಮಾಜ ಕಲ್ಯಾಣ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವ ಸೂರ್ಯ ತಮ್ಮ ಕುಟುಂಬದೊಂದಿಗೆ ʼಅಕಾರಂʼ ಎಂಬ ಚಾರಿಟಿಯನ್ನು ನಡೆಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ನಟ ಪೃಥ್ವಿರಾಜ್ ಬಬ್ಲು ಸಂದರ್ಶನವೊಂದರಲ್ಲಿ ನಟ ಸೂರ್ಯ ಬಗ್ಗೆ ಹೇಳಿರುವ ಮಾತುಗಳು ಪ್ರಸ್ತುತ ರೋಲೆಕ್ಸ್‌ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಕಳೆದ 4 ವರ್ಷಗಳ ಹಿಂದೆ ಬಬ್ಲು ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ನಿರೂಪಕ ಅವರಿಗೆ ಕೆಲವು ನಟರ ಹೆಸರನ್ನು ಹೇಳಿ, ಅವರ ಬಗ್ಗೆ ಒಂದು ಒಳ್ಳೆಯದು ಮತ್ತು ಕೆಟ್ಟದ್ದನ್ನು ಹೇಳುವಂತೆ ಕೇಳಿದ್ದರು. 


ಇದನ್ನು ಓದಿ:ಇತ್ತೀಚಿಗಷ್ಟೇ ಲವ್‌ ಮ್ಯಾರೆಜ್‌ ಆಗಿದ್ದ ಖ್ಯಾತ ನಟಿ ಡೈವೋರ್ಸ್‌ ಘೋಷಣೆ..!


ಮೊದಲಿಗೆ ಅಜಿತ್ ಬಗ್ಗೆ ಕೇಳಿದಾಗ ಬಬ್ಲು, ಅಜಿತ್‌ ಒಳ್ಳೆಯ ವ್ಯಕ್ತಿ ಎಂದರು. ಅವರ ಬಗ್ಗೆ ಕೆಟ್ಟ ವಿಷಯದ ಬಗ್ಗೆ ಮಾತನಾಡಿ, ಅವರಿಗೆ ಡೆಡಿಕೇಷನ್‌ ಕೊರತೆಯಿದೆ ಎಂದು ಹೇಳಿದರು. ನಂತರ, ನಟ ಸೂರ್ಯ ಹೆಸರು ಬಂದಾಗ, ಸೂರ್ಯ ಒಬ್ಬ ಸೆಲ್ಫ್ ಸೆಂಟರ್ಡ್ ಪರ್ಸನ್ ಅಂತ ಹೇಳಿದರು. ಇದರ ಅರ್ಥ " ಸೂರ್ಯ ಒಬ್ಬ ಸ್ವಾರ್ಥಿ" ಅಂತ ಹೆಸರು. ಅಲ್ಲದೆ, ಅವರನ್ನು ಒಳ್ಳೆಯ ನಟ ಎಂದೂ ಬಬ್ಲಿ ಹೊಗಳಿದ್ದರು. 


ಇನ್ನು ನಟ ಬಬ್ಲು ಬಗ್ಗೆ ಹೇಳುವುದಾದರೆ, ಇವರು 90 ರ ದಶಕದಲ್ಲಿ ಕೆಲವು ಚಲನಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. ಅಜಿತ್‌ ನಟನೆಯ ಆಹಾ ಬರುವಾಲಾ ಮತ್ತು ವರಣಂ ಆಯಾರ್ ಚಿತ್ರದಲ್ಲಿ ಸೂರ್ಯ ಜೊತೆ ಕಾಣಿಸಿಕೊಂಡಿದ್ದರು. ಈ ಎರಡು ಚಿತ್ರಗಳಲ್ಲಿ ಇಬ್ಬರ ಜೊತೆ ನಟಿಸಿರುವ ಅನುಭವದಿಂದ ಈ ರೀತಿ ಮಾತನಾಡಿರಬಹುದು ಎನ್ನಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಅನಿಮಲ್ ಚಿತ್ರದಲ್ಲಿ ಬಬ್ಲು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.