Virat Kohli : ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಡಿಯೋ ಮೂಲಕ ಸಂಚಲನ ಮೂಡಿಸಿದ್ದಾರೆ. ಅವರು ತಮ್ಮ ಹೋಟೆಲ್ ಕೋಣೆಯ ವಿಡಿಯೋವನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಾನುವಾರ (ಅಕ್ಟೋಬರ್ 31) ಪರ್ತನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ T20 ವಿಶ್ವಕಪ್ 2022 ಸೂಪರ್ 12 ಪಂದ್ಯದ ನಂತರ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಖಾಸಗಿತನಕ್ಕೆ ಸಂಬಂಧಪಟ್ಟ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿಡಿಯೋ ನೋಡಿದ ಕೊಹ್ಲಿ ಶಾಕ್‌ ಆಗಿದ್ದಾರೆ. ಈ ರೀತಿಯ ಕೆಲಸ ಒಳ್ಳೆಯದಲ್ಲ. ಖಾಸಗಿತನದ ಆಕ್ರಮಣ ಸರಿಯಿಲ್ಲ ಎಂದು ಕೊಹ್ಲಿ ಅಭಿಮಾನಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿರಾಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Kannada Rajyotsava Award 2022 : ಚಂದನವನದ ಮೂವರು ದಿಗ್ಗಜರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ


ವಿರಾಟ್ ಅವರೇ ವಿಡಿಯೋ ಹಂಚಿಕೊಂಡಿದ್ದಾರೆ : 


ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸೋಮವಾರ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಆತನ ಕೋಣೆಯಲ್ಲಿ ಇಟ್ಟಿದ್ದ ವಸ್ತುಗಳೆಲ್ಲವೂ ಕಾಣುತ್ತವೆ. ಇದರಲ್ಲಿ, ಲಕ್ಷ್ಮಿ, ಗಣೇಶ ವಿಗ್ರಹವನ್ನು ಅವರ ಮೇಜಿನ ಮೇಲೆ ಬಿಳಿ ಬಟ್ಟೆಯ ಮೇಲೆ ಇರಿಸಲಾಗಿರುವುದನ್ನು ನೋಡಬಹುದು. ಕ್ಯಾಪ್‌ಗಳು, ಕನ್ನಡಕ ಮತ್ತು ಗಡಿಯಾರದ ಪೆಟ್ಟಿಗೆ ಸಹ ಗೋಚರಿಸುತ್ತವೆ. ಕೋಣೆಯಲ್ಲಿ ಇರಿಸಲಾಗಿರುವ ಹಲವಾರು ಶೂಗಳು ಮತ್ತು ಟೀಮ್ ಜರ್ಸಿ ಸೆಟ್‌ಗಳು ಸಹ ಗೋಚರಿಸುತ್ತವೆ. 


ಅನುಷ್ಕಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ : 


ವಿರಾಟ್ ವಿಡಿಯೋಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿಯೇ ವಿರಾಟ್ ಅವರ ಪೋಸ್ಟ್‌ನಲ್ಲಿ ಅವರು ಕೆಲವು ಸಾಲುಗಳನ್ನು ಬರೆದಿದ್ದಾರೆ. ಅನುಷ್ಕಾ ಶರ್ಮಾ ತಮ್ಮ ಪೋಸ್ಟ್‌ನಲ್ಲಿ "ನಮ್ಮೊಂದಿಗೆ ಇಂತಹ ಅನೇಕ ಘಟನೆಗಳು ನಡೆದಿವೆ. ಆದರೆ ಇದು ಅತ್ಯಂತ ಕೆಟ್ಟದು. ಇದು ಸಾಕಷ್ಟು ಅವಮಾನಕರವಾಗಿದೆ. ನಿಮ್ಮನ್ನು ನಿಯಂತ್ರಿಸಿಕೊಳ್ಳುವುದು ಎಲ್ಲರಿಗೂ ಸಹಾಯ ಮಾಡಬಹುದು. ನಿಮ್ಮ ಬೆಡ್ ರೂಮಿನಲ್ಲೇ ಇದೆಲ್ಲಾ ನಡೆದರೆ?" ಎಂದು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ : SHOCKING!.. ವಿರಾಟ್ ಕೊಹ್ಲಿ‌ ಪ್ರೈವೇಟ್‌ ರೂಮ್‌ ವಿಡಿಯೋ ಲೀಕ್‌ : ಬೇಸರ ವ್ಯಕ್ತಪಡಿಸಿದ ಕಿಂಗ್‌..


ಈ ವಿಡಿಯೋವನ್ನು ಹಂಚಿಕೊಂಡಿರುವ ವಿರಾಟ್ ಕೊಹ್ಲಿ, "ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನನ್ನು ನೋಡಲು ತುಂಬಾ ಸಂತೋಷಪಟ್ಟಿದ್ದಾರೆ ಎಂಬುದನ್ನು ನಾನು ಒಪ್ಪುತ್ತೇನೆ. ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ. ನಾನು ಯಾವಾಗಲೂ ಅದನ್ನು ಪ್ರಶಂಸಿಸುತ್ತೇನೆ ಆದರೆ ಈ ವಿಡಿಯೋ ತುಂಬಾ ಅಪಾಯಕಾರಿ. ಇದು ನನಗೆ ಖಾಸಗಿತನದ ಬಗ್ಗೆ ತುಂಬಾ ಕೆಟ್ಟ ಭಾವನೆ ಮೂಡಿಸಿದೆ. ನನ್ನ ಹೋಟೆಲ್ ಕೋಣೆಯಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ನನಗೆ ಸಾಧ್ಯವಾಗದಿದ್ದರೆ ಹೇಗೆ? ಅಂತಹ ಖಾಸಗಿತನದ ಸಂಪೂರ್ಣ ಉಲ್ಲಂಘನೆಯನ್ನು ನಾನು ಒಪ್ಪುವುದಿಲ್ಲ. ದಯವಿಟ್ಟು ಜನರ ಗೌಪ್ಯತೆಯನ್ನು ಗೌರವಿಸಿ ಮತ್ತು ಅವರನ್ನು ಮನರಂಜನೆ ಎಂದು ಪರಿಗಣಿಸಬೇಡಿ" ಎಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.