ಕ್ಯಾಪ್ಟನ್ ಮಿಲ್ಲರ್ ಬಾಕ್ಸ್ ಆಫೀಸ್ ಕಲೆಕ್ಷನ್: ಕೇವಲ 3 ದಿನದಲ್ಲಿ 3 ಕೋಟಿ!

Captain Miller Box Office Collection: ಧನುಷ್ ಅಭಿನಯದ ಕ್ಯಾಪ್ಟನ್ ಮಿಲ್ಲರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ.

Written by - Chetana Devarmani | Last Updated : Jan 16, 2024, 04:02 PM IST
  • ಧನುಷ್ ಅಭಿನಯದ ಕ್ಯಾಪ್ಟನ್ ಮಿಲ್ಲರ್
  • ಅರುಣ್ ಮಾಥೇಶ್ವರನ್ ನಿರ್ದೇಶನದ ಸಿನಿಮಾ
  • ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಬಾಕ್ಸ್‌ ಆಫೀಸ್‌ ಕಲೆಕ್ಷನ್‌
ಕ್ಯಾಪ್ಟನ್ ಮಿಲ್ಲರ್ ಬಾಕ್ಸ್ ಆಫೀಸ್ ಕಲೆಕ್ಷನ್: ಕೇವಲ 3 ದಿನದಲ್ಲಿ 3 ಕೋಟಿ!  title=
Captain Miller

Captain Miller Box Office Collection: ಅರುಣ್ ಮಾಥೇಶ್ವರನ್ ನಿರ್ದೇಶನದ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಧನುಷ್ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರ ಮೂರು ದಿನಗಳ ಹಿಂದೆ ಜನವರಿ 12 ರಂದು ಬಿಡುಗಡೆಯಾಗಿತ್ತು. ಇದುವರೆಗಿನ ಚಿತ್ರದ ವಿಮರ್ಶೆಗಳು ಮತ್ತು ಕಲೆಕ್ಷನ್ ವಿವರಗಳು ಇಲ್ಲಿದೆ. 

ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಧನುಷ್ ಜೊತೆಗೆ ಕನ್ನಡದ ಸೆಂಚ್ಯುರಿ ಸ್ಟಾರ್‌ ಶಿವರಾಜ್ ಕುಮಾರ್, ತೆಲುಗು ನಟ ಸಂದೀಪ್ ಕಿಶನ್, ನಟಿಯರಾದ ಪ್ರಿಯಾಂಕಾ ಮೋಹನ್, ಅದಿತಿ ಬಾಲನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕಳೆದ 3 ವರ್ಷಗಳಿಂದ ಕ್ಯಾಪ್ಟನ್ ಮಿಲ್ಲರ್ ಚಿತ್ರೀಕರಣ ನಡೆಯುತ್ತಿತ್ತು. ಈ ಚಿತ್ರಕ್ಕೆ ಜಿ.ವಿ.ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಅವರು ಈಗಾಗಲೇ ಹಲವಾರು ಚಿತ್ರಗಳಲ್ಲಿ ಧನುಷ್ ಜೊತೆ ಕೆಲಸ ಮಾಡಿದ್ದಾರೆ.  

ಕ್ಯಾಪ್ಟನ್ ಮಿಲ್ಲರ್ ವಿಮರ್ಶೆ:

ಕ್ಯಾಪ್ಟನ್ ಮಿಲ್ಲರ್ ಮಿಶ್ರ ವಿಮರ್ಶೆಗಳನ್ನು ಪಡೆದಿದೆ. ಚಿತ್ರ ವೀಕ್ಷಿಸಿದ ಅಭಿಮಾನಿಗಳ ಗುಂಪೊಂದು ಚಿತ್ರದಲ್ಲಿ ಫೈಟಿಂಗ್ ಬಿಟ್ಟು ಬೇರೇನೂ ಇಲ್ಲ ಎಂದು ಹೇಳಿದ್ದಾರೆ. ಕೆಲವು ಅಭಿಮಾನಿಗಳು ಹೊಡೆದಾಟದ ದೃಶ್ಯಗಳು ತುಂಬಾ ಹಿಂಸಾತ್ಮಕವಾಗಿವೆ ಎಂದು ಹೇಳಿದರು. ಫೈಟಿಂಗ್ ಸಿನಿಮಾಗಳನ್ನು ಇಷ್ಟಪಡುವ ಅಭಿಮಾನಿಗಳಿಂದ ಚಿತ್ರವು ಉತ್ತಮ ವಿಮರ್ಶೆಗಳನ್ನು ಪಡೆಯಿತು.  

