Bollywood : 30 ವರ್ಷಗಳ ಹಿಂದೆ ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದಿದೆ ಎಂದು ಹೇಳಲಾದ ಘಟನೆಯೊಂದನ್ನು ಆಧರಿಸಿದ ಸಿನಿಮಾ ಅಜ್ಮೀರ್‌ 92. ಈ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಆದರೆ ಈ ಸಿನಿಮಾ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ ಎಂದು ಜಮೀಯತ್‌ ಉಲಮಾ ಈ ಹಿಂದ್‌ ಸಂಘಟನೆಯು ಆತಂಕ ವ್ಯಕ್ತಪಡಿಸಿದೆ. 


COMMERCIAL BREAK
SCROLL TO CONTINUE READING

ಬಿಡುಗಡೆಗೂ ಮುನ್ನವೇ ಈ ಸಿನಿಮಾಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದ್ದು, ಈ ಸಿನಿಮಾವನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ. ಜಮೀಯತ್‌ ಉಲಮಾ ಈ ಹಿಂದ್‌ ಸಂಘಟನೆಯು ಈ ಚಿತ್ರದ ಬಿಡುಗಡೆಯನ್ನು ತಡೆಯಬೇಕು ಎಂದು ಒತ್ತಾಯಿಸುತ್ತಿದೆ. 


Actor Kishor : ಹಳಿ ತಪ್ಪಿರುವುದು ರೈಲು ಬೋಗಿಗಳಲ್ಲ, ನಮ್ಮ ಸರ್ಕಾರ


"ಅಪರಾಧಗಳ ಘಟನೆಗಳನ್ನು ಧರ್ಮದ ಜೊತೆ ಸೇರಿಸುವ ಬದಲು ಅಪರಾಧಗಳ ವಿರುದ್ಧ ಒಗ್ಗಟ್ಟಿನ ಕ್ರಮದ ಅಗತ್ಯವಿದೆ ಎಂದು ಸಂಘಟನೆಯ ಅಧ್ಯಕ್ಷ ಮಹಮೂದ್‌ ಮದನಿ ಹೇಳಿದ್ದಾರೆ. ಇಂತಹ ಸಿನಿಮಾಗಳು ಸಮಾಜದಲ್ಲಿ ಬಿರುಕು ಮೂಡಿಸುತ್ತವೆ. ಕೇಂದ್ರ ಸರ್ಕಾರವು ಈ ಚಿತ್ರವನ್ನು ನಿಷೇಧಿಸುವ ಮೂಲಕ ಕೋಮುಭಾವನೆಗಳನ್ನು ಕೆರಳಿಸುವ ಸಮಾಜವನ್ನು ವಿಭಜಿಸುವ ಪ್ರಯತ್ನವನ್ನು ವಿಫಲಗೊಳಿಸಬೇಕು" ಎಂದು ಮದನಿ ಮನವಿಮಾಡಿದ್ದಾರೆ. 


ಅಜ್ಮೀರ್‌ನಲ್ಲಿರುವ ಖ್ವಾಜಾ ಮುಈನುದ್ದೀನ್‌ ಷರೀಫ್‌ ಚಿಪ್ತಿ ದರ್ಗಾವು ದೇಶದ ಹಿಂದೂ-ಮುಸ್ಲಿಂ ಏಕತೆಗೆ ಸಾಕ್ಷಿಯಾಗಿದೆ. ಖ್ವಾಜಾ ಮುಈನುದ್ದೀನ್‌ ಷರೀಫ್‌ ಅವರು ಭಾರತ ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯದ ದೇವದೂತ ಎಂದೆನಿಸಿಕೊಂಡಿದ್ದರು. ಎಂದು ಮದನಿ ಅವರು ಬಣ್ಣಿಸಿದ್ದಾರೆ. ಈ ಅಜ್ಮೀರ್‌ ಸಿನಿಮಾವನ್ನು ಪುಷ್ಪೇಂದ್ರ ನಿರ್ದೇಶಿಸಿದ್ದು, ಜರೀನಾ ವಹಾಬ್‌ ಸಯಾಜಿ ಶಿಂಧೆ, ಮನೋಜ್‌ ಜೋಶಿ ಹಾಗೂ ರಾಜೇಶ್‌ ಶರ್ಮಾ ನಟಿಸಿದ್ದಾರೆ. 


ಇದನ್ನೂ ಓದಿ-Viral video : ಉರ್ಫಿ ಜಾವೇದ್‌ನೆ ಮೀರಿಸ್ತಾರಾ ಈ ನಟಿ?; ಶೆರ್ಲಿನ್‌ ಲುಕ್‌ಗೆ ಫ್ಯಾನ್ಸ್‌ ಗರಂ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.