Bigg Boss ಶೋನಲ್ಲಿ ಖ್ಯಾತ ಕಿರುತೆರೆ ನಟಿಯ ಸಂಸಾರದ ಗುಟ್ಟು ರಟ್ಟು.!
Bigg Boss Fight : ಬಿಗ್ ಬಾಸ್ ನಲ್ಲಿ ಖ್ಯಾತ ಕಿರುತೆರೆ ನಟಿಯ ಸಂಸಾರದ ಗುಟ್ಟು ರಟ್ಟಾಗಿದೆ.
Ankita Lokhande Vicky Jain: ಬಿಗ್ ಬಾಸ್ ನಲ್ಲಿ ಖ್ಯಾತ ಕಿರುತೆರೆ ನಟಿಯ ಸಂಸಾರದ ಗುಟ್ಟು ರಟ್ಟಾಗಿದೆ. ವಿಕ್ಕಿ ಜೈನ್ ಮತ್ತು ಅಂಕಿತಾ ಲೋಖಂಡೆ ಅವರಿಬ್ಬರ ತಾಯಂದಿರೂ ಕಾರ್ಯಕ್ರಮಕ್ಕೆ ಹೋಗಿದ್ದರು. ಇಬ್ಬರೂ ತಮ್ಮ ಮಕ್ಕಳಿಗೆ ಸಾಂತ್ವನ ಹೇಳಲು ಮುಂದಾದಾಗ ಅಂಕಿತಾ ಮತ್ತು ಆಕೆಯ ಅತ್ತೆ ನಡುವೆ ವಾಗ್ವಾದ ನಡೆದಿದೆ. ಬಿಗ್ ಬಾಸ್ ಮನೆಯಲ್ಲಿ ಒಂದು ದಿನ ಕಳೆದ ನಂತರ ವಿಕ್ಕಿ ಜೈನ್ ತಾಯಿ ಹೊರಬಂದಿದ್ದಾರೆ.
ಬಿಗ್ ಬಾಸ್ ಮನೆಗೆ ಬಂದ ಖ್ಯಾತ ಹಿಂದಿ ನಟಿ ಅಂಕಿತಾ ಲೋಖಂಡೆ ಸಂಸಾರದ ಜಗಳ ಬೀದಿಗೆ ಬಂದಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಪತಿ ವಿಕ್ಕಿ ಜೈನ್ ಜೊತೆಗೆ ಬಿಗ್ ಬಾಸ್ 17 ಸ್ಪರ್ಧಿಯಾಗಿ ಬಂದಿದ್ದಾರೆ.
ಇದನ್ನೂ ಓದಿ: ಕ್ಯಾಪ್ಟನ್ ಮಿಲ್ಲರ್ ಬಾಕ್ಸ್ ಆಫೀಸ್ ಕಲೆಕ್ಷನ್: ಕೇವಲ 3 ದಿನದಲ್ಲಿ 3 ಕೋಟಿ!
ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ನಡುವಿನ ಜಗಳ ದಿನ ಕಳೆದಂತೆ ಹೆಚ್ಚಾಗುತ್ತಲೇ ಇದೆ. ವಿಕ್ಕಿ ಹಾಗೂ ಅಂಕಿತಾ ತಾಯಿ ಬಿಗ್ ಬಾಸ್ ಮನೆಯೊಳಗೆ ಬಂದು ಮಕ್ಕಳಿಗೆ ಬುದ್ಧಿ ಮಾತು ಹೇಳಿದ್ದಾರೆ. ವಿಕ್ಕಿ ಜೈನ್ ತಾಯಿ ಸೊಸೆ ಅಂಕಿತಾ ಮೇಲೆ ಆರೋಪಗಳನ್ನು ಹೊರೆಸಿದ್ದಾರೆ. ಸಂದರ್ಶನಗಳಲ್ಲಿ ಅವರು ಅಂಕಿತಾ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ. ಇದನ್ನು ನೋಡಿ ಅನೇಕರು ಅಂಕಿತಾ ಅತ್ತೆ ಥರ ನಮಗೆ ಅತ್ತೆ ಬೇಡ ಎನ್ನುವಂತಾಗಿದೆ.
ಅಂಕಿತಾ ಮಾತನಾಡುವಾಗ ಬುದ್ಧಿವಂತಿಕೆಯಿಂದ ಮಾತನಾಡಬೇಕು, ಗಂಡನಿಗೆ ಗೌರವ ಕೊಡಬೇಕು. ಅಂಕಿತಾ ತನಗೆ ಮದುವೆಯಾಗಿದೆ ಎನ್ನೋದನ್ನು ಮರೆಯಬಾರದು. ಅವಳಿಗೆ ಮದುವೆ ಆಗಿರೋದೇ ನೆನಪಿಲ್ಲ. ವಿಕ್ಕಿ ಯಾವಾಗಲೂ ತಮಾಷೆಯಿಂದ ಇರುವ ಹುಡುಗ, ಅವನನ್ನು ಯಾವಾಗಲೂ ಕಿರಿಕಿರಿ ಮಾಡ್ತಿದ್ದರೆ ಅವನಿಗೆ ಆ ಜಾಗದಲ್ಲಿ ಇರೋಕೆ ಇಷ್ಟವಾಗಲ್ಲ ಎಂದಿದ್ದಾರೆ.
ಸಿಂಪತಿಗಾಗಿ ಅಂಕಿತಾ ಮಾಜಿ ಪ್ರಿಯಕರ ಸುಶಾಂತ್ ಸಿಂಗ್ ಹೆಸರನ್ನು ಬಳಸಿಕೊಳ್ಳುತ್ತಿದ್ದಾಳೆ. ನನ್ನ ಮಗನೇ ಅವನ ಸಂಬಂಧವನ್ನು ನೋಡಿಕೊಳ್ತಾನೆ, ನಾನು ಇದಕ್ಕೆ ತಲೆ ಹಾಕೋದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Actress Mahalakshmi: ಗಂಡ ಐಸಿಯುನಲ್ಲಿದ್ರೂ ನಟಿ ಮಹಾಲಕ್ಷ್ಮಿ ಸಂಕ್ರಾಂತಿ ಸಂಭ್ರಮ.!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.