ತಾಯಿ ಆಗುವ ಸಂಭ್ರಮದಲ್ಲಿ ಅನುಪ್ರಭಾಕರ್ ಮುಖರ್ಜಿ
ಅನುಗೆ ಪತಿ ರಘು ಮುಖರ್ಜಿ ಶುಭಹಾರೈಸಿದ್ದು ಹೇಗೆ ಗೊತ್ತಾ!
ಬೆಂಗಳೂರು: ಚಂದನವನದ ಖ್ಯಾತ ನಟಿ ಅನುಪ್ರಭಾಕರ್ ಮುಖರ್ಜಿ ತಾಯಿಯಾಗುತ್ತಿದ್ದಾರೆ.
"ಮಹಿಳೆಯೊಬ್ಬಳು ತನ್ನ ಜೀವನದ ಪ್ರಯಾಣದಲ್ಲಿ ಹಲವು ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಾರೆ. ಅನು ಪ್ರಭಾಕರ್ ಮುಖರ್ಜಿ ಕೂಡ ಕೆಲವು ಪಾತ್ರಗಳನ್ನ ನಿರ್ವಹಿಸಿ ಈಗ ಮತ್ತೊಂದು ಹಂತಕ್ಕೆ ಕಾಲಿಡುತ್ತಿದ್ದು, ಓರ್ವ ಅದ್ಭುತ ತಾಯಿಯಾಗಲು ಸಿದ್ಧವಾಗುತ್ತಿದ್ದಾರೆ'' ಎಂದು ಟ್ವೀಟ್ ಮಾಡುವ ಮೂಲಕ ರಘು ಮುಖರ್ಜಿ ಈ ಸಂತಸದ ವಿಷಯವನ್ನು ಹಂಚಿಕೊಂಡಿದ್ದಾರೆ.