Kannada Rajyotsava Award 2022 : ಚಂದನವನದ ಮೂವರು ದಿಗ್ಗಜರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Kannada Rajyotsava Award 2022 : ಚಂದನವನದ ಮೂವರು ದಿಗ್ಗಜರು ಸೇರಿ ಈ ಬಾರಿ ಸುಮಾರು 67 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ.

Written by - Chetana Devarmani | Last Updated : Oct 31, 2022, 12:34 PM IST
  • ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2022 ರ ವಿಜೇತರ ಪಟ್ಟಿ ಪ್ರಕಟ
  • ಈ ಬಾರಿ ಸುಮಾರು 67 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
  • ಚಂದನವನದ ಮೂವರು ದಿಗ್ಗಜರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
Kannada Rajyotsava Award 2022 : ಚಂದನವನದ ಮೂವರು ದಿಗ್ಗಜರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ title=
ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Kannada Rajyotsava Award 2022 : ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2022 ರ ವಿಜೇತರ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರತಿವರ್ಷ ಕನ್ನಡದ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಬಾರಿ ಸುಮಾರು 67 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕನ್ನಡಿಗರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪತ್ರಿಕೋದ್ಯಮ, ಕೃಷಿ, ಸಂಕೀರ್ಣ, ಸೈನಿಕ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಪೌರಕಾರ್ಮಿಕ, ಆಡಳಿತ, ಹೊರನಾಡು, ಹೊರದೇಶ, ವೈದ್ಯಕೀಯ, ರಂಗಭೂಮಿ, ಸಂಗೀತ, ಜಾನಪದ, ಸಿನಿಮಾ ಕ್ಷೇತ್ರದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ 2022 ಅನ್ನು ನೀಡಲಾಗುತ್ತಿದೆ.

ಈ ಬಾರಿ 67 ಸಾಧಕರಲ್ಲಿ ಸಿನಿಮಾ ಕ್ಷೇತ್ರಕ್ಕೆ ಸೇರಿದವರೂ ಇದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟ ದತ್ತಣ್ಣ ಹಾಗೂ ಅವಿನಾಶ್ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಅಲ್ಲದೇ ಕಿರುತೆರೆ ವಿಭಾಗದಿಂದ ಸಿಹಿ ಕಹಿ ಚಂದ್ರು ಅವರಿಗೆ ಕೂಡ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. 

ಇದನ್ನೂ ಓದಿ : Watch Video : ಸ್ಟಂಟ್‌ ಶೂಟಿಂಗ್‌ ವೇಳೆ ಕಾಲು ಮುರಿದುಕೊಂಡ ಟೈಗರ್‌ ಶ್ರಾಫ್‌...!

ನಾಲ್ಕು ದಶಕಗಳ ಸೇವೆಗೆ ಸಂದ ಗೌರವ : 

ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಕನ್ನಡ ಸಿನಿರಂಗದ ಹಿರಿಯ ನಟ ದತ್ತಣ್ಣ ಚಿತ್ರರಂಗಕ್ಕೆ ಕಾಲಿಟ್ಟರು. ಅಲ್ಲಿಂದ ದತ್ತಣ್ಣ ಸುಮಾರು ನಾಲ್ಕು ದಶಕಗಳ ಕಾಲ ಕನ್ನಡ ಸಿನಿರಂಗಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ಹಿಂದಿ ಭಾಷೆಯ ಸಿನಿಮಾಗಳಲ್ಲಿಯೂ ದತ್ತಣ್ಣ ಅಭಿನಯಿಸಿದ್ದಾರೆ. ಅಲ್ಲದೇ ಕನ್ನಡದ ಮತ್ತೋರ್ವ ಹಿರಿಯ ನಟ ಅವಿನಾಶ್ ಸಹ ನಾಲ್ಕು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಭಾಷೆಯ ಸಿನಿಮಾಗಳಲ್ಲಿ ಅವಿನಾಶ್‌ ನಟಿಸಿದ್ದಾರೆ.

ಕಿರುತೆರೆ ವಿಭಾಗದಲ್ಲಿ ಸಿಹಿ ಕಹಿ ಚಂದ್ರುಗೆ ಪ್ರಶಸ್ತಿ : 

ಕಿರುತೆರೆ ವಿಭಾಗದಲ್ಲಿ ಸಿಹಿ ಕಹಿ ಚಂದ್ರು ಅವರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸಿಹಿ ಕಹಿ ಚಂದ್ರು ಕನ್ನಡ ಕಿರುತೆರೆ ಮಾತ್ರವಲ್ಲದೇ, ಸಿನಿಮಾಗಳಲ್ಲಿಯೂ ಕೊಡುಗೆ ನೀಡಿದ್ದಾರೆ. ಪಾಪ ಪಾಂಡು, ಸಿಲ್ಲಿ ಲಲ್ಲಿ ಸೇರಿದಂತೆ ಹಲವು ಧಾರಾವಾಹಿಗಳನ್ನು ನಿರ್ಮಿಸಿದ್ದಾರೆ. ನಟ, ನಿರ್ದೇಶಕಹಾಗೂ ನಿರ್ಮಾಪಕರಾಗಿ ಸಿಹಿಕಹಿ ಚಂದ್ರು ಕನ್ನಡ ಕಿರುತೆರೆಗೆ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : SOMTHING ಸ್ಪೆಷಲ್ ಕೊಡಲು ಬರುತ್ತಿದೆ 'ಸ್ಪೂಕಿ ಕಾಲೇಜು'..! ಅತೀ ಶೀಘ್ರದಲ್ಲಿ ಶುರುವಾಗುತ್ತೆ ಅಡ್ಮಿಶನ್

ನವೆಂಬರ್ 1 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿವಿಧ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಗೆದ್ದ ಗಣ್ಯರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದಾರೆ. ಇದೇ ಮೊದಲ ಬಾರಿಗೆ ಪ್ರಶಸ್ತಿ ಗೆದ್ದವರಿಗೆ 5 ಲಕ್ಷ ರೂ. ನಗದು ಹಾಗೂ 25 ಗ್ರಾಂ ಬಂಗಾರ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News