Surya Sethupathi: ಸೌತ್‌ ಸಿನಿರಂಗಕ್ಕೆ ಎಂಟ್ರಿಕೊಟ್ಟ ವಿಜಯ್ ಸೇತುಪತಿ ಪುತ್ರ..! ಮೊದಲ ಚಿತ್ರದಲ್ಲೇ ಮಾಸ್ ಹೀರೋ

Vijay Sethupathi Son: ಮಕಲ್ ಸೆಲ್ವನ್ ವಿಜಯ್ ಸೇತುಪತಿ ಅವರ ಪುತ್ರ ಸೂರ್ಯ ಫೀನಿಕ್ಸ್ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡಿದ್ದಾರೆ.

Written by - Savita M B | Last Updated : Nov 24, 2023, 12:51 PM IST
  • ಚಿತ್ರರಂಗದ ಖ್ಯಾತನಾಮರ ಉತ್ತರಾಧಿಕಾರಿಗಳು ಚಿತ್ರರಂಗಕ್ಕೆ ಬರುವುದು ಹಲವು ವರ್ಷಗಳಿಂದ ನಿರಂತರವಾಗಿದೆ
  • ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ನಟ ವಿಜಯ್ ಸೇತುಪತಿ ಪುತ್ರ ಸೂರ್ಯ ಸೇತುಪತಿ.
  • ಸೂರ್ಯ ಸೇತುಪತಿ ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಚಿತ್ರಕ್ಕೆ ಫೀನಿಕ್ಸ್ಎಂದು ಹೆಸರಿಡಲಾಗಿದೆ.
Surya Sethupathi: ಸೌತ್‌ ಸಿನಿರಂಗಕ್ಕೆ ಎಂಟ್ರಿಕೊಟ್ಟ ವಿಜಯ್ ಸೇತುಪತಿ ಪುತ್ರ..! ಮೊದಲ ಚಿತ್ರದಲ್ಲೇ ಮಾಸ್ ಹೀರೋ  title=

Vijay Sethupathi: ಚಿತ್ರರಂಗದ ಖ್ಯಾತನಾಮರ ಉತ್ತರಾಧಿಕಾರಿಗಳು ಚಿತ್ರರಂಗಕ್ಕೆ ಬರುವುದು ಹಲವು ವರ್ಷಗಳಿಂದ ನಿರಂತರವಾಗಿದೆ. ತಮಿಳು ಚಿತ್ರರಂಗದಲ್ಲಿ ಶಿವಾಜಿ ಗಣೇಶನ್‌ ಪುತ್ರ ಪ್ರಭು, ವಿಕ್ರಮ್‌ ಪ್ರಭು, ಶರತ್‌ಕುಮಾರ್‌ ಪುತ್ರಿ ವರಲಕ್ಷ್ಮಿ, ವಿಜಯ್‌ ಪುತ್ರ ಸಂಜಯ್‌, ಶಂಕರ್‌ ಪುತ್ರಿ ಅದಿತಿ, ಪಾಖ್ಯರಾಜ್‌ ಪುತ್ರ ಶಂತನು, ರಾಧಾ ಪುತ್ರಿ ಕಾರ್ತಿಕಾ, ರಜಿನಿ ಪುತ್ರಿಯರಾದ ಐಶ್ವರ್ಯ, ಸೆಳಂದರ್ಯ, ಕಮಲ್‌ ಪುತ್ರಿಯರಾದ ಅಕ್ಷರಾ, ಶ್ರುತಿ ಹೀಗೆ ಪಟ್ಟಿ ಮುಂದುವರಿಯುತ್ತದೆ...

ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ನಟ ವಿಜಯ್ ಸೇತುಪತಿ ಪುತ್ರ ಸೂರ್ಯ ಸೇತುಪತಿ. ಈಗಾಗಲೇ ಬಾಲನಟನಾಗಿ ಕೆಲ ಚಿತ್ರಗಳಲ್ಲಿ ನಟಿಸಿದ್ದರೂ ಈಗ ಅಪ್ಪನಂತೆಯೇ ಹೀರೋ ಆಗಿ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಪದವೀಧರ ಸೂರ್ಯ ಸೇತುಪತಿ ನಾಯಕನಾಗಿ ಚೊಚ್ಚಲ ಚಲನಚಿತ್ರವನ್ನು ಖ್ಯಾತ ಸ್ಟಂಟ್ ಮಾಸ್ಟರ್ ನಿರ್ದೇಶಿಸಿಸುತ್ತಿದ್ದಾರೆ..

ಇದನ್ನೂ ಓದಿ-ಸಾರಾ ತೆಂಡೂಲ್ಕರ್ ಸೇರಿದಂತೆ ಈ ಸ್ಟಾರ್​ ಕಿಡ್‌ಗಳ ಶಿಕ್ಷಣ ಏನಾಗಿದೆ ಗೊತ್ತೇ!

ಸೂರ್ಯ ಸೇತುಪತಿ ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಚಿತ್ರಕ್ಕೆ ಫೀನಿಕ್ಸ್ಎಂದು ಹೆಸರಿಡಲಾಗಿದೆ. ಸದ್ಯ ಚಿತ್ರದ ಶೂಟಿಂಗ್ ಆರಂಭವಾಗಿದ್ದು.. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಬಿಡುಗಡೆಯಾಗಿದೆ. 

ಇದರೊಂದಿಗೆ ಸೂರ್ಯ ಸೇತುಪತಿ ಮೊದಲ ಚಿತ್ರದಲ್ಲೇ ಮಾಸ್ ಹೀರೋ ಆಗಿ ಪಾದಾರ್ಪಣೆ ಮಾಡೋದು ಖಚಿತವಾಗಿದೆ. ಫೀನಿಕ್ಸ್‌ಗೆ ಸ್ಯಾಮ್ ಸಿಎಸ್ ಅವರು ಸಂಗೀತ ಸಂಯೋಜನೆ ಮಾಡಲಿದ್ದು.. ವೇಲರಾಜ್ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದಾರೆ. ಚಿತ್ರದಲ್ಲಿ ಸೂರ್ಯಾಗೆ ಜೋಡಿಯಾಗಿ ಯಾರು ನಟಿಸಲಿದ್ದಾರೆ ಎಂಬುದನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ. ಸದ್ಯ ಫೀನಿಕ್ಸ್ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ ಸೂರ್ಯ ಸೇತುಪತಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಇದನ್ನೂ ಓದಿ-Aishwarya Arjun: ಅರ್ಜುನ್ ಪುತ್ರಿಯ ನಿಶ್ಚಿತಾರ್ಥದ ಉಂಗುರ ಬೆಲೆ ಎಷ್ಟು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News