ಮುಂಬೈ: ನಟಿ, ಬಿಜೆಪಿ ಸಂಸದೆ ಮತ್ತು  ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್ ಅವರ  ಪತ್ನಿಯಾದ ಕಿರಣ್​ ಖೇರ್​ ಬ್ಲಡ್ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಕಿರಣ್​ ಖೇರ್ ಅವರು ಚಂಡೀಗಢ ಮತ ಕ್ಷೇತ್ರದ ಬಿಜೆಪಿ ಸಂಸದೆ(BJP MP)ಯಾಗಿದ್ದಾರೆ. ಮಲ್ಟಿಪಲ್​ ಮೈಲೋಮಾ(Multiple Myeloma) ಇದು ಒಂದು ರೀತಿಯ ರಕ್ತದ ಕ್ಯಾನ್ಸರ್​ ಆಗಿದೆ. ಈ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಸಧ್ಯ ಅವರು ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪಕ್ಷದ ಪದಾಧಿಕಾರಿ ಅರುಣ್​ ಸೂದ್​ ತಿಳಿಸಿದ್ದಾರೆ. ಕಳೆದ ವರ್ಷದಿಂದ ಅವರು ಈ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. 


ಸೂಪರ್ ಸ್ಟಾರ್ ರಜನೀಕಾಂತ್ ಗೆ ಪ್ರತಿಷ್ಟಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ


ಈ ಕುರಿತು ಟ್ವೀಟ್ ಮಾಡಿರುವ ಪತಿ ಅನುಪಮ್ ಖೇರ್(Anupam Kher), ಕಿರಣ್ ಕುರಿತು ಹರಿದಾಡುತ್ತಿರುವ ಸುದ್ದಿ ನಿಜ, ಅವಳು ಸಧ್ಯ ಆರೋಗ್ಯದಿಂದ ಇದ್ದಾಳೆ. ಕಿರಣ್  ಮಲ್ಟಿಪಲ್​ ಮೈಲೋಮಾ ಇದು ಒಂದು ರೀತಿಯ ಬ್ಲಡ್ ಕ್ಯಾನ್ಸರ್​ ಆಗಿದೆ. ಈ ಡಿಸೀಜ್ ನಿಂದ ಬಳಲುತ್ತಿದ್ದಾಳೆ. ಪ್ರಸ್ತುತ ಅವಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಆದಷ್ಟು ಬೇಗೆ ಅವಳು ಈ ಗಂಡಾಂತರದಿಂದ ಹೊರಬರುತ್ತಾಳೆ. 


ನಾಳೆಯಿಂದ ದೇಶಾದ್ಯಂತ ಥೇಟರ್ ನಲ್ಲಿ 'ಯುವರತ್ನ'ನ ಪವರ್ ಪ್ಲೇ ಶುರು


ಅವಳು ಹೃದಯವಂತೆ ಹಾಗಾಗಿ ಜನ ಅವಳನ್ನ ಪ್ರೀತಿಸುತ್ತಾರೆ. ಹಾಗೆ ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಅವಳ ಮೇಲಿರಲಿ. ನಮಗೆ ಪ್ರೀತಿ ಹಂಚುತ್ತಿರುವ ತಮ್ಮಲ್ಲರಿಗೂ ಧನ್ಯವಾದಗಳು. ಅನುಪಮ್ ಮತ್ತು ಸಿಕಿಂದರ್.


Malaika Arora: ಗೋಡೆಯ ಮೇಲೆ ನಟಿಯ ಯೋಗ ಕಂಡು ಹುಬ್ಬೇರಿಸಿದ ನೆಟ್ಟಿಗರು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.