Animal Box Office Collection: ರಣಬೀರ್‌ ಕಪೂರ್‌ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಚಿತ್ರವು ಡಿಸೆಂಬರ್ 1 ರಂದು ಬಿಡುಗಡೆಯಾಗಿದ್ದು, ಅಂದಿನಿಂದ ನಿರಂತರವಾಗಿ ಬಾಕ್ಸ್ ಆಫೀಸ್ ಅನ್ನು ಆಳುತ್ತಿದ್ದು.. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.. ಆದರೆ ಕಲೆಕ್ಷನ್‌ ವಿಚಾರದಲ್ಲಿ ಸಿನಿಮಾ ಮುಂಚೂಣಿಯಲ್ಲಿದೆ.. 


COMMERCIAL BREAK
SCROLL TO CONTINUE READING

ಮೊದಲ ದಿನವೇ 63 ಕೋಟಿ ರೂ.ಗಳ ಬೃಹತ್ ಕಲೆಕ್ಷನ್ ಮಾಡಿದ ಚಿತ್ರದ ಭರ್ಜರಿ ಕಲೆಕ್ಷನ್ ಸತತ ಐದನೇ ದಿನವೂ ಮುಂದುವರೆದಿದೆ. ಮೊದಲ ವಾರಾಂತ್ಯದ ನಂತರ, ಸೋಮವಾರವೂ ಚಿತ್ರ ದೊಡ್ಡ ದಾಖಲೆಯ ಕಲೆಕ್ಷನ್‌ ಮಾಡಿದ್ದು.. ಮಂಗಳವಾರವೂ ಅದೇ ವೇಗದಲ್ಲಿ ಸಾಗುತ್ತಿದೆ.. 


ಇದನ್ನೂ ಓದಿ-ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಿತ್ರದ "ಕೃಷ್ಣಂ ಪ್ರಣಯ ಸಖಿ" ಚಿತ್ರೀಕರಣ ಮುಕ್ತಾಯ


ಸೋಮವಾರ ಚಿತ್ರ 43.96 ಕೋಟಿ ಕಲೆಕ್ಷನ್ ಮಾಡಿದ್ದು, ಮಂಗಳವಾರದಂದು ಅನಿಮಲ್ ಗಳಿಕೆಯಲ್ಲಿ ಕೊಂಚ ಇಳಿಕೆಯಾಗಿದೆ ಎಂಬ ಸುದ್ದಿ ಆದರೆ ಇದಾದ ಬಳಿಕವೂ ಭರ್ಜರಿ ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ... ವರದಿಯ ಪ್ರಕಾರ, ರಣಬೀರ್ ಕಪೂರ್ ಅವರ ಚಿತ್ರ ಮಂಗಳವಾರ 38.25 ಕೋಟಿ ರೂ. ಗಳಿಸಿದೆ... 


ಇದನ್ನೂ ಓದಿ-Yash 19: ಯಶ್ ಗೆ ಈ ʻನ್ಯಾಚುರಲ್‌ ಬ್ಯೂಟಿʼನೇ ನಾಯಕಿ.. ಕನ್ನಡಕ್ಕೆ ಸಾಯಿಪಲ್ಲವಿ‌ ಗ್ರ್ಯಾಂಡ್ ಎಂಟ್ರಿ.!


ಸದ್ಯ ಐದನೇ ದಿನಕ್ಕೆ ಅನಿಮಲ್ ಭಾರತವೊಂದರಲ್ಲೇ 283.74 ಕೋಟಿ ಕಲೆಕ್ಷನ್ ಮಾಡಿದೆ. ಇದು ರಣಬೀರ್ ಕಪೂರ್ ಅವರ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ. ಮೊದಲ ನಾಲ್ಕು ದಿನಗಳಲ್ಲಿ ವಿಶ್ವದಾದ್ಯಂತ ಸುಮಾರು 26 ಚಿತ್ರಗಳ ದಾಖಲೆಯನ್ನು ಮುರಿದಿದ್ದ ಈ ಚಿತ್ರ ಇದೀಗ ಐದನೇ ದಿನದಲ್ಲಿ ಶಾರುಖ್ ಖಾನ್ ಅವರ ಜವಾನ್ ಸೇರಿದಂತೆ 14 ದೊಡ್ಡ ಚಿತ್ರಗಳನ್ನು ಹಿಂದಿಕ್ಕಿದೆ. 


ಈ ಹಿಂದೆ ಈ ದಾಖಲೆ ಶಾರುಖ್ ಖಾನ್ ಅವರ ಚೆನ್ನೈ ಎಕ್ಸ್‌ಪ್ರೆಸ್ ಹೆಸರಿನಲ್ಲಿತ್ತು. ಈ ಚಿತ್ರ ನಾಲ್ಕನೇ ದಿನಕ್ಕೆ 424.54 ಕೋಟಿ ಕಲೆಕ್ಷನ್ ಮಾಡಿದ್ದರೆ, ಅನಿಮಲ್ 424.87 ಕೋಟಿ ಕಲೆಕ್ಷನ್ ಮಾಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