Animal: ಅರ್ಜುನ್ ರೆಡ್ಡಿ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸದ್ಯ ಬಾಲಿವುಡ್‌ ಮೂವಿ ʼಅನಿಮಲ್ʼನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ರಣಬೀರ್ ಕಪೂರ್ ನಾಯಕನಾಗಿ ಮತ್ತು ರಶ್ಮಿಕಾ ಮಂದಣ್ಣಾ ನಾಯಕಿಯಾಗಿ ನಟಿಸಿದ್ದಾರೆ. ಇವರೊಂದಿಗೆ ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್, ಸುರೇಶ್ ಒಬೆರಾಯ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಈ ಅನಿಮಲ್ ಚಿತ್ರ ಎಲ್ಲಾ ದಕ್ಷಿಣ ಭಾರತದ ಭಾಷೆಗಳಲ್ಲಿ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗುವ ಪ್ಯಾನ್ ಇಂಡಿಯಾ ಚಲನಚಿತ್ರವಾಗಿದ್ದು.. ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ. ಸದ್ಯ ಟ್ರೇಲರ್ ಈ ಚಿತ್ರದಟ್ರೈಲರ್‌ ಬಿಡುಗಡೆ ಆಗಿದೆ.. 


ಇದನ್ನೂ ಓದಿ-ಸಲ್ಮಾನ್ ಖಾನ್‌ ಟು ಶಾರುಖ್‌ ಖಾನ್‌.. ಬಾಲಿವುಡ್‌ ನಟರ ಬ್ರೈಡಲ್‌ ಲುಕ್‌ ವೈರಲ್


‘ಅರ್ಜುನ್ ರೆಡ್ಡಿ’ಯಂತಹ ರೋಮ್ಯಾಂಟಿಕ್‌ ಮತ್ತು ಮಾಸ್‌ ಸಿನಿಮಾ ನೀಡುವ ಮೂಲಕ ಸಂದೀಪ್ ರೆಡ್ಡಿ ವಂಗ ತಮ್ಮದೇ ಆದ ಛಾಪು ಮೂಡಿಸಿದ್ದರು. ಇದರೊಂದಿಗೆ ಸಂದೀಪ್ ಅವರ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿತ್ತು.. ಅದರಲ್ಲೂ ಯುವಕರು ಸಂದೀಪ್ ಅವರ ಮುಂಬರುವ ಚಿತ್ರಗಳಿಗಾಗಿ ಕಾಯುತ್ತಿರೋದು ಸುಳ್ಳಲ್ಲ.. 


ಇದನ್ನೂ ಓದಿ-Surya Sethupathi: ಸೌತ್‌ ಸಿನಿರಂಗಕ್ಕೆ ಎಂಟ್ರಿಕೊಟ್ಟ ವಿಜಯ್ ಸೇತುಪತಿ ಪುತ್ರ..! ಮೊದಲ ಚಿತ್ರದಲ್ಲೇ ಮಾಸ್ ಹೀರೋ


ಪ್ರಸ್ತುತ ಸಂದೀಪ್ ಅನಿಮಲ್ ಚಿತ್ರಕ್ಕಾಗಿಯೂ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.. ಈ ಅನಿಮಲ್ ಸಿನಿಮಾ ಡಿಸೆಂಬರ್ 1 ರಂದು ವಿಶ್ವದಾದ್ಯಂತ ಭಾರೀ ನಿರೀಕ್ಷೆಗಳೊಂದಿಗೆ ಬಿಡುಗಡೆಯಾಗುತ್ತಿದ್ದು.. ಇತ್ತೀಚೆಗಷ್ಟೇ ರಿಲೀಸ್ ಆಗಿರುವ ಟ್ರೇಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಗಗನಕ್ಕೇರಿಸಿದ್ದಲ್ಲದೆ, ಚರ್ಚೆಗೆ ಗ್ರಾಸವಾಗಿದೆ. 


ಅಪ್ಪ-ಮಗನ ಸಂಬಂಧವನ್ನು ಹೀಗೆ ಹಿಂಸಾತ್ಮಕವಾಗಿ ತೋರಿಸಬಹುದು ಎಂದು ಬಾಲಿವುಡ್ ಮಂದಿ ಟೀಕಿಸುತ್ತಿದ್ದಾರೆ.. ಆದರೆ ಈ ಹಿಂದೆಯೂ ಸಂದೀಪ್ ಅವರ ಅರ್ಜುನ್ ರೆಡ್ಡಿ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡುವಾಗಲೂ ಇದೊಂದು ಹಿಂಸಾತ್ಮಕ ಪ್ರೇಮಕಥೆ ಎಂದೇ ಟೀಕಿಸಿದ್ದರು. ಆ ವೇಳೆ ಸಂದೀಪ್ ಅವರಿಗೆ ಉತ್ತರ ನೀಡಿ ನನ್ನ ಮುಂದಿನ ಸಿನಿಮಾದಲ್ಲಿ ಹಿಂಸೆ ಏನು ಎಂಬುದನ್ನು ತೋರಿಸುತ್ತೇನೆ ಎಂದಿದ್ದರು..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.