Anushka Shetty: ಇಂದು ಅನುಷ್ಕಾ ಶೆಟ್ಟಿ 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅನುಷ್ಕಾ ಚಿತ್ರರಂಗಕ್ಕೆ ಬಂದು ಸುಮಾರು 18 ವರ್ಷಗಳಾಗಿವೆ. ಸದ್ಯ ಮದುವೆ ಬೇಡ ಎಂದಿರುವ ಅನುಷ್ಕಾಗೆ ಅಫೇರ್ ವದಂತಿಗಳು ಹೊಸದೇನಲ್ಲ.


COMMERCIAL BREAK
SCROLL TO CONTINUE READING

ಸೋಶಿಯಲ್ ಮೀಡಿಯಾದಲ್ಲಿ ಅನುಷ್ಕಾ ತುಂಬಾ ಮೌನವಾಗಿದ್ದಾರೆ. ಅವರು ತಮ್ಮ ಕುಟುಂಬ ಮತ್ತು ಹತ್ತಿರದ ವ್ಯಕ್ತಿಗಳಿಗೆ ಸಂಬಂಧಿಸಿದ ವಿಷಯಗಳಿಗೆ ಮಾತ್ರ ಪ್ರತಿಕ್ರಿಯಿಸುತ್ತಾರೆ. ಮಿಸ್ ಪರ್ಫೆಕ್ಟ್ ಅನುಷ್ಕಾ, ಅಫೇರ್ ವದಂತಿಗಳ ಸರಮಾಲೆಯನ್ನೇ ಹಾಕಿಕೊಂಡಿದ್ದಾರೆ. 


ಇದನ್ನೂ ಓದಿ-ಅಕಸ್ಮಾತ್‌ ನಾನು ಅವಳನ್ನ ಕೊಂದಿದ್ದರೆ... ಐಶ್ವರ್ಯ ರೈ ಕುರಿತು ಸಲ್ಮಾನ್‌ ಶಾಕಿಂಗ್‌ ಹೇಳಿಕೆ!


ಅದರಲ್ಲೂ ಪ್ರಭಾಸ್ ಮತ್ತು ಅನುಷ್ಕಾ ಮದುವೆ ವಿಚಾರ ಬಹಳ ದಿನಗಳಿಂದ ನಡೆಯುತ್ತಿದೆ. ನಮ್ಮಿಬ್ಬರ ನಡುವೆ ಏನೂ ಇಲ್ಲ, ಒಳ್ಳೆ ಫ್ರೆಂಡ್ಸ್ ಅಷ್ಟೇ ಎಂದು ಇಬ್ಬರೂ ಎಷ್ಟು ಸಾರಿ ಹೇಳಿದರೂ ಅಭಿಮಾನಿಗಳು, ಮಾಧ್ಯಮಗಳು ನಂಬುತ್ತಿಲ್ಲ. ಸಾಹೋ ಚಿತ್ರದ ಪ್ರಚಾರಕ್ಕಾಗಿ ಪ್ರಭಾಸ್ ಇಡೀ ದೇಶವನ್ನು ಸುತ್ತಿದರು. ಹೋದಲ್ಲೆಲ್ಲಾ ಕೇಳುತ್ತಿದ್ದ ಪ್ರಶ್ನೆ..ಅನುಷ್ಕಾ ಜೊತೆ ಮದುವೆ. ಆದರೆ ಪ್ರಭಾಸ್ ಮೊದಲು ಅನುಷ್ಕಾ ಬಗ್ಗೆ ಕೆಲವು ಅಫೇರ್ ವದಂತಿಗಳು ಹಬ್ಬಿದ್ದವು. 


ನಾಯಕ ಗೋಪಿಚಂದ್-ಅನುಷ್ಕಾ ಪ್ರೀತಿಸುತ್ತಿದ್ದರು ಎಂಬ ಮಾತು ಕೇಳಿ ಬಂದಿತ್ತು. ಯಜ್ಞಂ ಚಿತ್ರದ ಮೂಲಕ ನಾಯಕನಾಗಿ ಗುರುತಿಸಿಕೊಂಡ ಗೋಪಿಚಂದ್ ಟಾರ್ಗೆಟ್ ರೂಪದಲ್ಲಿ ಭರ್ಜರಿ ಹಿಟ್ ಗಳಿಸಿದರು. ಈ ಚಿತ್ರದಲ್ಲಿ ಗೋಪಿ ಚಂದ್‌ಗೆ ಜೋಡಿಯಾಗಿ ಅನುಷ್ಕಾ ಶೆಟ್ಟಿ ನಟಿಸಿದ್ದರು. ಅದಾದ ನಂತರ ಇವರಿಬ್ಬರ ಕಾಂಬಿನೇಷನ್ ನಲ್ಲಿ ಶೌರ್ಯಂ ಸಿನಿಮಾ ಬಂದಾಗ ಅದು ಕೂಡ ಯಶಸ್ಸು ಕಂಡಿತ್ತು. ಈ ವೇಳೆ ಅನುಷ್ಕಾ ಹಾಗೂ ಗೋಪಿಚಂದ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸರಮಾಲೆ ಕಥೆಗಳು ಹೊರಬಿದ್ದವು. ಆದರೆ ಆ ವದಂತಿಗಳು ವದಂತಿಗಳಾಗಿಯೇ ಉಳಿದಿವೆ. 


