ಮುಂಬೈ : ಡ್ರಗ್ಸ್  ಪ್ರಕರಣದಲ್ಲಿ (Drugs Case) ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan) ಸಂಕಷ್ಟ ಕೊನೆಯಾಗುವಂತೆ ಕಾಣುತ್ತಿಲ್ಲ. ಸೋಮವಾರ, ಆರ್ಯನ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಅಕ್ಟೋಬರ್ 7 ರವರೆಗೆ ಎನ್‌ಸಿಬಿ ಕಸ್ಟಡಿಗೆ ಒಪ್ಪಿಸಿದೆ. ಮತ್ತೊಂದೆಡೆ, ಆರ್ಯನ್ ಸ್ನೇಹಿತ ಶ್ರೇಯಸ್ ನಾಯರ್ ಎಂಬವರನ್ನು ಕೂಡ ಇದೀಗ ಎನ್‌ಸಿಬಿ (NCB Arrest) ಬಂಧಿಸಿದೆ. 


COMMERCIAL BREAK
SCROLL TO CONTINUE READING

ಪಾರ್ಟಿಗೆ ಹೋಗುವವನಿದ್ದ ಶ್ರೇಯಸ್ :
ಆರ್ಯನ್ ಖಾನ್ (Aryan Khan), ಅರ್ಬಾಜ್ ಮರ್ಚೆಂಟ್ ಮತ್ತು ಶ್ರೇಯಸ್ ನಾಯರ್ (Shreyas Nair) ಶಾಲಾ ಸಮಯದಿಂದಲೇ ಸ್ನೇಹಿತರು ಎಂದು ಹೇಳಲಾಗುತ್ತಿದೆ. ಆರ್ಯನ್ ಖಾನ್ ಮತ್ತು ಅರ್ಬಾಜ್ ಮರ್ಚೆಂಟ್ ಅವರ ಮೊಬೈಲ್ ಚಾಟ್‌ಗಳಲ್ಲಿ (Mobile chat) ಶ್ರೇಯಸ್ ಹೆಸರು ಪ್ರಸ್ತಾಪವಾಗಿದೆ. ಮೂಲಗಳ ಪ್ರಕಾರ, ಶ್ರೇಯಸ್ ನಾಯರ್ ಕೂಡ ರೇವ್ ಪಾರ್ಟಿಯಲ್ಲಿ ಭಾಗವಹಿಸುವವನಿದ್ದ ಎನ್ನಲಾಗಿದೆ. ಆದರೆ ಕೆಲವು ಕಾರಣಗಳಿಂದ ಆಪರ್ತಿ ಗೆ ಹೋಗಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ, ಎನ್‌ಸಿಬಿ (NCB) ಶ್ರೇಯಸ್‌ನನ್ನು ಭಾನುವಾರ ತಡರಾತ್ರಿ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿತ್ತು. ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಇದೀಗ ಆತನನ್ನು ಬಂಧಿಸಲಾಗಿದೆ. 


ಇದನ್ನೂ ಓದಿ : Mumbai Drug Case Updates: ಆರ್ಯನ್ ಖಾನ್ ಸೇರಿದಂತೆ 3 ಆರೋಪಿಗಳು ಅಕ್ಟೋಬರ್ 7 ರವರೆಗೆ ಎನ್‌ಸಿಬಿ ವಶಕ್ಕೆ


ಡ್ರಗ್ಸ್ ಪೂರೈಸಿದ ಪ್ಯಾಡ್ಲರ್ ಕೂಡಾ ಬಂಧನ :
ಇದಷ್ಟೇ ಅಲ್ಲ, ಎನ್‌ಸಿಬಿ ಸೋಮವಾರ ಹೈ ಪ್ರೊಫೈಲ್ ಡ್ರಗ್ ಪ್ಯಾಡ್ಲರ್ (Drug Paddler) ಅನ್ನು ಬಂಧಿಸಿದೆ. ರೇವ್ ಪಾರ್ಟಿಗೆ ಡ್ರಗ್ಸ್ ಪೂರೈಸಿದ್ದು, ಇದೇ ಡ್ರಗ್ ಪೆಡ್ಲರ್. ಎಮ್‌ಡಿಎಂಎಯ ಹಲವು ಮಾತ್ರೆಗಳು ಮತ್ತು  ಮೆಫಾಡ್ರೋನ್ ಔಷಧಿಗಳನ್ನು ಈತನಿಂದ ವಶಕ್ಕೆ ಪಡೆಯಲಾಗಿದೆ. ಈ ಡ್ರಗ್ ಪೆಡ್ಲರ್ ಡ್ರಗ್ಸ್ ಪೂರೈಕೆಗೆ ಆರ್ಡರ್ ತೆಗೆದುಕೊಳ್ಳಲು ಡಾರ್ಕ್ನೆಟ್ (Darknet) ಅನ್ನು ಬಳಸುತ್ತಿದ್ದ. ಮತ್ತು ಬಿಟ್ ಕಾಯಿನ್ ಗಳಲ್ಲಿ (Bitcoins) ಅದರ ಪೇಮೆಂಟ್ ತೆಗೆದುಕೊಳ್ಳುತ್ತಿದ್ದ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ : ವೈರಲ್ ಆಯ್ತು ಆರ್ಯನ್ ಖಾನ್ ವಿಡಿಯೋ, ಸಾಮಾಜಿಕ ಜಾಲತಾಣದಲ್ಲಿ ಹೊರಬಿತ್ತು ಆಕ್ರೋಶ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.