ಇದನ್ನೂ ಓದಿ: Prabhas: ನಟ ಪ್ರಭಾಸ್ ಯಶಸ್ಸಿಗಾಗಿ ಹೆಸರನ್ನೇ ಬದಲಿಸಿಕೊಂಡ್ರಾ? 

ಕ್ಯಾಪ್ಟನ್ ಮಿಲ್ಲರ್ ಬಾಕ್ಸ್ ಆಫೀಸ್ ಕಲೆಕ್ಷನ್: 

ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಕಳೆದ ಮೂರು ದಿನಗಳಲ್ಲಿ 23 ಕೋಟಿ ಕಲೆಕ್ಷನ್ ದಾಟಿದೆ. ಚಿತ್ರವು ಮೊದಲ ದಿನ 6.5 ಕೋಟಿ ಗಳಿಸಿದೆ. ಶನಿವಾರ ಮತ್ತು ಭಾನುವಾರದ ವಾರಾಂತ್ಯದಲ್ಲಿ 7.5 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಚಿತ್ರವು ಸಾಕಷ್ಟು ನಕಾರಾತ್ಮಕ ವಿಮರ್ಶೆಗಳನ್ನು ಪಡೆದಿದ್ದರೂ, ಇದು ಗಲ್ಲಾಪೆಟ್ಟಿಗೆಯಲ್ಲಿ ತನ್ನ ಓಟ ಮುಂದುವರೆಸಿದೆ. ಇನ್ನು ಒಂದು ವಾರದಲ್ಲಿ ಕ್ಯಾಪ್ಟನ್ ಮಿಲ್ಲರ್ 50 ಕೋಟಿ ರೂ.ವರೆಗೆ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.

ಕ್ಯಾಪ್ಟನ್ ಮಿಲ್ಲರ್ ಚಿತ್ರದ ಕಥೆ 

ಕ್ಯಾಪ್ಟನ್ ಮಿಲ್ಲರ್ ಸ್ಟೋರಿಯಲ್ಲಿ ಧನುಷ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು 1930 ರ ದಶಕದಲ್ಲಿ ನಡೆಯುತ್ತದೆ. ಕಥಾವಸ್ತುವು ಧನುಷ್ ತನ್ನ ಹಳ್ಳಿಯನ್ನು ಬ್ರಿಟಿಷ್ ಸರ್ಕಾರದಿಂದ ರಕ್ಷಿಸಲು ಹೋರಾಟಗಾರನಾಗುವುದರ ಸುತ್ತ ಸುತ್ತುತ್ತದೆ. ಶಿವರಾಜ್ ಕುಮಾರ್ ಅವರಿಗೆ ಪವರ್ ಫುಲ್ ಪಾತ್ರ ನೀಡಲಾಗಿದ್ದು, ಅದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.  

ಡಿಜಿಟಲ್ ಸ್ಟ್ರೀಮಿಂಗ್..

ಅಮೆಜಾನ್ ಪ್ರೈಮ್ ಕ್ಯಾಪ್ಟನ್ ಮಿಲ್ಲರ್ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ. ಕೆಲವೇ ದಿನಗಳಲ್ಲಿ ಕ್ಯಾಪ್ಟನ್ ಮಿಲ್ಲರ್ OTT ಬಿಡುಗಡೆ ದಿನಾಂಕ ಘೋಷಿಸುವ ನಿರೀಕ್ಷೆಯಿದೆ. 

ಇದನ್ನೂ ಓದಿ: PHOTOS: ಸೀಮಂತದ ಸಂಭ್ರಮದಲ್ಲಿ ನಟಿ ಕಾವ್ಯ ಗೌಡ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News