ಬೆಳ್ಳಿತೆರೆಯಲ್ಲಿ ಇವರಿಬ್ಬರ ಕೆಮಿಸ್ಟ್ರಿ ಅದ್ಭುತವಾಗಿರುವ ಹಿನ್ನಲೆಯಲ್ಲಿ ಪ್ರೇಕ್ಷಕರು ಕೂಡ ಅವರ ನಡುವೆ ಏನೋ ಇದೆ ಎಂದು ಹೇಳಿದ್ದರು. ಈ ವಿಚಾರದಲ್ಲಿ ಅನುಷ್ಕಾ ಮತ್ತು ಗೋಪಿಚಂದ್ ಮೌನವಾಗಿದ್ದರು. ಆದರೆ 2013ರಲ್ಲಿ ಶ್ರೀಕಾಂತ್ ಅವರ ಸೊಸೆಯನ್ನು ಗೋಪಿಚಂದ್ ಮದುವೆಯಾದರು.


ಇದನ್ನೂ ಓದಿ-Anushka Shetty: ಅನುಷ್ಕಾ ಅಭಿಮಾನಿಗಳಿಗೆ ಗುಡ್ ನ್ಯೂಸ್.. ಸ್ವೀಟಿ 50ನೇ ಪ್ರಾಜೆಕ್ಟ್‌ ಆ ಹಿಟ್ ಸಿನಿಮಾದ ಸೀಕ್ವೆಲ್!


ನಾಗಾರ್ಜುನ ಜೊತೆ ಅನುಷ್ಕಾ ಉತ್ತಮ ಬಾಂಧವ್ಯವನ್ನು ಹೊಂದಿರುವ ಅನುಷ್ಕಾ ಚೊಚ್ಚಲ ಸಿನಿಮಾ ಸೂಪರ್ ನಲ್ಲಿ ನಾಗಾರ್ಜುನ ಜೊತೆ ನಟಿಸಿದ್ದರು. ಇದಾದ ಬಳಿಕ ಕೆಡಿ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದರು. ಹೀಗಾಗಿ ನಾಗಾರ್ಜುನ ಮತ್ತು ಅನುಷ್ಕಾ ನಡುವೆ ಅನೈತಿಕ ಸಂಬಂಧವಿದೆ ಎಂಬ ವರದಿಗಳು ಬಂದಿದ್ದವು. 


ಆಗ ಹತ್ತು ವರ್ಷಗಳ ಹಿಂದೆ ರಾಜಮೌಳಿ ಅವರ ಆಸ್ಥಾನದ ಸಿನಿಮಾಟೋಗ್ರಾಫರ್ ಕೆ.ಕೆ.ಸೆಂಥಿಲ್ ಕುಮಾರ್ ಮತ್ತು ಅನುಷ್ಕಾ ನಡುವೆ ಪ್ರೇಮಾಂಕುರವಾಗಿತ್ತು ಎಂಬ ಸುದ್ದಿ ಇತ್ತು. ಸೆಂಥಿಲ್ ಕುಮಾರ್ ಮತ್ತು ಅನುಷ್ಕಾ ಮದುವೆಯ ಸುದ್ದಿ ಅಂದು ಸಂಚಲನ ಮೂಡಿಸಿತ್ತು. ಆದರೆ 2009 ರಲ್ಲಿ ಸೆಂಥಿಲ್ ಕುಮಾರ್ ರೂಹಿ ಎಂಬ ಹುಡುಗಿಯನ್ನು ವಿವಾಹವಾದರು. ಅನುಷ್ಕಾ ಇವರ ಮದುವೆಯಲ್ಲಿ ಪಾಲ್ಗೊಂಡು ಸದ್ದು ಮಾಡಿದ್ದರು.
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.