Anushka Sharma in Team India jersey : ಬಾಲಿವುಡ್ ನಟಿ ಮತ್ತು ನಿರ್ಮಾಪಕಿ ಅನುಷ್ಕಾ ಶರ್ಮಾ ಅವರು ತಮ್ಮ ಮುಂಬರುವ ಚಿತ್ರಕ್ಕಾಗಿ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಟೀಮ್ ಇಂಡಿಯಾ ಜೆರ್ಸಿಯನ್ನು ಧರಿಸಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರು ಭಾರತೀಯ ವೇಗದ ಬೌಲರ್‌ ಕ್ರಿಕೆಟ್‌ ದಂತಕಥೆ ಜೂಲನ್ ಗೋಸ್ವಾಮಿ ಅವರ ಪಾತ್ರವನ್ನು ನಿರ್ವಹಿಸಲಿದ್ದಾರೆ. 'ಚಕ್ಡಾ ಎಕ್ಸ್‌ಪ್ರೆಸ್' ಎಂಬ ಹೆಸರಿನ ಚಿತ್ರ ಜೂಲನ್ ಗೋಸ್ವಾಮಿ ಅವರ ಜೀವನದ ಕುರಿತಾಗಿದೆ. ಚಿತ್ರಗಳಲ್ಲಿ, ಕ್ರಿಕೆಟರ್‌ ಜೂಲನ್ ಗೋಸ್ವಾಮಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಅನುಷ್ಕಾ, ಕ್ರಿಕೆಟ್ ಜರ್ಸಿ ಮತ್ತು ಬಿಳಿ ಬಣ್ಣದ ಸ್ಪೋರ್ಟ್ ಶೂಗಳನ್ನು ಧರಿಸಿದ್ದು, ಭುಜದ ವರೆಗೆ ಕೂದಲನ್ನು ಬಿಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Rishab Shetty Love Story : ಶೆಟ್ರಿಗೆ ಸ್ಕೂಲಲ್ಲೇ ಲವ್‌ ಆಗಿತ್ತಂತೆ! ರಿಷಬ್‌ ಪ್ರೀತಿಸಿದ ಮೊದಲ ಹುಡುಗಿ ಇವರೇ ಅಂತೆ!!


ಜೂಲನ್ ಗೋಸ್ವಾಮಿ ಭಾರತೀಯ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಿದ್ದರು. ದೇಶದ ಮಹತ್ವಾಕಾಂಕ್ಷಿ ಕ್ರಿಕೆಟಿಗರಿಗೆ ಮಾದರಿಯಾಗಿದ್ದಾರೆ. 2018 ರಲ್ಲಿ, ಆಕೆಯ ಗೌರವಾರ್ಥವಾಗಿ ಭಾರತೀಯ ಅಂಚೆ ಚೀಟಿಯನ್ನು ಸಹ ಬಿಡುಗಡೆ ಮಾಡಲಾಯಿತು. ಜೂಲನ್‌ ಅವರಂತೆ ಹೇರ್‌ ಸ್ಟೈಲ್‌ ಹಾಗೂ ಭಾರತ ಕ್ರಿಕೆಟ್‌ ತಂಡದ ಜೆರ್ಸಿ ಧರಿಸಿದ ಅನುಷ್ಕಾ ಅವರ ಫೋಟೋಗಳು ವೈರಲ್‌ ಆಗಿವೆ.


 


Ashika Ranganath : ತಮಿಳಿನ ಬಳಿಕ ತೆಲುಗು ಸಿನಿಮಾದಲ್ಲಿ ಆಶಿಕಾ ರಂಗನಾಥ್.!


ಪ್ರೋಸಿತ್ ರಾಯ್ ನಿರ್ದೇಶನದ 'ಚಕ್ಡಾ ಎಕ್ಸ್‌ಪ್ರೆಸ್' ಮಹಿಳಾ ಕ್ರಿಕೆಟಿಗರಾದ ಜೂಲನ್ ಗೋಸ್ವಾಮಿ ಅವರ ಜೀವನವನ್ನು ಆಧರಿಸಿದೆ. ಈ ಚಿತ್ರದ ಮೂಲಕ ಸಿನಿರಂಗದಿಂದ ನಾಲ್ಕು ವರ್ಷ ದೂರ ಉಳಿದಿದ್ದ ಅನುಷ್ಕಾ ಕಂಬ್ಯಾಕ್‌ ಮಾಡಲಿದ್ದಾರೆ.  'ಚಕ್ಡಾ ಎಕ್ಸ್‌ಪ್ರೆಸ್' ಭಾರತ ಮತ್ತು ಯುಕೆಯಲ್ಲಿ ಚಿತ್ರೀಕರಣಗೊಳ್ಳಲಿದೆ ಮತ್ತು ಕ್ಲೀನ್ ಸ್ಲೇಟ್ ಫಿಲ್ಮ್ಜ್ ನಿರ್ಮಿಸುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