ಇತ್ತೀಚಿಗಷ್ಟೇ ಲವ್‌ ಮ್ಯಾರೆಜ್‌ ಆಗಿದ್ದ ಖ್ಯಾತ ನಟಿ ಡೈವೋರ್ಸ್‌ ಘೋಷಣೆ..!

Sheela Rajkumar : ನಟಿ ಶೀಲಾ ರಾಜ್‌ಕುಮಾರ್ ತಮ್ಮ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದ್ದಾರೆ. ಪತಿಗೆ ಡೈವೋರ್ಸ್‌ ನೀಡಿದ್ದಾಗಿ ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗೆ ಈ ಸುದ್ದಿ ಶಾಕ್‌ ನೀಡಿದೆ.

Written by - Krishna N K | Last Updated : Dec 2, 2023, 03:37 PM IST
  • ನಟಿ ಶೀಲಾ ರಾಜ್‌ಕುಮಾರ್ ತಮ್ಮ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದ್ದಾರೆ.
  • ಇತ್ತೀಚಿಗಷ್ಟೇ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದರು.
  • ಸಮುದ್ರದ ಮಧ್ಯದಲ್ಲಿ ವಿಭಿನ್ನವಾಗಿ ಮದುವೆಯಾಗಿದ್ದರು.
ಇತ್ತೀಚಿಗಷ್ಟೇ ಲವ್‌ ಮ್ಯಾರೆಜ್‌ ಆಗಿದ್ದ ಖ್ಯಾತ ನಟಿ ಡೈವೋರ್ಸ್‌ ಘೋಷಣೆ..! title=

Sheela Rajkumar divorce : ಇತ್ತೀಚಿಗೆ ಚಿತ್ರರಂಗದಲ್ಲಿ ಸಡನ್ನಾಗಿ ಮದುವೆ ಆಗೋದು, ಡೈವೋರ್ಸ್‌ ಘೋಷಣೆ ಮಾಡೋದು ಕಾಮನ್‌ ಆಗಿದೆ. ಎಲ್ಲವೂ ಚನ್ನಾಗಿದೆ, ಸೂಪರ್‌ ಜೋಡಿ ಎನ್ನುವಷ್ಟರಲ್ಲೆ, ಸ್ಟಾರ್‌ ನಟಿ ನಟಿಯರು ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸಿರುತ್ತಾರೆ. ಇದೀಗ ಖ್ಯಾತ ನಟಿಯೊಬ್ಬರು ದಿಢೀರನೇ ಡೈವೋರ್ಸ್‌ ಘೋಷಣೆ ಮಾಡಿದ್ದಾರೆ.

ಹೌದು.. ನಟಿ ಶೀಲಾ ರಾಜ್‌ಕುಮಾರ್ ತಮ್ಮ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದ್ದಾರೆ. ಪೋಷಕರ ವಿರೋಧದ ನಡುವೆಯೂ ಸಮುದ್ರದ ಮಧ್ಯದಲ್ಲಿ ವಿಭಿನ್ನವಾಗಿ ಮದುವೆಯಾಗಿದ್ದರು. ಇದೀಗ ಡೈವೋರ್ಸ್‌ ನೀಡಿರುವುದಾಗಿ ತಮ್ಮ ಸೋಷಿಯಲ್‌ ಖಾತೆಯ ಮೂಲಕ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ನೀನು ಬಾತ್‌ ರೂಂ ತೊಳಿ.. ನೀನು.. ಟಾಯ್ಲೆಟ್ ತಿಕ್ಕು, ನಾನು..! ತುಕಾಲಿ ಮಾತು ಕೇಳಿದ್ರೆ ಪಕ್ಕಾ ನಗ್ತೀರಾ..

ನಟಿ ಶೀಲಾ 'ಅರಾಡು ಚಿನಂ' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಟು ಲೆಟ್, ಮಂಡೇಲಾ, ದ್ರೌಪದಿ, ಪಿಚೈಕರನ್ 2, ಜಿಗರ್ತಂಡ ಡಬಲ್ ಎಕ್ಸ್ ಹಿಟ್‌ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ, ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿದರು. ಪ್ರಸ್ತುತ ಅವರು ಅನೇಕ ಚಲನಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ.

ಮೂಲತಃ ಭರತನಾಟ್ಯ ಕಲಾವಿದೆಯಾಗಿರುವ ಶೀಲಾ ಅವರು, ಚಲನಚಿತ್ರ ಸಹಾಯಕ ನಿರ್ದೇಶಕ ತಂಬಿ ಚೋಳನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಪೋಷಕರ ವಿರೋಧದ ನಡುವೆಯೂ ಸಮುದ್ರದ ಮಧ್ಯದಲ್ಲಿ ವಿಭಿನ್ನ ರೀತಿಯಲ್ಲಿ ಸಪ್ತಪದಿ ತುಳಿದಿದ್ದರು. ಸಧ್ಯ ತಮ್ಮ ಪತಿಗೆ ವಿಚ್ಚೇದನ ನೀಡಿರುವುದಾಗಿ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಅದ್ರೆ ಈ ನಿರ್ಧಾರಕ್ಕೆ ಕಾರಣವೇನು ಎಂದು ಹೇಳಿಕೊಂಡಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News